ತೆಂಕಕಾರಂದೂರು: ತಾರೆದೊಟ್ಟು ಅಂಗನವಾಡಿಯಲ್ಲಿ ಮಕ್ಕಳ ದಿನಾಚರಣೆ
ತೆಂಕಕಾರಂದೂರು: ತಾರೆ ದೊಟ್ಟು ಅಂಗನವಾಡಿ ಕೇಂದ್ರದಲ್ಲಿ ನ. 14ರಂದು ಮಕ್ಕಳ ದಿನಾಚರಣೆ ಕಾರ್ಯಕ್ರಮವು ಪುಟಾಣಿಗಳಾದ ಸಾತ್ವಿಕ್ ಪಿ ಆರ್, ದೃತಿ, ಹರೀಶ್,ಚಾರ್ವಿ ಸಾತ್ವಿಕ, ತುಷಾರ್, ಅದ್ವಿತ ಇವರ ಪ್ರಾರ್ಥನೆಯೊಂದಿಗೆ ಪ್ರಾರಂಭಿಸಲಾಯಿತು .
ಕಾರ್ಯಕ್ರಮವನ್ನು ಪುಟಾಣಿಗಳು ದೀಪ ಬೆಳಗಿಸಿ ಉದ್ಘಾಟಿಸಿದರು. ಸಭಾಧ್ಯಕ್ಷತೆಯನ್ನು ವಿಶ್ವನಾಥ ಲಿಂಗಾಯತ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ನಾಗವೇಣಿ ಮೇಲ್ವಿಚಾರಕರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಬೆಳ್ತಂಗಡಿ ಇವರು ಪ್ರಾಸ್ತಾವಿಕವಾಗಿ ಮಾತನಾಡಿ ಮಕ್ಕಳಿಗೆ ಶುಭ ಹಾರೈಸಿದರು.
ಅಬ್ದುಲ್ ಖಾದರ್ ಕರಂಬಾರು ಇವರು ಸರಕಾರಿ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಆರೋಗ್ಯ ಕಾರ್ಯರ್ತೆ ಮೋಹಿನಿ ಇವರು ಮೆದುಳು ಜ್ವರದ ಚುಚ್ಚುಮದ್ದು 0-15ರ ವರ್ಷದೊಳಗಿನ ಮಕ್ಕಳಿಗೆ ನೀಡುವುದರ ಬಗ್ಗೆ ಮಾಹಿತಿ ನೀಡಿದರು.
ಸಿ. ಎಚ್. ಒ .ಅಶ್ವಿನಿ ರವರು ಡಯಾಬಿಟಿಸ್ ರೋಗದ ಲಕ್ಷಣಗಳು ಹಾಗೂ ಅದನ್ನು ತಡೆಗಟ್ಟುವಿಕೆಯ ಬಗ್ಗೆ ಮಾಹಿತಿ ನೀಡಿದರು ವೇದಿಕೆಯಲ್ಲಿ ಸಲಹಾ ಸಮಿತಿ ಗೌ ರಾಧ್ಯಕ್ಷರಾದ ಚಂದ್ರ ಪೂಜಾರಿ, ಎಂ ಸಿ ನಾರಾಯಣ ಗೌಡ ಸಲಹ ಸಮಿತಿಯ ಅಧ್ಯಕ್ಷರಾದ ಶಿವಪ್ರಸಾದ್ ಕಂ ಬ್ಲಾ ಜೆ , ಬಾಲ ವಿಕಾಸ ಸಮಿತಿಯ ಅಧ್ಯಕ್ಷೆ ವೇದಾವತಿ,ಸುಜಾತಾ, ಪೂರ್ಣಿಮಾ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಚೆನ್ನಪ್ಪ ಶೆಟ್ಟಿ ತಾರಿದೊಟ್ಟು,ಸುಂದರ ಲಿಂಗಾಯಿತ ಪ್ರಕಾಶ್ ಹೆಗ್ಡೆ,ವಿಶಾಲಾಕ್ಷಿ,ಚಂದ್ರಾವತಿ ಮಕ್ಕಳ ತಾಯಂದಿರು ಪೋಷಕರು, ಊರಿನವರು ಉಪಸ್ಥಿತರಿದ್ದರು ಮಕ್ಕಳಿಗೆ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮವನ್ನು ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಮನಿತಾ . ಸಿ . ಶೆಟ್ಟಿ ನಿರ್ಮಿಸಿದರು ಗುಲಾಬಿ ವಂದಿಸಿದರು, ಅಂಗನವಾಡಿ ಸಹಾಯಕಿ ಸುನಂದ, ಸುಮಲತಾ, ಶೃತಿ ಮೀನಾಕ್ಷಿ, ಸುರೇಖಾ,ಸುಷ್ಮಾ, ಚಿಂಜೂ, ಬಳಂಜ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಹೇಮಂತ್,ಮೋಹಿನಿ, ಗುಣಶ್ರೀ ನಿರೂಪಿಸಿದರು.