• September 8, 2024

ಕರಾವಳಿಯಾದ್ಯಂತ ಕೆಂಗಣ್ಣು ಕಾಯಿಲೆ: ಮಕ್ಕಳಲ್ಲಿ ಹೆಚ್ಚುತ್ತಿರುವ ಸಮಸ್ಯೆ

 ಕರಾವಳಿಯಾದ್ಯಂತ ಕೆಂಗಣ್ಣು ಕಾಯಿಲೆ: ಮಕ್ಕಳಲ್ಲಿ ಹೆಚ್ಚುತ್ತಿರುವ ಸಮಸ್ಯೆ

ಕರಾವಳಿಯಾದ್ಯಂತ ಕೆಂಗಣ್ಣು ಕಾಯಿಲೆ ಹರಡುತ್ತಿದ್ದು, ಜನ ಆತಂಕಕ್ಕೊಳಗಾಗಿದ್ದಾರೆ. ಮಕ್ಕಳಲ್ಲಿ ಸಮಸ್ಯೆ ಹೆಚ್ಚು ಕಾಣಿಸಿಕೊಳ್ಳುತ್ತಿದೆ.

ಜಿಲ್ಲೆಯ ಇತರ ಭಾಗಗಳಲ್ಲಿ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಒಬ್ಬರಿಂದ ಇನ್ನೊಬ್ಬರಿಗೆ ಹರಡುವ ಕಾಯಿಲೆ ಇದಾಗಿದ್ದು, ಮನೆ, ಶಾಲೆ, ಆಸ್ಪತ್ರೆ ,ಮಾರ್ಕೆಟ್ ಸೇರಿದಂತೆ ಸಾರ್ವಜನಿಕ ಸ್ಥಳಗಳಿಗೆ ತೆರಳುವ ಕಾಯಿಲೆ ಇದ್ದವರಿಂದ ಇತರರಿಗೂ ಹಬ್ಬುತ್ತಿದೆ.

ಇನ್ನು ಮೆದುಳು ಜ್ವರ ಲಸಿಕೆಯ ಸರ್ವೇಗೆಂದು ಮನೆ ಮನೆ ಭೇಟಿ ನೀಡುವ ಆಶಾ ಕಾರ್ಯಕರ್ತೆಯರಲ್ಲಿಯೂ ಜ್ವರ ಕಾಣಿಸಿಕೊಳ್ಳುತ್ತಿದೆ. ತಿಂಗಳ ಚುಚ್ಚುಮದ್ದಿಗಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡುವ ಕೆಂಗಣ್ಣು ಕಾಯಿಲೆ ಇರುವ ತಾಯಿ ಮಕ್ಕಳನ್ನು ಮೆನ್ನೆಚ್ಚರಿಕಾ ಕ್ರಮವಾಗಿ ವಾಪಾಸ್ ಕಳುಹಿಸಲಾಗುತ್ತಿದ್ದು ಒಂದು ವಾರ ಬಿಟ್ಟು ಬರುವಂತೆ ಹೇಳಲಾಗುತ್ತಿದೆ.

ಇನ್ನು ಡಿ.5ರಿಂದ ಮಕ್ಕಳಿಗೆ ಮೆದುಳು ಜ್ವರ ವಿರುದ್ಧ ಲಸಿಕೆ ಕಾರ್ಯಕ್ರಮ ಆರಂಭವಾಗಲಿದೆ.

Related post

Leave a Reply

Your email address will not be published. Required fields are marked *

error: Content is protected !!