• October 16, 2024

ಬೆಳ್ತಂಗಡಿ: ಶಿಸ್ತಿನ ಸಿಪಾಯಿ, ರಾಷ್ಟ್ರೀಯ ಹಬ್ಬಗಳಲ್ಲಿ ಭಾಗವಹಿಸಿ, ಪಥಸಂಚಲನಕ್ಕೆ ಮಾರ್ಗದರ್ಶನ ನೀಡುತ್ತಿದ್ದ ಎಂ.ಆರ್ ಜೈನ್ ವಿಧಿವಶ

 ಬೆಳ್ತಂಗಡಿ: ಶಿಸ್ತಿನ ಸಿಪಾಯಿ,  ರಾಷ್ಟ್ರೀಯ ಹಬ್ಬಗಳಲ್ಲಿ ಭಾಗವಹಿಸಿ, ಪಥಸಂಚಲನಕ್ಕೆ ಮಾರ್ಗದರ್ಶನ ನೀಡುತ್ತಿದ್ದ ಎಂ.ಆರ್ ಜೈನ್ ವಿಧಿವಶ

 

ಬೆಳ್ತಂಗಡಿ: ನಿವೃತ್ತ ಯೋಧ, ಶಿಸ್ತಿನ ಸಿಪಾಯಿ, ಬೆಳ್ತಂಗಡಿ ಜೈನ್ ಪೇಟೆ ನಿವಾಸಿ, ವೇಣೂರು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಐಟಿಐ ಯ ನೇಮಕಾತಿ ಅಧಿಕಾರಿ ಎಂ.ಆರ್ ಜೈನ್(77) ಅಲ್ಪಕಾಲದ ಅಸೌಖ್ಯದಿಂದ ನ.12ರಂದು ವಿಧಿವಶರಾದರು.

ಎಲ್ಲರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿದ್ದ ಇವರು 1986ರಲ್ಲಿ ವೇಣೂರಿನ ಕೈಗಾರಿಕಾ ತರಬೇತಿ ಸಂಸ್ತೆಯ ಸ್ಥಾಪಕ ಪ್ರಾಚಾರ್ಯರಾಗಿ ಸಂಸ್ಥೆಯನ್ನು  ಯಶಸ್ವಿಯಾಗಿ ಮುನ್ನಡೆಸಿಕೊಂಡು ಬಂದಿದ್ದರು. ನಿವೃತ್ತಿಯ ಬಳಿಕ ಇದುವರೆಗೂ ಸಂಸ್ತೆಯ ನೇಮಕಾತಿ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು.

ಸೇನೆಯಿಂದ ನಿವೃತ್ತಿಯ ಬಳಿಕ ಬೆಳ್ತಂಗಡಿ ತಾಲೂಕು ಕೇಂದ್ರದಲ್ಲಿ ನಡೆಯುತ್ತಿರುವ ಸ್ವಾತಂತ್ರೋತ್ಸವ, ಕನ್ನಡ ರಾಜೋತ್ಸವ, ಗಣರಾಜೋತ್ಸವ ಸೇರಿದಂತೆ ರಾಷ್ಟ್ರೀಯ ಹಬ್ಬಗಳಲ್ಲಿ ಭಾಗವಹಿಸಿ, ಪಥಸಂಚಲನಕ್ಕೆ ಮಾರ್ಗದರ್ಶನ ನೀಡುತ್ತಿದ್ದರು.

ಮೃತರು ಪತ್ನಿ, ಒಂದು ಗಂಡು, ಮೂರು ಹೆಣ್ಣು ಮಕ್ಕಳನ್ನು ಬಂಧು, ವರ್ಗದವರನ್ನು ಅಗಲಿದ್ದಾರೆ.

Related post

Leave a Reply

Your email address will not be published. Required fields are marked *

error: Content is protected !!