• November 22, 2024

ಅಕ್ಷರ ಸಂತ ಹರೇಕಳ ಹಾಜಬ್ಬ ಅವರ ಬೇಡಿಕೆಗೆ ಗ್ರೀನ್ ಸಿಗ್ನಲ್ ನೀಡಿದ ಸರ್ಕಾರ: ಪಿಯು ಕಾಲೇಜು ಮಂಜೂರುಗೊಳಿಸಿ ಆದೇಸ ಹೊರಡಿಸಿದ ಸರ್ಕಾರ

 ಅಕ್ಷರ ಸಂತ ಹರೇಕಳ ಹಾಜಬ್ಬ ಅವರ ಬೇಡಿಕೆಗೆ ಗ್ರೀನ್ ಸಿಗ್ನಲ್ ನೀಡಿದ ಸರ್ಕಾರ: ಪಿಯು ಕಾಲೇಜು ಮಂಜೂರುಗೊಳಿಸಿ ಆದೇಸ ಹೊರಡಿಸಿದ ಸರ್ಕಾರ

 

ಮಂಗಳೂರು: ಅಕ್ಷರ ಸಂತ ಹರೇಕಳ ಹಾಜಬ್ಬ ಅವರ ಬೇಡಿಕೆ ಕೊನೆಗೂ ಈಡೇರಿದೆ. ಹಾಜಬ್ಬ ಮನವಿಗೆ ಕೊನೆಗೂ ಸರ್ಕಾರ ಅಸ್ತು ಎಂದಿದೆ. ಹಾಜಬ್ಬ ಅವರಿಗೆ ರಾಜ್ಯ ಸರಕಾರ ಪಿಯು ಕಾಲೇಜು ಮಂಜೂರುಗೊಳಿಸಿ ಆದೇಶ ಹೊರಡಿಸಿದೆ.

ಇಂಗ್ಲಿಷ್ ಬಾರದೆ ಶಾಲೆ ಆರಂಭಿಸಲು ಕನಸು ಕಂಡು ಹರೇಕಳ ಹಾಜಬ್ಬ ತಾನು ಅನುಭವಿಸಿದ ಕಷ್ಟ ನನ್ನ ಊರಿನ ಮಕ್ಕಳು ಪಡಬಾರದು ಎಂದು ಶಾಲೆ ಕಟ್ಟಲು ಪಣ ತೊಟ್ಟರು. ಹಾಜಬ್ಬ ನಿರ್ಮಿಸಿದ ಹರೇಕಳದ ನ್ಯೂಪಡು ಸರಕಾರಿ ಶಾಲೆ ಇಂದು ಅದೆಷ್ಟೋ ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡಲು ಕಾರಣವಾಗಿದೆ. ಪುಟ್ಟ ಹಳ್ಳಿಯಲ್ಲಿ ಶಾಲೆ ನಿರ್ಮಿಸಿ ನಂತರ ಕಾಲೇಜು ನಿರ್ಮಾಣದ ಕನಸು ಕಂಡ ಹಾಜಬ್ಬರ ಕನಸು ಈಡೇರುತ್ತಿದೆ.

ಹಲವು ವರ್ಷಗಳಿಂದ ಹಾಜಬ್ಬ ಪಿಯು ಕಾಲೇಜಿಗಾಗಿ ಜನಪ್ರತಿನಿಧಿಗಳನ್ನು ಭೇಟಿ ಮಾಡಿ ಮನವಿಗಳನ್ನು ಸಲ್ಲಿಸುತ್ತಿದ್ದರು. ಪದ್ಮಶ್ರೀ ಪುರಸ್ಕೃತರಾದ ಅವರ ಬೇಡಿಕೆಗೆ ಹೆಚ್ಚಿನ ಮನ್ನಣೆ ಸಿಕ್ಕಿತು. ಇದೀಗ ಕರ್ನಾಟಕ ರಾಜ್ಯೋತ್ಸವದ ಉಡುಗೊರೆ ಎಂಬಂತೆ ಪಿಯು ಕಾಲೇಜು ಮಂಜೂರುಗೊಳಿಸಲಾಗಿದೆ.

Related post

Leave a Reply

Your email address will not be published. Required fields are marked *

error: Content is protected !!