• September 8, 2024

ಪುದುವೆಟ್ಟು: ಅಕ್ರಮ ಗೋಸಾಗಾಟ: ಆರೋಪಿಗಳನ್ನು ಪೊಲೀಸರಿಗೊಪ್ಪಿಸಿದ ಪುದುವೆಟ್ಟು ಕಾಯರ್ತಡ್ಕ ಬಜರಂಗದಳ ಕಾರ್ಯಕರ್ತರು: 6 ಗೋವುಗಳ ರಕ್ಷಣೆ

 ಪುದುವೆಟ್ಟು: ಅಕ್ರಮ ಗೋಸಾಗಾಟ: ಆರೋಪಿಗಳನ್ನು  ಪೊಲೀಸರಿಗೊಪ್ಪಿಸಿದ ಪುದುವೆಟ್ಟು ಕಾಯರ್ತಡ್ಕ ಬಜರಂಗದಳ ಕಾರ್ಯಕರ್ತರು: 6 ಗೋವುಗಳ ರಕ್ಷಣೆ

ನೆರಿಯ: ಕಾಯರ್ತಡ್ಕದಿಂದ ಅಣಿಯೂರಿಗೆ ಪಿಕಪ್ ನಲ್ಲಿ ಅಕ್ರಮವಾಗಿ ಗೋವುಗಳನ್ನು ಸಾಗಿಸುತ್ತಿದ್ದ ವೇಳೆ ಖಚಿತ ಮಾಹಿತಿ ತಿಳಿದ ಪುದುವೆಟ್ಟು ಕಾಯರ್ತಡ್ಕ ಬಜರಂಗದಳ ಕಾರ್ಯಕರ್ತರು ಮಿಂಚಿನ ಕಾರ್ಯಚರಣೆ ನಡೆಸಿ, ಆರೋಪಿಗಳನ್ನು ನಿಖರ ಮಾಹಿತಿ ಮೇರೆಗೆ ಪುದುವೆಟ್ಟು ಕಾಯರ್ತಡ್ಕ ಬಜರಂಗದಳ ಕಾರ್ಯಕರ್ತರು ತಡೆದು ಪರಿಶೀಲಿಸಿದಾಗ 6 ಗೋವುಗಳು ಪತ್ತೆಯಾಗಿರುವ ಘಟನೆ ನ. 2 ರಂದು ಪುದುವೆಟ್ಟು ಬಾಯಿತರು ಎಂಬಲ್ಲಿ ನಡೆದಿದೆ.

ಪತ್ತೆಯಾಗಿದ್ದ ಗೋವುಗಳನ್ನು ಬಜರಂಗದಳ ಕಾರ್ಯಕರ್ತರು ರಕ್ಷಣೆ ಮಾಡಿದ್ದು ಆರೋಪಿಗಳನ್ನು ಧರ್ಮಸ್ಥಳ ಪೊಲೀಸರಿಗೊಪ್ಪಿಸಿದ್ದಾರೆ.

ಆರೋಪಿಗಳಾದ ಆಜೀದ್ ಕಕ್ಕಿಂಜೆ, ರಫೀಕ್ ನೆರಿಯ, ಹಾಗೂ ಗೋವುಗಳನ್ನು ಸಾಗಾಟ ಮಾಡುತ್ತಿದ್ದ ಪಿಕಪ್ ವಾಹನವನ್ನು ಧರ್ಮಸ್ಥಳ ಪೊಲೀಸರು ವಶಪಡಿಸಿಕೊಂಡು ಕೇಸ್ ದಾಖಲಿಸಿದ್ದಾರೆ.

Related post

Leave a Reply

Your email address will not be published. Required fields are marked *

error: Content is protected !!