• November 13, 2024

ಆರಿಕೋಡಿ ಚಾಮುಂಡೇಶ್ವರಿ ತಾಯಿಯ ಕಾರ್ಣಿಕ: ದೃಷ್ಟಿ ದೋಷದ ಸಮಸ್ಯೆಯನ್ನು ಎದುರಿಸುತ್ತಿದ್ದ ವ್ಯಕ್ತಿಗೆ ಮರಳಿ ಬಂದ ದೃಷ್ಟಿ

 ಆರಿಕೋಡಿ ಚಾಮುಂಡೇಶ್ವರಿ ತಾಯಿಯ ಕಾರ್ಣಿಕ: ದೃಷ್ಟಿ ದೋಷದ ಸಮಸ್ಯೆಯನ್ನು ಎದುರಿಸುತ್ತಿದ್ದ ವ್ಯಕ್ತಿಗೆ ಮರಳಿ ಬಂದ ದೃಷ್ಟಿ

 

ಆರಿಕೋಡಿ: ದೃಷ್ಟಿ ದೋಷದ ಸಮಸ್ಯೆಯನ್ನು ಎದುರಿಸುತ್ತಿದ್ದ ವ್ಯಕ್ತಿಯೊಬ್ಬ ಆರಿಕೋಡಿ ಕ್ಷೇತ್ರಕ್ಕೆ ಆಗಮಿಸಿ ಪ್ರಾರ್ಥನೆ ಸಲ್ಲಿಸಿದ್ದು ಬಹು ದಿನಗಳ ಬಳಿಕ ದೃಷ್ಟಿ ಮರಳಿ ಬಂದಿದ್ದು ಈ ಮೂಲಕ ಚಾಮುಂಡೇಶ್ವರಿ ತಾಯಿ ಕಾರ್ಣಿಕ ಮೆರೆದಿರುವ ಘಟನೆ ನಡೆದಿದೆ.

ಪುತ್ತೂರು ತಾಲೂಕಿನ ನವೀನ್ ಕೊಯಿಲ ಅವರೇ ದೃಷ್ಟಿ ಮರಳಿ ಪಡೆದುಕೊಂಡ ವ್ಯಕ್ತಿ.

ಸುಮಾರು ವರ್ಷಗಳಿಂದ ದೃಷ್ಟಿ ಕಾಣದೆ ಹಲವು ಕ್ಷೇತ್ರಕ್ಕೆ ಹರಕೆ ಸಲ್ಲಿಸಿದರೂ ಪ್ರಯೋಜನವಾಗಲಿಲ್ಲ. ಆಗ ನೊಂದ ಅವರ ಕುಟುಂಬವು ಆರಿಕೋಡಿಯ ಚಾಮುಂಡೇಶ್ವರೀ ದೇವಿ ಸನ್ನಿಧಿಗೆ ಬಂದು ತಮ್ಮ ನೋವನ್ನ ಹೇಳಿಕೊಂಡಿದ್ದರು.

ಚಾಮುಂಡೇಶ್ವರಿ ತಾಯಿ ಅನುಗ್ರಹದಿಂದ ದೃಷ್ಟಿ ದೋಷ ನಿವಾರಣೆಯಾಗಿದ್ದು ಎಲ್ಲರಂತೆ ಓಡಾಡುತ್ತಿದ್ದೇನೆ ಎಂದು ನವೀನ್ ಕೊಯಿಲ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಈ ಹಿಂದೆ ನಡೆದಾಡಲು ಅಸಾಧ್ಯವಾದ ಕಡಬ ಮೂಲದ ಯುವಕನೊಬ್ಬ ಇಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ನಡೆದುಕೊಂಡು ಹೋಗಿರುವುದನ್ನು ಇಲ್ಲಿ ನೆನಪಿಸಬಹುದು.

Related post

Leave a Reply

Your email address will not be published. Required fields are marked *

error: Content is protected !!