ಹುಣ್ಸೆಕಟ್ಟೆ: ಹಾಲು ಉತ್ಪಾದಕರ ಮಹಿಳಾ ಸಂಘದ 2021-22ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆ
ಹುಣ್ಸೆಕಟ್ಟೆ: ಹುಣ್ಸೆಕಟ್ಟೆ ಹಾಲು ಉತ್ಪಾದಕರ ಮಹಿಳಾ ಸಂಘದ 2021-22ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯು ಜು.19 ರಂದು ಸಹಕಾರ ಸಂಘದ ವಠಾರದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷೆ ರಮಾದೇವಿ ವಹಿಸಿದ್ದರು.
ಈ ಸಂದರ್ಭದಲ್ಲಿ ದ.ಕ ಹಾಲು ಒಕ್ಕೂಟ ಬೆಳ್ತಂಗಡಿ ಯ ಉಪ ವ್ಯವಸ್ಥಾಪಕ ಡಾ ಚಂದ್ರಶೇಖರ ಭಟ್ , ದ.ಕ ಹಾಲು ಒಕ್ಕೂಟದ ವಿಸ್ತಾರಣಾಧಿಕಾರಿ ಆದಿತ್ಯ, ಪಶು ವೈಧ್ಯಾಧಿಕಾರಿ ಡಾ ಗಣಪತಿ, ಡಾ ಪೂಜಾ, ಹುಣ್ಸೆಕಟ್ಟೆ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಉಪಾಧ್ಯಕ್ಷೆ ಶಿವ ಪ್ರಭಾ, ಹಾಲು ಪರೀಕ್ಷಕಿ ಶೋಭಾ, ಬಿ.ಎಂ.ಸಿ ನಿರ್ವಾಹಕ ಜಯರಾಮ ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ದ.ಕ ಹಾಲು ಒಕ್ಕೂಟ ಬೆಳ್ತಂಗಡಿ ಯ ವಿಸ್ತಾರಣಾಧಿಕಾರಿ ಸುಚಿತ್ರಾ ಒಕ್ಕೂಟದ ವತಿಯಿಂದ ದೊರೆಯುವ ಅನುದಾನದ ಬಗ್ಗೆ ಮಾಹಿತಿ ನೀಡಿದರು.
ದ.ಕ ಹಾ.ಒ ಬೆಳ್ತಂಗಡಿ ನಿರ್ದೇಶಕರಾದ ಪದ್ಮನಾಭ ಶೆಟ್ಟಿ ಅರ್ಕಜೆ ಒಕ್ಕೂಟದಲ್ಲಿ ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.
ಕಾರ್ಯದರ್ಶಿ ಸುಜಾತ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿ, ಕಾರ್ಯಕ್ರಮ ನಿರೂಪಿಸಿ ವಂದಿಸಿದರು.