ಕಾರಿನ ಚಕ್ರದಡಿಗೆ ಸಿಲುಕಿ 2 ವರ್ಷದ ಮಗು ದಾರುಣ ಸಾವು
ದೆಹಲಿ: ಕಾರನ್ನು ರಿವರ್ಸ್ ತೆಗೆಯುವ ಸಂದರ್ಭದಲ್ಲಿ ಎರಡು ವರ್ಷದ ಕಂದಮ್ಮ ಚಕ್ರಕ್ಕೆ ಸಿಲುಕಿ ಸಾವಿಗೀಡಾದ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದೆ.
ವಾಹನ ಚಲಾಯಿಸುವಾಗ ಮೈಯೆಲ್ಲಾ ಕಣ್ಣಾಗಿರಬೇಕು ಎಂದು ಹೇಳುತ್ತಾರೆ. ಏಕೆಂದರೆ ಸ್ವಲ್ಪ ಯಾಮಾರಿದ್ರು ಏನೆಲ್ಲಾ ಅನಾಹುತಗಳು ಆಗುತ್ತದೆ ಎನ್ನುವುದಕ್ಕೆ ಈ ಘಟನೆ ಸಾಕ್ಷಿ.
ಕಾರು ರಿವರ್ಸ್ ತೆಗೆಯುವ ಸಂದರ್ಭದಲ್ಲಿ ಪುಟ್ಟ ಕಂದಮ್ಮ ಸಾವಿಗೀಡಾಗಿದೆ ಘಟನೆಗೆ ಸಂಬಂಧಿಸಿದಂತೆ ಕಾರು ಚಾಲಕನನ್ನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ದುರ್ಘಟನೆ ಅ.10 ರಂದು ದೆಹಲಿಯ ರೋಹಿಣಿ ಪ್ರದೇಶದಲ್ಲಿ ನಡೆದಿದೆ.
ಎರಡು ವರ್ಷದ ಮಗು ತನ್ನ ಮನೆಯ ಮುಂದೆ ಗೇಟ್ ನ ಹೊರ ಭಾಗದ ರಸ್ತೆಯಲ್ಲಿ ಆಟವಾಡುತ್ತಿದ್ದಾಗ ಈ ಘಟನೆ ನಡೆದಿದೆ ಈ ವೇಳೆ ನೆರೆಮನೆಯವರು ಮಗು ಆಟವಾಡುವುದನ್ನು ನೋಡದೆ ಏಕಾ ಏಕಿ ರಿವರ್ಸ್ ತೆಗೆದುಕೊಂಡಿದ್ದಾರೆ. ಪರಿಣಾಮ ಚಕ್ರಕ್ಕೆ ಸಿಲುಕಿ ಸ್ಥಳದಲ್ಲಿ ಮೃತಪಟ್ಟಿದೆ.
ಪೊಲೀಸರು ಕಾರು ಚಾಲಕರನ್ನ ವಶಕ್ಕೆ ಪಡೆದುಕೊಂಡಿದ್ದಾರೆ.