• December 3, 2024

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನಗಳ ಮಹಾವಿದ್ಯಾಲಯ ಉಜಿರೆ ಇದರ 26, 27 ಮತ್ತು 28 ನೆಯ ಬ್ಯಾಚ್ ಗಳ ಪದವಿ ಪ್ರದಾನ ಸಮಾರಂಭ

 ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನಗಳ ಮಹಾವಿದ್ಯಾಲಯ ಉಜಿರೆ ಇದರ 26, 27 ಮತ್ತು 28 ನೆಯ ಬ್ಯಾಚ್ ಗಳ ಪದವಿ ಪ್ರದಾನ ಸಮಾರಂಭ

 

ಧರ್ಮಸ್ಥಳ: ಉಜಿರೆ  ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನಗಳ ಮಹಾವಿದ್ಯಾಲಯ ದ ಇಪ್ಪತ್ತಾರು, ಇಪ್ಪತ್ತೇಳು ಮತ್ತು ಇಪ್ಪತ್ತೆಂಟನೆಯ ಪದವಿ ಪ್ರದಾನ ಸಮಾರಂಭವು ಧರ್ಮಸ್ಥಳ ಅಮೃತ ವರ್ಷಿಣಿ  ಸಭಾಭವನದಲ್ಲಿ ಅ.8 ರಂದು ಜರುಗಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಧರ್ಮಸ್ಥಳದ ಧರ್ಮಾಧಿಕಾರಿ , ರಾಜ್ಯಸಭಾ ಸಂಸದರು ಪೂಜ್ಯ ಡಾ|| ಡಿ ವೀರೇಂದ್ರ ಹೆಗ್ಗಡೆಯವರು ವಹಿಸಿದ್ದರು.

ಗೋವಾದ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಶಿಕ್ಷಣಾಥಿ೯ಗಳಿಗೆ ಪದವಿ ಪ್ರದಾನ ಮಾಡಿದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ರಾ.ಗಾಂ.ಆ ವಿಶ್ವವಿದ್ಯಾಲಯದ ಉಪ ಕುಲಪತಿಗಳು ಡಾ|ಎಂ.ಕೆ ರಮೇಶ್, ಶಾಸಕ ಹರೀಶ್ ಪೂಂಜ, ಶ್ರೀ.ಧ.ಮಂ ಶಿಕ್ಷಣ ಸಂಸ್ಥೆ ಯ  ಕಾರ್ಯದರ್ಶಿ ಡಿ.ಹರ್ಷೇಂದ್ರ ಕುಮಾರ್, ಉಜಿರೆ ಶ್ರೀ.ಧ.ಮಂ ಶಿಕ್ಷಣ ಸಂಸ್ತೆಯ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್ ಉಪಸ್ಥಿತರಿದ್ದರು.

ಉಜಿರೆ ಶ್ರೀ.ಧ.ಮಂ.ಪ್ರ & ಯೋ.ಕಾಲೇಜು ಪ್ರಾಂಶುಪಾಲರು ಡಾ.ಪ್ರಶಾಂತ್ ಶೆಟ್ಟಿ ಸ್ವಾಗತಿಸಿದರು.

ಕಾರ್ಯಕ್ರಮದಲ್ಲಿ ಸಿಬ್ಬಂದಿವರ್ಗ ಮತ್ತು ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಜೋಸ್ನಾ ಕಾಯ೯ಕ್ರಮ ನಿರೂಪಿಸಿದರು.ಡಾ. ಸುಜೀತ್ ಧನ್ಯವಾದವಿತ್ತರು.

Related post

Leave a Reply

Your email address will not be published. Required fields are marked *

error: Content is protected !!