ಕರಾವಳಿಯ ಮೂರು ಜಿಲ್ಲೆಗಳ ಪಡಿತರ ಕಾರ್ಡ್ ದಾರರಿಗೆ ಸಿಹಿ ಸುದ್ದಿ ಕರ್ನಾಟಕ ಕರಾವಳಿ ಜಿಲ್ಲೆಗಳಲ್ಲಿ ಕುಚ್ಚಲಕ್ಕಿ ವಿತರಣೆಗೆ ಕೇಂದ್ರ ಒಪ್ಪಿಗೆ
ಸರ್ಕಾರದಿಂದ ರಾಜ್ಯದ ಜನತೆಗೆ ಅನೇಕ ಯೋಜನೆಗಳು ಸೌಲಭ್ಯಗಳು ದೊರೆಯುತ್ತಿದ್ದು ಚಾಲ್ತಿಯಲ್ಲಿರುವ ಪಡಿತರ ಚೀಟಿಗಳಿಗೆ ನ್ಯಾಯಬೆಲೆ ಅಂಗಡಿಗಳು ಬಯೋಮೆಟ್ರಿಕ್ ಆಧಾರ್ ಓಟಿಪಿ ವಿನಾಯಿತಿ ಸೌಲಭ್ಯ ಮತ್ತು ಪೋರ್ಟ್ ಎಬಿಲಿಟಿ ಸೇರಿ ಯಾವುದಾದರೊಂದು ವಿಧಾನದ ಮೂಲಕ ಪಡಿತರ ವಿತರಿಸಲು ಸರಕಾರ ಅನು ಮಾಡಿಕೊಟ್ಟಿದೆ.
ಕೇಂದ್ರ ಸರಕಾರದಿಂದ ಬಿಡುಗಡೆಯಾಗುವ ವಸ್ತುಗಳನ್ನು ಭಾರತ ಆಧಾರ ನಿಗಮದಿಂದ ಸಗಟು ವಿತರಣಾ ಕೇಂದ್ರಗಳಿಗೆ ಹಾಗೂ ಸಕಟು ವಿತರಣಾ ಕೇಂದ್ರದಿಂದ ನ್ಯಾಯಬೆಲೆ ಅಂಗಡಿಯ ಬಾಗಿಲಿಗೆ ಅಧಿಕೃತ ಸಾಗಾಣಿಕ ಗುತ್ತಿಗೆದಾರರ ಮೂಲಕ ತಲುಪಿಸುವ ವ್ಯವಸ್ಥೆ ಜಾರಿಯಲ್ಲಿದೆ . ನ್ಯಾಯಬೆಲೆ ಅಂಗಡಿಗಳು ಫಲಾನುಭವಿ ಕುಟುಂಬಗಳಿಗೆ ಪಡಿತರ ವಸ್ತುಗಳನ್ನು ತಲುಪಿಸುವ ಮುಖ್ಯ ವಾಹಿನಿಗಳಾಗಿದ್ದು ನಿಗದಿತ ದರ ಹಾಗೂ ಪ್ರಮಾಣದಲ್ಲಿ ವಿತರಣೆಯ ಉಸ್ತುವಾರಿ ಗೆ ಸ್ಥಳೀಯ ಕಾರ್ಯಕರ್ತರ ಸಿಬ್ಬಂದಿ ಕಾರ್ಯನಿರ್ವಹಿಸುತ್ತಾರೆ ಹೆಚ್ಚಿನ ಪಾರದರ್ಶಕ ವಿತರಣೆಗಾಗಿ ನ್ಯಾಯಬೆಲೆ ಅಂಗಡಿವಾರು ಜಾಗೃತ ಸಮಿತಿಗಳನ್ನ ರಚಿಸಲಾಗಿದ್ದು ಅವರಿಗೆ ಸಹ ನಿರ್ದಿಷ್ಟ ಅಧಿಕಾರವನ್ನು ನೀಡಲಾಗಿದೆ ಇದರೊಂದಿಗೆ ಬಿಪಿಎಲ್ ಕಾರ್ಡ್ ಹೊಂದಿದವರಿಗೆ ತಿಂಗಳಿಗೆ ಒಬ್ಬ ವ್ಯಕ್ತಿಗೆ 10 ಕೆಜಿ ಅಕ್ಕಿ ಹಾಗೂ ಏಪಿಎಲ್ ಕಾರ್ಡು ಹೊಂದಿದವರಿಗೆ ಒಟ್ಟಾರೆ ಅಕ್ಕಿ ಜೊತೆಗೆ ಬೇಳೆಗಳನ್ನು ಆಯಾ ಊರಿನ ಆಹಾರ ಪದ್ಧತಿಗೆ ಅನುಕೂಲವಾಗಿ ಒಟ್ಟಾರೆಯಾಗಿ 10 ಕೆಜಿ ನೀಡಲಾಗುತ್ತಿದೆ ಇದಲ್ಲದೆ ಲಾಕ್ ಡೌನ್ ಸಮಯದಲ್ಲಿ ಬಡವರು ತೊಂದರೆ ಅನುಭವಿಸಿದಂತೆ ನೋಡಿಕೊಳ್ಳಲು ಮೋದಿ ಸರ್ಕಾರ ಉಚಿತ ಅಕ್ಕಿಯ ಯೋಜನೆಯ ಜಾರಿಗೆ ತಂದಿದ್ದು ಹಾಗಾಗಿ ಒಬ್ಬರಿಗೆ 5 ಕೆಜಿ ದರದಲ್ಲಿ ಉಚಿತ ಅಕಿ ಲಭ್ಯವಾಗಿತ್ತು ಅಂದರೆ ಒಂದು ಕಾರ್ಡಿನಲ್ಲಿ ನಾಲ್ಕು ಜನ ಇದ್ದಾರೆ 20 ಕೆಜಿ ಉಚಿತ ಆಕೆ ಸಿಗುತ್ತಿತ್ತು.
ಕರಾವಳಿಯ ಜನ ಹೆಚ್ಚಾಗಿ ಇಷ್ಟಪಡುವ ಜೊತೆಗೆ ಮೆಚ್ಚಿಕೊಂಡಿರುವ ಕುಚ್ಚಲಕ್ಕಿಯನ್ನು ಅವಿಭಾಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯ ಜನತೆಯ ಪಡಿತರ ವಿತರಣೆಯಲ್ಲಿ ನೀಡಬೇಕು ಎನ್ನುವ ಬೇಡಿಕೆ ಮುಂಚಿನಿಂದಲೂ ಕೇಳಿಕೊಂಡು ಬರುತ್ತಿತ್ತು ಸದ್ಯ ಈ ಬೇಡಿಕೆಗೆ ಸರಕಾರ ಬೇಡಿಕೆ ಈಡೇರಿಕೆಗೆ ಒಲವು ತೋರಿದೆ ಕರಾವಳಿಯ ಅವಳಿ ಜಿಲ್ಲೆಗಳಲ್ಲಿ ಸ್ಥಳೀಯ ಕುಚ್ಚಲಕ್ಕಿಯನ್ನು ಖರೀದಿಸಿ ಪಡಿತರ ವ್ಯವಸ್ಥೆ ಅಡಿ ವಿತರಿಸಲು ಕೇಂದ್ರ ಸರಕಾರ ಅನುಮತಿ ನೀಡಿದೆ.
ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು ಪಡಿತರ ವ್ಯವಸ್ಥೆಯ ಕುಚಲಕ್ಕಿ ವಿತರಿಸುವ ಸಾರ್ವಜನಿಕರ ಬೇಡಿಕೆಯ ಬಗ್ಗೆ ಕೇಂದ್ರ ಆಹಾರ ಮತ್ತು ಸಾರ್ವಜನಿಕ ವಿತರಣೆ ಸಚಿವ ಅವರಿಗೆ ಪ್ರಸ್ತಾವನೆ ಕಳುಹಿಸಿ ಇದಕ್ಕೆ ಸ್ಪಂದಿಸಿದ ಸಚಿವರು ಅನುಮತಿ ನೀಡಿದ್ದಾರೆ ಹಾಗಾಗಿ ಸದ್ಯದಲ್ಲೇ ಸ್ಥಳೀಯ ಅಕ್ಕಿಯಾದ ಕುಚಲಕ್ಕಿ ಗ್ರಾಹಕರಿಗೆ ಲಭ್ಯವಾಗಲಿದ್ದು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೆಳೆಯಲಾಗುತ್ತಿರುವ ಸ್ಥಳೀಯ ಪ್ರಭೇದಗಳನ್ನು ಖರೀದಿಸಿ ಪಡಿತರ ವ್ಯವಸ್ಥೆ ಅಡಿ ವಿತರಿಸುವುದರಿಂದ ಜಿಲ್ಲೆಯ ರೈತರಿಗೂ ಅನುಕೂಲವಾಗಲಿದೆ ಕೇಂದ್ರ ಸರಕಾರವು ಸಾಮಾನ್ಯ ಭತ್ತಕ್ಕೆ ಕ್ವಿಂಟಲ್ ಗೆ ಸಾವಿರದ ಒಂಬೈನೂರ ನಲವತ್ತು ರೂಪಾಯಿ ಹಾಗೂ ಗ್ರೇಡಿಯೇ ಬತ್ತಕ್ಕೆ ಕ್ವಿಂಟಲ್ ಗೆ ಸಾವಿರದ ಒಂಬೈನೂರ ಅರವತ್ತು ರೂಪಾಯಿ ನಿಗದಿ ಮಾಡಿದ್ದು ಬೆಂಬಲ ಬೆಲೆಯನ್ನು ಹೆಚ್ಚಿಸುವಂತೆ ರೈತರು ಸರಕಾರವನ್ನ ಆಗ್ರಹಿಸಿದ್ದಾರೆ.
ಈ ಕುರಿತು ಸರಕಾರ ಏನು ತೀರ್ಮಾನ ಕೈಗೊಳ್ಳಲಿದೆ ಎಂದು ಕಾದು ನೋಡಬೇಕಾಗಿದೆ. ಸ್ಥಳೀಯ ಜನರ ಜೀವನ ಶೈಲಿಗೆ ಅನುಗುಣವಾಗಿ ಪಡಿತರ ವಿತರಣೆ ಮಾಡುವುದರಿಂದ ಅಲ್ಲಿನ ಸಾಂಪ್ರದಾಯಿಕ ಕೃಷಿಗೆ ಬೆಂಬಲ ದೊರೆತು ಕೃಷಿಕನಿಗೆ ಆರ್ಥಿಕವಾಗಿ ಅಭಿವೃದ್ಧಿಯಾಗಲು ನೆರವಾಗುತ್ತದೆ .