ಬೆಳಾಲು ಗ್ರಾಮದ ಕೊಲ್ಪಾಡಿ ಅಂಗನವಾಡಿಯಲ್ಲಿ ಪೌಷ್ಟಿಕ ಆಹಾರ ಸಪ್ತಾಹ
ಬೆಳಾಲು: ಬೆಳಾಲು ಗ್ರಾಮದ ಕೊಲ್ಪಾಡಿ ಅಂಗನವಾಡಿ ಕೇಂದ್ರದಲ್ಲಿ ಪೌಷ್ಟಿಕ ಆಹಾರ ಸಪ್ತಾಹ ಸೆ.21 ರಂದು ನಡೆಯಿತು.
ಈ ಕಾರ್ಯಕ್ರಮದಲ್ಲಿ ಬಾಲ ವಿಕಾಸ ಸಮಿತಿಯ ಅಧ್ಯಕ್ಷೆ ಶ್ರೀಮತಿ ಚೈತ್ರ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಧರ್ಮಸ್ಥಳ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ| ಮಂಜು ಕಾರ್ಯಕ್ರಮವನ್ನು ಉದ್ಘಾಟಿಸಿದರು .ಧರ್ಮಸ್ಥಳದ ಆರೋಗ್ಯ ಇಲಾಖೆಯ ಎಲ್ ಎಚ್ ವಿ ಆದ ಶ್ರೀಮತಿ ವಿಜಯಲಕ್ಷ್ಮಿ ಅವರು ನಿತ್ಯ ಜೀವನದಲ್ಲಿ ಪೌಷ್ಟಿಕಾಂಶದ ಮಹತ್ವ ಮತ್ತು ಆರೋಗ್ಯಕರ ಆಹಾರ ಸೇವನೆಯ ಮಹತ್ವ ತಿಳಿಸಿದರು .
ಮುಖ್ಯ ಅತಿಥಿಗಳಾಗಿ ಶ್ರೀಮತಿ ವಿದ್ಯಾ ಶ್ರೀನಿವಾಸ್ ಗೌಡ ಸದಸ್ಯರು ಗ್ರಾಮ ಪಂಚಾಯತ್ ಬೆಳಾಲು, ಹಿರಿಯ ಮಹಿಳಾ ಆರೋಗ್ಯ ಸಂದರ್ಶಕಿ ಶ್ರೀಮತಿ ವಿಜಯಲಕ್ಷ್ಮಿ, ಸಂಜೀವಿನಿ ಒಕ್ಕೂಟದ ಎಂ ಬಿ ಕೆ ಶ್ರೀಮತಿ ಹರಿಣಾಕ್ಷಿ ,ಕಿರಿಯ ಮಹಿಳಾ ಆರೋಗ್ಯ ಸಂದರ್ಶಕಿ ಶ್ರೀಮತಿ ಹರಿಣಾಕ್ಷಿ ,ಸಮುದಾಯ ಆರೋಗ್ಯ ಅಧಿಕಾರಿ ತೇಜಾವತಿ, ಆಶಾ ಕಾರ್ಯಕರ್ತೆ ಶ್ರೀಮತಿ ಪ್ರೇಮ ,ಸಂಜೀವಿನಿ ಒಕ್ಕೂಟದ ಎಲ್ ಸಿ ಆರ್ ಪಿ ಶ್ರೀಮತಿ ವಸಂತಿ, ಎಲ್ಲಾ ಗರ್ಭಿಣಿಯರು ಪೋಷಕರು ಮಕ್ಕಳು ಹಾಗೂ ಸ್ರೀ ಶಕ್ತಿ ಸಂಘಗಳ ಸದಸ್ಯರು, ಬಾಲ ವಿಕಾಸ ಸಮಿತಿ, ಆಶಾ ಕಾರ್ಯಕರ್ತೆಯರು , ಭಾಗವಹಿಸಿದ್ದರು
ಈ ಸಂದರ್ಭದಲ್ಲಿ ಶ್ರೀಮತಿ ವಿದ್ಯಾ ಶ್ರೀನಿವಾಸ್ ಗೌಡ ಇವರು ಅಂಗನವಾಡಿಯ ಎಲ್ಲಾ ಪುಟಾಣಿಗಳಿಗೆ ಡ್ರಾಯಿಂಗ್ ಪುಸ್ತಕ ಹಾಗೂ ಬಣ್ಣದ ಪೆನ್ಸಿಲ್ ಅನ್ನು ಕೊಡುಗೆಯಾಗಿ ನೀಡಿದರು
ಈ ಕಾರ್ಯಕ್ರಮವನ್ನು ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಲೀಲಾ ನಿರೂಪಿಸಿ, ಶ್ರೀಮತಿ ಪ್ರೇಮ ಸ್ವಾಗತಿಸಿ, ಶ್ರೀಮತಿ ವಸಂತಿ ಧನ್ಯವಾದ ಸಲ್ಲಿಸಿದರು.