ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ ಉಜಿರೆ ಸೇರಿದಂತೆ ಹಲವು ಸಂಘಟನೆಗಳ ಸಾಥ್

ಬೆಳ್ತಂಗಡಿ: ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ (ರಿ.) ಉಜಿರೆ, ರೋಟರಿ ಕ್ಲಬ್ ಬೆಳ್ತಂಗಡಿ, ಶ್ರೀ ಧ.ಮಂ. ಕಾಲೇಜು ರಾಷ್ಟ್ರೀಯ ಸೇವಾ ಯೋಜನಾ ಘಟಕಗಳು ಶ್ರೀ ಧ.ಮಂ. ಸ್ಪೋಟ್ಸ್ ಕ್ಲಬ್ ಉಜಿರೆ, ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘ (ರಿ.) ಬೆಳ್ತಂಗಡಿ ಇದರ ನೇತೃತ್ವದಲ್ಲಿ ಬೆಳ್ತಂಗಡಿ ತಾಲೂಕು ಆರಕ್ಷಕ ಠಾಣಾ ಸಿಬ್ಬಂದಿಗಳ ಉಪಸ್ಥಿತಿಯಲ್ಲಿ ಸುಮಾರು 650 ಮಂದಿಯಿಂದ
‘ವಂದೇ ಮಾತರಂ’ ನನ್ನ ಸೇವೆ ದೇಶಕ್ಕಾಗಿ.. ನೇತ್ರಾವತಿ ನದಿ ಸ್ವಚ್ಛತಾ ಕಾರ್ಯಕ್ರಮ ಮಾ.16 ಧರ್ಮಸ್ಥಳ ನೇತ್ರಾವತಿ ಸ್ನಾನ ಘಟ್ಟದಲ್ಲಿ ಆರಂಭಗೊಂಡಿತು.
ಧರ್ಮಸ್ಥಳದ ನೇತ್ರಾವತಿ ನದಿ ಸ್ವಚ್ಛತಾ ಕಾರ್ಯಕ್ರಮವನ್ನು ನಾಗೇಶ್ ಕದ್ರಿ, ವೃತ್ತ ನಿರೀಕ್ಷಕರು ಬೆಳ್ತಂಗಡಿ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ,
ನೇತ್ರಾವತಿ ಪುಣ್ಯ ನದಿಯಲ್ಲಿ ತಮ್ಮ ಪಾಪವನ್ನು ಕಳೆಯಲು ಸ್ನಾನ ಮಾಡುತ್ತಾರೆ. ಆದರೆ ಬಟ್ಟೆ ಬರೆಗಳನ್ನು ನದಿಗೆ ಎಸೆದು ಅಂಧಾನುಕರಣೆ ಮಾಡುತ್ತಾರೆ. ಇದು ಸರಿಯಲ್ಲ. ಬದುಕು ಕಟ್ಟೋಣ ಬನ್ನಿ ತಂಡದ ಕಾಯ೯ಕ್ರಮ ಸಮಾಜಕ್ಕೆ ಮಾದರಿ ಎಂದರು.
ಅಧ್ಯಕ್ಷತೆಯನ್ನು ಬಿ. ಕೆ. ಧನಂಜಯ ರಾವ್ ಅಧ್ಯಕ್ಷರು, ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ (ರಿ) ಉಜಿರೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ, ಬಿ.ಜಿ. ಸುಬ್ಬಪುರ್ ಮಠ್, ವೃತ್ತ ನಿರೀಕ್ಷಕರು ಬೆಳ್ತಂಗಡಿ ಪೊಲೀಸ್ ಠಾಣೆ,ಅರ್ಜುನ್, ಉಪ ನಿರೀಕ್ಷಕರು, ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆ, ಕಿಶೋರ್ ಪಿ., ಉಪ ನಿರೀಕ್ಷಕರು, ಧರ್ಮಸ್ಥಳ ಪೊಲೀಸ್ ಠಾಣೆ,
ಶೈಲಾ ಡಿ. ಮುರುಗೋಡು, ಉಪ ನಿರೀಕ್ಷಕರು, ವೇಣೂರು ಪೊಲೀಸ್ ಠಾಣೆ, ಪ್ರಸಾದ್ ಶೆಟ್ಟಿ, ಎಣಿಂಜೆ, ಅಧ್ಯಕ್ಷರು, ಕಾರ್ಯನಿರತ ಪತ್ರಕರ್ತರ ಸಂಘ ಬೆಳ್ತಂಗಡಿ,
ರಮೇಶ್ ಕೆ., ಕಾರ್ಯದರ್ಶಿ, ಎಸ್.ಡಿ.ಎಂ. ಕ್ರೀಡಾ ಸಂಘ, ಉಜಿರೆ ಭಾಗವಹಿಸಿ ಶುಭ ಕೋರಿದರು.ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕ ಮೋಹನ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ ಕಾಯ೯ಕ್ರಮದ ಉದ್ದೇಶಗಳನ್ನು ತಿಳಿಸಿದರು.
ಡಾ. ಮಹೇಶ್ ಕುಮಾರ್ ಶೆಟ್ಟಿ ಹೆಚ್. ಯೋಜನಾಧಿಕಾರಿ, ರಾ.ಸೇ.ಯೋ. ಘಟಕ, ಶ್ರೀ ಧ.ಮಂ. ಕಾಲೇಜು, ಉಜಿರೆ ಸ್ವಾಗತಿಸಿದರು. ಎಸ್ ಕೆಡಿಆರ್ ಡಿಪಿ ಯೋಜನಾಧಿಕಾರಿ
ತಿಮ್ಮಯ್ಯ ನಾಯ್ಕ ಕಾಯ೯ಕ್ರಮ ನಿರೂಪಿಸಿದರು. ರೋಟರಿ ಕ್ಲಬ್ ಕಾಯ೯ದಶಿ೯ ಸಂದೇಶ್ ವಂದಿಸಿದರು.