• March 13, 2025

ದೆಹಲಿಯಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರನ್ನು ಭೇಟಿ ಮಾಡಿದ ಕ್ಯಾಪ್ಟನ್ ಬ್ರಿಜೇಶ್ ಚೌಟ

 ದೆಹಲಿಯಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರನ್ನು ಭೇಟಿ ಮಾಡಿದ ಕ್ಯಾಪ್ಟನ್ ಬ್ರಿಜೇಶ್ ಚೌಟ

 

ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಮೂಲಸೌಕರ್ಯ ಸುಧಾರಣೆ ಅದರಲ್ಲೂ ಪ್ರಮುಖವಾಗಿ ಶಿರಾಡಿ ಘಾಟ್ ಬೈಪಾಸ್ ಸಮಸ್ಯೆಯನ್ನು ತುರ್ತಾಗಿ ಬಗೆಹರಿಸಲು ಮಧ್ಯಪ್ರವೇಶಿಸುವಂತೆ ಕೋರಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿದ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ.

ಈ ಮಹತ್ವದ ಹೆದ್ದಾರಿ ಯೋಜನೆಯನ್ನು ಮುಂದುವರಿಸಲು ಅರಣ್ಯ ಇಲಾಖೆ ಸಹಿತ ಅಗತ್ಯ ಅನುಮತಿಗಳಿಗೆ ಇರುವ ಆಡಳಿತಾತ್ಮಕ ಅಡೆ-ತಡೆಗಳನ್ನು ನಿವಾರಿಸಲು ಹಾಗೂ ಕೆಲ ಅಧಿಕಾರಶಾಹಿ ಅಡೆ-ತಡೆ ನಿವಾರಣೆಗೆ ರಾಜ್ಯ ಸರ್ಕಾರಕ್ಕೆ ತುರ್ತಾಗಿ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಲು ಮಾನ್ಯ ಸಚಿವರ ಮಧ್ಯಪ್ರವೇಶವನ್ನು ಸಂಸದರು ಕೋರಿಕೊಂಡರು ಹಾಗೂ..

ಇದೇ ವೇಳೆ ಈ ಕುರಿತಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ವಿಸ್ತೃತ ಯೋಜನಾ ವರದಿಯ ಪ್ರಗತಿ ಹಾಗೂ ಮಂಗಳೂರು-ಬೆಂಗಳೂರು ಮಾರ್ಗದಲ್ಲಿ ನಡೆಯುತ್ತಿರುವ ಇತರ ಕಾಮಗಾರಿಗಳ ಬಗ್ಗೆ ಸಚಿವರಿಗೆ ಅವರು ಮಾಹಿತಿ ನೀಡಿದರು..

Related post

Leave a Reply

Your email address will not be published. Required fields are marked *

error: Content is protected !!