ಮೈರೋಳ್ತಡ್ಕ: ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮೊಸರು ಕುಡಿಕೆ ಕಾರ್ಯಕ್ರಮ
ಮೈರೋಳ್ತಡ್ಕ: ಬಂದಾರು ಗ್ರಾಮದ ಸದಾಶಿವ ಯುವಕ ಮಂಡಲ (ರಿ.) ದಿವ್ಯಶ್ರೀ ಮಹಿಳಾ ಮಂಡಲ (ರಿ.)ಮೈರೋಳ್ತಡ್ಕ ಇವುಗಳ ಸಂಯುಕ್ತ ಆಶ್ರಯದಲ್ಲಿ 33ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ನಡೆದ ಮೊಸರು ಕುಡಿಕೆ ಕಾರ್ಯಕ್ರಮ ಸೆ.18 ರಂದು ಜರುಗಿತು.
ಈ ಸಂದರ್ಭದಲ್ಲಿ ಶಾಸಕ ಹರೀಶ್ ಪೂಂಜರವರು ಆಗಮಿಸಿ ಶುಭಹಾರೈಸಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಕುರಾಯ ಸದಾಶಿವ ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀ ಮಹೇಶ್ ಭಟ್ ಹಾಗೂ ಮಲ್ಲಕಂಭದ ಉದ್ಘಾಟನೆಯನ್ನು ಪ್ರಗತಿಪರ ಕೃಷಿಕರಾದ ಶ್ರೀ ಧರ್ಣಪ್ಪ ಗೌಡ ಬಾನಡ್ಕ ಇವರು ನೇರವೆರಿಸಿದರು.
ಅಂತರಾಷ್ಟ್ರೀಯ ಕರಾಟೆ ಪಂದ್ಯಾಟದಲ್ಲಿ ಭಾಗವಹಿಸಿ ವಿಜೇತರಾದ ಮೈರೋಳ್ತಡ್ಕ ಚಾಕೋಟೆದಡಿ ಶ್ರೀಮತಿ ಪ್ರೇಮಲತಾ ಮತ್ತು ಗಣೇಶ್ ದಂಪತಿಗಳ ಪುತ್ರ ಯಜ್ಞೇಶ್ ಇವರಿಗೆ ಸನ್ಮಾನಿಸಲಾಯಿತು.
ಈ ಸಂಧರ್ಭದಲ್ಲಿ ಪದ್ಮುಂಜ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ರಕ್ಷಿತ್ ಪಣೆಕ್ಕರ,ಬಂದಾರು ಗ್ರಾ.ಪಂ ಅಧ್ಯಕ್ಷರಾದ ಶ್ರೀಮತಿ ಪರಮೇಶ್ವರಿ ಕೆ.ಗೌಡ ,ಗ್ರಾ.ಪಂ ಸದಸ್ಯರಾದ ದಿನೇಶ್ ಗೌಡ ಖಂಡಿಗ,ಬಾಲಕೃಷ್ಣ ಗೌಡ ಮುಗೇರಡ್ಕ, ಶ್ರೀಮತಿ ಸುಚಿತ್ರಾ ಮುರ್ತಾಜೆ, ಯುವಕ ಮಂಡಲದ ಅಧ್ಯಕ್ಷರಾದ ದಯಾನಂದ ಗೌಡ,ಕಾರ್ಯದರ್ಶಿ ಶಿವಪ್ರಸಾದ್ ಚಾಕೋಟೆದಡಿ,ಶೀನಪ್ಪ ಗೌಡ, ಮಹೇಶ್, ಮೋಹನ್ ಗೌಡ ಗುಂಡಿಕಂಡ,ಪದ್ಮನಾಭ ಗೌಡ,ಉದಯ ಗೌಡ , ಎಂ.ಸಿ.ಕೆ,ರಾಜೇಶ್,ರಾಘವೇಂದ್ರ, ಚೇತನ್,ಸುಂದರ,ಜಯಪ್ರಕಾಶ್,ಲೋಹಿತ್,ನಿಶಾಂತ್ ,ತಿಮ್ಮಪ್ಪ ಅಬ್ಬನೊಕ್ಕು,ಸತೀಶ್ ಸಾಲ್ಮರ,ಯಶೋದರ ಮುಂಡೂರು,ದೀಕ್ಷಿತ್ ಮೈರೋಳ್ತಡ್ಕ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಮುಕ್ತ ವಾಲಿಬಾಲ್ ಪಂದ್ಯಾಟ ನಡೆಯಿತು.ಪ್ರಥಮ ಸ್ಥಾನ ಶ್ರೀದೇವಿ ಆಟ್ಯಾಕರ್ಸ್
ದ್ವೀತಿಯ ಸ್ಥಾನ ಖಂಡಿಗ ಪ್ರೆಂಡ್ಸ್ ವಿಜೇತರಾದರು.
ಪಂದ್ಯಾಟದ ತೀರ್ಪುಗಾರರಾಗಿ ದೈಹಿಕ ಶಿಕ್ಷಕರಾದ ಪ್ರವೀಣ್ ಅಲೆಕ್ಕಿ,ಕೊಯ್ಯೂರು, ಹಾಗೂ ದೈಹಿಕ ಶಿಕ್ಷಕರಾದ ಚಂದ್ರಶೇಖರ ಖಂಡಿಗ ಸಹಕರಿಸಿದರು.