• December 12, 2024

ಡಿ 14 ನವಶಕ್ತಿ ಕ್ರೀಡಾಂಗಣದಲ್ಲಿ ಯಕ್ಷ ಸಂಭ್ರಮ:ಅದ್ದೂರಿ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ

 ಡಿ 14 ನವಶಕ್ತಿ ಕ್ರೀಡಾಂಗಣದಲ್ಲಿ ಯಕ್ಷ ಸಂಭ್ರಮ:ಅದ್ದೂರಿ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ

 

ಬೆಳ್ತಂಗಡಿ: ಯಕ್ಷಧ್ರುವ ಪಟ್ಲ ಪೌಂಡೇಷನ್ ಬೆಳ್ತಂಗಡಿ ಘಟಕ ಇದರ 3 ನೇ ವರ್ಷದ ವಾರ್ಷಿಕೋತ್ಸವ “ಯಕ್ಷ ಸಂಭ್ರಮ* ಗುರುವಾಯನಕೆರೆ ಶಕ್ತಿನಗರದ ನವಶಕ್ತಿ ಕ್ರೀಡಾಂಗಣದಲ್ಲಿ ಘಟಕದ ಗೌರವಾಧ್ಯಕ್ಷ ಶಶಿಧರ್ ಶೆಟ್ಟಿ ನೇತೃತ್ವದಲ್ಲಿ ಡಿಸೆಂಬರ್ 14 ರಂದು ನಡೆಯಲಿದ್ದು, ಅದ್ದೂರಿ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಉಜಿರೆ ಜನಾರ್ದನ ದೇವಸ್ಥಾನದ ಅನವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯ ಬಿಡುಗಡೆಗೊಳಿಸಿದರು. ಯಕ್ಷ ಧ್ರುವ ಪಟ್ಲ ಪೌಂಡೇಷನ್ ಹಲವಾರೂ ಅಶಕ್ತ ಕಲಾವಿದರ ಬಾಳಿಗೆ ಬೆಳಕಾಗಿ ಇಡೀ ಸಮಾಜದ ಮೆಚ್ಚುಗೆಗೆ ಪಾತ್ರವಾಗಿದೆ. ಕಳೆದ 2 ವರ್ಷಗಳಿಂದ ಬೆಳ್ತಂಗಡಿ ತಾಲೂಕಿನಲ್ಲಿ ಶಶಿಧರ್ ಶೆಟ್ಟಿಯವರ ಮಾರ್ಗದರ್ಶನದಲ್ಲಿ ಅದ್ದೂರಿ ಕಾರ್ಯಕ್ರಮ ಉಜಿರೆ ಜನಾರ್ದನ ದೇವಸ್ಥಾನದ ವಠಾರದಲ್ಲಿ ನಡೆದಿದ್ದು, ತಾಲೂಕಿನ ವಿವಿಧೆಡೆ ಕಾರ್ಯಕ್ರಮ ಆಯೋಜಿಸುವ ಅವರ ಯೋಚನೆಯಂತೆ , ಈ ಬಾರಿಯ 3 ನೇ ವರ್ಷದ ಕಾರ್ಯಕ್ರಮ ಗುರುವಾಯನಕೆರೆ ನವಶಕ್ತಿ ಕ್ರೀಡಾಂಗಣದಲ್ಲಿ ಅದ್ದೂರಿಯಾಗಿ ನಡೆಯಲಿದೆ. ಈ ಕಾರ್ಯಕ್ರಮದ ಆಮಂತ್ರಣ ಪತ್ರವನ್ನು ಜನಾರ್ದನ ದೇವರ ಸನ್ನಿಧಾನದಲ್ಲಿ ಬಿಡುಗಡೆಗೊಳಿಸಲಾಗಿದ್ದು, ದೇವರ ಆಶೀರ್ವಾದ ಎಲ್ಲರ ಮೇಲಿರಲಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲು ದೇವರ ಅನುಗ್ರಹ ಇರಲಿ ಎಂದು ಬೇಡಿಕೊಳ್ಳುತ್ತೇನೆ ಎಂದು ಶುಭ ಹಾರೈಸಿದರು.

ಪಟ್ಲ ಘಟಕದ ವತಿಯಿಂದ ಶರತ್ ಕೃಷ್ಣ ಪಡುವೆಟ್ನಾಯ ಅವರನ್ನು ಗೌರವಿಸಲಾಯಿತು.
ಈ ವೇಳೆ ಘಟಕದ ಪದಾಧಿಕಾರಿಗಳಾದ ಸುರೇಶ್ ಶೆಟ್ಟಿ ಲಾಯಿಲ, ಶಿತಿಕಂಠ ಭಟ್,ಭುಜಬಲಿ ಧರ್ಮಸ್ಥಳ, ರಘುರಾಮ ಶೆಟ್ಟಿ, ವಸಂತ ಸುವರ್ಣ, ರವಿ ಚಕ್ಕಿತ್ತಾಯ , ಜಯಪ್ರಕಾಶ್ ಶೆಟ್ಟಿ, ರಾಜು ಶೆಟ್ಟಿ, ಪ್ರಕಾಶ್ ಶೆಟ್ಟಿ ನೊಚ್ಛ, ರವೀಂದ್ರ ಶೆಟ್ಟಿ, ಜಯಂತ ಶೆಟ್ಟಿ, ಕೃಷ್ಣ ಆಚಾರ್ಯ, ವಸಂತ ಶೆಟ್ಟಿ, ಕೃಷ್ಣ ಐತಾಳ ಪಂಜಿರ್ಪು, ವಿಶ್ವನಾಥ ಶೆಟ್ಟಿ,ವೆಂಕಟರಮಣ ಶೆಟ್ಟಿ, ಸೇರಿದಂತೆ ಇತರರು ಉಪಸ್ಥಿತರಿದ್ದರು.

Related post

Leave a Reply

Your email address will not be published. Required fields are marked *

error: Content is protected !!