• November 21, 2024

ತುಳು ಸಿನಿ ರಸಿಕರಿಗೆ ಮನೋರಂಜನೆ ನೀಡಲು ಸಜ್ಜಾಗಿದೆ ದಸ್ಕತ್ ನವೆಂಬರ್: 18 ರಂದು ಭಾರತ್ ಸಿನೆಮಾಸ್ ಮಂಗಳೂರಿನಲ್ಲಿ ಟ್ರೈಲರ್ ಲಾಂಚ್

 ತುಳು ಸಿನಿ ರಸಿಕರಿಗೆ ಮನೋರಂಜನೆ ನೀಡಲು ಸಜ್ಜಾಗಿದೆ ದಸ್ಕತ್  ನವೆಂಬರ್: 18 ರಂದು ಭಾರತ್ ಸಿನೆಮಾಸ್ ಮಂಗಳೂರಿನಲ್ಲಿ ಟ್ರೈಲರ್ ಲಾಂಚ್

 

ಡಿಸೆಂಬರ್ 13 ರಂದು ಬಿಡುಗಡೆ ಗೊಳ್ಳಲಿರುವ ದಸ್ಕತ್ ಸಿನೆಮಾವು ಈ ವರ್ಷದ ಸಾಲಿನ ಕೊನೆಯ ಸಿನೆಮಾ.ಹಲವಾರು ವಿಶೇಷತೆಗಳಿಂದ ಕೂಡಿರುವ ಈ ಚಿತ್ರ ತಂಡವು ನವೆಂಬರ್ 18 ರಂದು ಭಾರತ್ ಸಿನೆಮಾಸ್ ಮಂಗಳೂರಿನಲ್ಲಿ ಟ್ರೈಲರ್ ಲಾಂಚ್ ಮಾಡುತ್ತಿದ್ದಾರೆ.ತುಳು ಚಲನಚಿತ್ರ ರಂಗದಲ್ಲಿ ಹೊಸತನದ ಅಲೆಯನ್ನ ಸೃಷ್ಟಿ ಮಾಡಿ ಆ ಮುಖೇನ ಪ್ರೇಕ್ಷಕರ ಮನ ಗೆಲ್ಲುವ ತವಕದಲ್ಲಿರುವ ತಂಡ, ತುಳುನಾಡಿನ‌ ಮಣ್ಣಿನ‌ ಸೊಗಡಿನೊಂದಿಗೆ, ಕೇಪುಲ ಪಲ್ಕೆಯ ಕಥೆಯನ್ನ ನಮಗೆ ಊಣಬಡಿಸಿ ನಮ್ಮೆಲ್ಲರ ಮನಸ್ಸಲ್ಲಿ ಸಹಿ ಹಾಕಲು ದಸ್ಕತ್ ತಂಡದವರು ತಯಾರಾಗಿದ್ದಾರೆ.

ಈಗಾಗಲೇ ಬಹುತೇಕ‌ ಸ್ಯಾಂಡಲ್ ವುಡ್, ಕೋಸ್ಟಲ್ ವುಡ್ ನ ದಿಗ್ಗಜರು ಮತ್ತು ನಾಡಿನ‌ ಜನತೆ ಚಲನಚಿತ್ರದ ಟೀಸರ್ ನೋಡಿ ಮೆಚ್ಚಿಕ್ಕೊಂಡಿದ್ದು ಉತ್ತಮವಾದ ಪ್ರತಿಕ್ರಿಯೆಯನ್ನ ನೀಡಿದ್ದಾರೆ, ಸಿನಿಮಾ ಮೇಕಿಂಗ್, ಸಂಗೀತ ಸಂಯೋಜನೆ, ತುಳುನಾಡಿನ‌ ಸಂಸ್ಕೃತಿ‌ ಮತ್ತು‌ ಪಾತ್ರಗಳಲ್ಲಿನ ನೈಜತೆ ಎಲ್ಲರ ಮನಸ್ಸನ್ನ ಗೆದ್ದಿದ್ದು ಚಲನಚಿತ್ರ ಯಾವಾಗ ಬಿಡುಗಡೆ ಅನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿದೆ.ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಹೆಸರಾಂತ ಗಾಯಕ, ಸಂಗೀತ ನಿರ್ದೇಶಕರಾದ ಡಾ।ಗುರುಕಿರಣ್ ಅವರು ಬಿಡುಗಡೆ ದಿನಾಂಕವನ್ನ ಘೋಷಣೆ ಮಾಡಿದ್ದು ಡಿಸೆಂಬರ್ 13 ಕ್ಕೆ ತುಳುನಾಡಿನಾದ್ಯಂತ ದಸ್ಕತ್ ತುಳು ಚಿತ್ರ ತೆರೆ ಮೇಲೆ ಅಬ್ಬರಿಸಲಿದೆ.

ಕೃಷ್ಣ ಜೆ ಪಾಲೆಮಾರ್ ಅರ್ಪಿಸುವ ಈ ಚಿತ್ರವನ್ನ ರಾಘವೇಂದ್ರ ಕುಡ್ವ ನಿರ್ಮಿಸಿದ್ದು, ಕಾಮಿಡಿ ಕಿಲಾಡಿ ಖ್ಯಾತಿಯ ಬಹುಮುಖ ಪ್ರತಿಭೆ ಅನೀಶ್ ಪೂಜಾರಿ ವೇಣೂರು ಆಕ್ಷನ್ ಕಟ್ ಹೇಳಿದ್ದಾರೆ. ಛಾಯಾಗ್ರಹಣದಲ್ಲಿ ಸಂತೋಷ್ ಆಚಾರ್ಯ ಗುಂಪಲಾಜೆ, ಸಂಕಲನ ಗಣೇಶ್ ನೀರ್ಚಾಲ್, ಸಂಗೀತ ಸಂಯೋಜನೆಯಲ್ಲಿ ಸಮರ್ಥನ್ ಎಸ್ ರಾವ್ ಜೊತೆಯಾಗಿದ್ದು, ಸ್ಮಿತೇಶ್ ಬಾರ್ಯ, ವಿನೋದ್ ರಾಜ್ ಕಲ್ಮಂಜ, ನಿಶಿತ್ ಶೆಟ್ಟಿ , ಮನೋಜ್ ಆನಂದ್ , ದೀಕ್ಷಿತ್ ಧರ್ಮಸ್ಥಳ ತಂಡದ ಶಕ್ತಿಯಾಗಿದ್ದಾರೆ. ಹೊಸ ತಾರಾ ಬಳಗ ಹೊಂದಿರುವ ಚಿತ್ರದಲ್ಲಿದೀಕ್ಷಿತ್ ಕೆ ಅಂಡಿಂಜೆ , ನೀರಜ್ ಕುಂಜರ್ಪ ಮೋಹನ್ ಶೇಣಿ ಮಿಥುನ್ ರಾಜ್ , ಭವ್ಯ ಪೂಜಾರಿ, ಚಂದ್ರಹಾಸ ಉಲ್ಲಾಳ , ನವೀನ್ ಬೋಂದೆಲ್ , ಯೋಗೀಶ್ ಶೆಟ್ಟಿ , ಚೇತನ್ ಪಿಲಾರ್ ,ತಿಮ್ಮಪ್ಪ ಕುಲಾಲ್ ಮುಂತಾದವರು ಬಣ್ಣ ಹಚ್ಚಿದ್ದು ಜನರ ಆಶೀರ್ವಾದಕ್ಕೆ ಕಾಯುತ್ತಿದ್ದಾರೆ.

ಹೊಸ ತಂಡವಾಗಿ ಕಂಡರು ಈಗಾಗಲೇ‌ ವೆಬ್ ಸಿರೀಸ್, ತುಳು, ಕನ್ನಡ ಚಲನಚಿತ್ರಲ್ಲಿ ಕೆಲಸ‌ ಮಾಡಿದ ಅನುಭವ ಇರುವ ದಸ್ಕತ್ ತಂಡ ಹೊಸತನವನ್ನ ನೀಡಿ, ತುಳು ಚಲನಚಿತ್ರ ರಂಗದಲ್ಲೊಂದು ಮೈಲಿಗಲ್ಲು ನಿರ್ಮಿಸಲು ಕಾತುರದಿಂದ ಕಾದಿದ್ದಾರೆ.

Related post

Leave a Reply

Your email address will not be published. Required fields are marked *

error: Content is protected !!