• October 18, 2024

*ನವರಾತ್ರಿಯ ಎರಡನೇ ದಿನ ಬ್ರಹ್ಮಚಾರಿಣಿ ಮಾತೆಯ ವೈಶಿಷ್ಟ್ಯ*

 *ನವರಾತ್ರಿಯ  ಎರಡನೇ ದಿನ ಬ್ರಹ್ಮಚಾರಿಣಿ ಮಾತೆಯ ವೈಶಿಷ್ಟ್ಯ*

Oplus_131072

 

ಜಗಜ್ಜನನೀ ದುರ್ಗೆಯ ನವ ಶಕ್ತಿಯರಲ್ಲಿ ಎರಡನೇ ಸ್ವರೂಪವು ಬ್ರಹ್ಮಚಾರಿಣಿಯದಾಗಿದೆ. ಇಲ್ಲಿ ’ಬ್ರಹ್ಮ’ ಶಬ್ದದ ಅರ್ಥ ತಪಸ್ಸು ಎಂದು. ಬ್ರಹ್ಮ ಚಾರಿಣಿ ಅರ್ಥಾತ್ ತಪಸ್ಸನ್ನು ಆಚರಿಸುವವಳು. ಪಾರ್ವತಿಯು ಶಿವನನ್ನು ಪಡೆಯಲು ಕಠಿಣ ತಪಸ್ಸನ್ನು ಮಾಡಿದಳು. ಹೀಗಾಗಿಯೇ ತಾಯಿಯ ಈ ರೂಪಕ್ಕೆ ಬ್ರಹ್ಮಚಾರಿಣಿ ಎಂಬ ಹೆಸರು ಬಂತು.ದೇವಿಯ ಸ್ವರೂಪವು ಪೂರ್ಣ ಜ್ಯೋತಿರ್ಮಯ ಹಾಗೂ ಅತ್ಯಂತ ಭವ್ಯವಾಗಿದೆ. ಬಲಗೈಯಲ್ಲಿ ಜಪಮಾಲೆಯನ್ನು ಮತ್ತು ಎಡಗೈಯಲ್ಲಿ ಕಮಂಡಲವನ್ನು ಹಿಡಿದುಕೊಂಡಿರುತ್ತಾಳೆ.

ಬ್ರಹ್ಮಚಾರಿಣಿ ದೇವಿಯು ಸಾಕ್ಷಾತ್‌ ಬ್ರಹ್ಮ ಸ್ವರೂಪ ಅಂದರೆ ತಪಸ್ಸಿನ ರೂಪ. ಈ ತಾಯಿಯು ಭಗವತಿ, ದುರ್ಗಾ, ಶಿವ ಸ್ವರೂಪಾ, ಗಣೇಶ ಜಾನಿ, ನಾರಾಯಣಿ, ವಿಷ್ಣುಮಯ ಮತ್ತು ಪೂರ್ಣ ಬ್ರಹ್ಮ ಸ್ವರೂಪಿಣಿ ಎಂದೂ ಪ್ರಸಿದ್ಧಿಯನ್ನು ಪಡೆದಿದ್ದಾಳೆ. ಇವಳನ್ನು ’ಅಪರ್ಣಾ’ ’ಉಮಾ’ ಎಂದೂ ಕರೆಯುತ್ತಾರೆ. ಇವಳ ಆರಾಧನೆ ಮಾಡುವುದರಿಂದ ತಪಸ್ಸು, ತ್ಯಾಗ, ವೈರಾಗ್ಯ, ಸದಾಚಾರ, ಸಂಯಮಗಳ ವೃದ್ಧಿಯಾಗಿ ಭಕ್ತರಿಗೆ ಸಿದ್ಧಿ ವಿಜಯ ಪ್ರಾಪ್ತಿಯಾಗುತ್ತದೆ. ಈ ಎರಡನೆಯ ದಿನ ಸಾಧಕರು ಮನಸ್ಸನ್ನು ’ಸ್ವಾಧಿಷ್ಠಾನ’ ಚಕ್ರದಲ್ಲಿ ನೆಲೆಗೊಳಿಸುತ್ತಾರೆ. ಬ್ರಹ್ಮಚಾರಿಣಿ ಎಂದರೆ ಆನಂದ ಮತ್ತು ಶಾಂತ ಶಕ್ತಿಯನ್ನು ಹೊಂದಿರುವ ರೂಪ. ಕಠಿಣತೆಯನ್ನು ಅಭ್ಯಾಸ ಮಾಡುವ ತಾಯಿ. ಮೋಕ್ಷವನ್ನು ಪಡೆಯಲು ಬಯಸಿದರೆ ಅಥವಾ ಕಾರ್ಯಗಳ ವಿಮೋಚನೆಗೆ ಬಯಸಿದರೆ ದೇವಿಯ ಈ ಅವತಾರಕ್ಕೆ ಪೂಜೆ ಸಲ್ಲಿಸಿದರೆ ದೇವಿ ಅನುಗ್ರಹ ಮತ್ತು ಸಮೃದ್ಧಿಯನ್ನು ಕೊಡುವಳು. ಹಾಗಾಗಿ ಎರಡನೇ ದಿನ ಧರಿಸಬೇಕಾದ ಬಣ್ಣ ಎಂದರೆ ಶುದ್ಧತೆಯ ಸಂಕೇತವಾದ ಬಿಳಿಬಣ್ಣ.ಬ್ರಹ್ಮಚಾರಿಣಿಯ ಆರಾಧನೆಯು ತಪಸ್ಸಿಗೆ ಸಮವಾಗಿರುತ್ತದೆ. ಭಕ್ತರಲ್ಲಿರುವ ದುರ್ಗುಣಗಳು ಕಳೆದು ಉದಾತ್ತತೆ, ಸದ್ಗುಣಗಳು ಬೆಳೆಯುತ್ತದೆ. ಯಶಸ್ಸಿಗೆ ಅಡ್ಡಲಾಗಿರುವ ಎಲ್ಲಾ ತೊಡಕುಗಳೂ ಸರಿದು ಮನಸ್ಸಿಗೆ ಶಾಂತಿ ಹಾಗೂ ಮಾಡುವ ಎಲ್ಲಾ ಕೆಲಸದಲ್ಲೂ ನೆಮ್ಮದಿ ದೊರೆಯುವುದು.

Related post

Leave a Reply

Your email address will not be published. Required fields are marked *

error: Content is protected !!