• September 21, 2024

ವಿಪರೀತ ಮಳೆಗೆ ಕಾಶಿಪಟ್ಣ ಹಿ.ಪ್ರಾ ಶಾಲೆ ಮೇಲ್ಚಾವಣಿ ಕುಸಿತ: ತಕ್ಷಣ ಸ್ಪಂದಿಸಿದ ಶಾಸಕ ಹರೀಶ್ ಪೂಂಜ: ಊರವರಿಂದ ಮೆಚ್ಚುಗೆ

 ವಿಪರೀತ ಮಳೆಗೆ ಕಾಶಿಪಟ್ಣ ಹಿ.ಪ್ರಾ ಶಾಲೆ ಮೇಲ್ಚಾವಣಿ ಕುಸಿತ: ತಕ್ಷಣ ಸ್ಪಂದಿಸಿದ ಶಾಸಕ ಹರೀಶ್ ಪೂಂಜ: ಊರವರಿಂದ ಮೆಚ್ಚುಗೆ

ವಿಪರೀತ ಮಳೆ ಕಾರಣ ಕಾಶಿಪಟ್ಣ ಹಿರಿಯ ಪ್ರಾಥಮಿಕ ಶಾಲೆ ಮೇಲ್ಚಾವಣಿ ಕುಸಿತಕ್ಕೊಳಗಾಗಿದ್ದು. ಶಾಸಕರ ಗಮನಕ್ಕೆ ತಂದಾಗ ತಕ್ಷಣವೇ ಸ್ಪಂದಿಸಿ ಸಂಬಂಧಪಟ್ಟ ಇಲಾಖೆಯ ಇಂಜಿನಿಯರ್ ಹಾಗೂ ಅಧಿಕಾರಿಗಳನ್ನು ಕಳುಹಿಸಿ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಿ ತುರ್ತು ಕಾಮಗಾರಿಯನ್ನು ನಿರ್ವಹಿಸಲು ಇಲಾಖೆಗೆ ಸೂಚಿಸಿದರು.
ಈ ಹಿಂದೆ ಇದೇ ಶಾಲೆಗೆ ಹೊಸ ಕೊಠಡಿಯನ್ನು ನೀಡಿರುವ ಶಾಸಕರು ಈ ಬಗ್ಗೆಯೂ ಸರಕಾರದ ಗಮನಕ್ಕೆ ತಂದು ತುರ್ತು ಕಾಮಗಾರಿ ನಡೆಸಲು ಅನುದಾನ ನೀಡುವಂತೆ ಒತ್ತಾಯಿಸುತ್ತೇನೆ ಎಂದು ಭರವಸೆ ನೀಡಿದರು.

ತಕ್ಷಣವೇ ಸ್ಪಂದಿಸಿದ ಶಾಸಕ ಹರೀಶ್ ಪೂಂಜಾರಿಗೆ ಪೋಷಕರು ಹಾಗೂ ಊರವರು ಮೆಚ್ಚುಗೆ ವ್ಯಕ್ತಪಡಿಸಿದರು.

Related post

Leave a Reply

Your email address will not be published. Required fields are marked *

error: Content is protected !!