• November 21, 2024

ದಕ್ಷಿಣ ಕನ್ನಡ ಜಿಲ್ಲೆಯ ಪ್ರಯಾಣಿಕರಿಗೆ ಶುಭ ಸುದ್ದಿ. ಶೀಘ್ರದಲ್ಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಎಸ್‌ಆರ್‌ಟಿಸಿ ಸೂಪರ್​ಫಾಸ್ಟ್​ ಬಸ್‌ಗಳ (KSRTC Bus) ಓಡಾಟ ಆರಂಭ

 ದಕ್ಷಿಣ ಕನ್ನಡ ಜಿಲ್ಲೆಯ ಪ್ರಯಾಣಿಕರಿಗೆ ಶುಭ ಸುದ್ದಿ. ಶೀಘ್ರದಲ್ಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಎಸ್‌ಆರ್‌ಟಿಸಿ ಸೂಪರ್​ಫಾಸ್ಟ್​ ಬಸ್‌ಗಳ (KSRTC Bus) ಓಡಾಟ ಆರಂಭ

 

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪ್ರಯಾಣಿಕರಿಗೆ ಶುಭ ಸುದ್ದಿ. ಶೀಘ್ರದಲ್ಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಎಸ್‌ಆರ್‌ಟಿಸಿ ಸೂಪರ್​ಫಾಸ್ಟ್​ ಬಸ್‌ಗಳ (KSRTC Bus) ಓಡಾಟ ಆರಂಭಗೊಳ್ಳಲಿದೆ. ಹೌದು, ಮಂಗಳೂರಿನಿಂದ ಧರ್ಮಸ್ಥಳದವರೆಗೆ ನಾಲ್ಕು ಸೂಪರ್​​ಫಾಸ್ಟ್​​ ಬಸ್​​ಗಳ ಸಂಚಾರ ಆರಂಭವಾಗಲಿದೆ.


ಬಸ್‌ಗಳು ಮಂಗಳೂರಿನ ಬಿಜೈನಲ್ಲಿರುವ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ಕಾರ್ಯನಿರ್ವಹಿಸಲಿವೆ. ಬಂಟ್ವಾಳ, ಕಾರಿಂಜ ಕ್ರಾಸ್, ಪುಂಜಾಲಕಟ್ಟೆ, ಮಡಂತ್ಯಾರು, ಗುರುವಾಯನಕೆರೆ, ಬೆಳ್ತಂಗಡಿ ಮತ್ತು ಉಜಿರೆಯಲ್ಲಿ ಈ ಬಸ್​ಗಳು ಸ್ಟಾಪ್​ ನೀಡಲಿದೆ. ಮಂಗಳೂರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ಬೆಳಗ್ಗೆ 6.15, 6.40, 7.15, 10, 10.45, 11.35, 12.15, ಸಂಜೆ 4.30, ಸಂಜೆ 5.15 ಮತ್ತು ಸಂಜೆ 6 ಗಂಟೆಗೆ ಬಸ್‌ಗಳು ಧರ್ಮಸ್ಥಳಕ್ಕೆ ಹೊರಡಲಿವೆ.


ಹಾಗೆಯೇ ಧರ್ಮಸ್ಥಳದ ಬಸ್​​ ನಿಲ್ದಾಣದಿಂದ ಬೆಳಿಗ್ಗೆ 7.15, 8.15 ಕ್ಕೆ ಹೊರಡಲಿವೆ. ಬೆಳಗ್ಗೆ 8.45, 9.10, ಮಧ್ಯಾಹ್ನ 1, 2.15, 3 ಹಾಗೂ ಸಂಜೆ 4, 6 ಮತ್ತು 6.30ಗಂಟೆಗೆ ಹೊರಡಲಿವೆ.


ಬೆಲೆ ಹೇಗಿದೆ? ಇನ್ನು ಮಂಗಳೂರಿನಿಂದ ಕಾರಿಂಜ ಕ್ರಾಸ್‌ಗೆ ₹51, ಪುಂಜಾಲಕಟ್ಟೆಗೆ ₹56, ಗುರುವಾಯನಕೆರೆಗೆ ₹62, ಬೆಳ್ತಂಗಡಿಗೆ ₹66, ಉಜಿರೆಗೆ ₹71, ಮತ್ತು ಧರ್ಮಸ್ಥಳಕ್ಕೆ ₹86 ದರ ನಿಗದಿಪಡಿಸಲಾಗಿದೆ


ಇದುವರೆಗೆ ಮಂಗಳೂರಿನಲ್ಲಿ ಕೇವಲ ಸಾಮಾನ್ಯ ದರದ ಬಸ್​ಗಳು ಮಾತ್ರ ಲಭ್ಯ ಇತ್ತು. ಇದು ಪ್ರತಿಯೊಂದು ನಿಲ್ದಾಣಗಳಲ್ಲೂ ಸ್ಟಾಪ್​ ನೀಡುತ್ತಿತ್ತು. ಆದ್ರೆ ಈ ಮಧ್ಯೆ ಸೂಪರ್​ಫಾಸ್ಟ್​ ಬಸ್​ಗಳ ಅಗತ್ಯ ಮಂಗಳೂರಿಗಿತ್ತು. ಅದೇ ರೀತಿ ಇದೀಗ ಮಂಗಳೂರು ಜನರಿಗೆ ಗುಡ್​ನ್ಯೂಸ್​ ನೀಡಿದೆ.


ಇನ್ಮುಂದೆ ಮಂಗಳೂರಿನಿಂದ ಧರ್ಮಸ್ಥಳ ಹೋಗುವವರಿಗೆ ತುಂಬಾನೇ ಸುಲಭವಾಗಲಿದ್ದು, ತುರ್ತು ಸಂದರ್ಭಗಳಲ್ಲಿ ಇದು ಸಹಕಾರಿಯಾಗಲಿದೆ. ಕಡಿಮೆ ಸಮಯದಲ್ಲಿ ತಮಗೆ ಬೇಕಾದ ಸ್ಥಳಗಳಿಗೆ ಈ ಮೂಲಕ ಸಂಚಾರ ಮಾಡಬಹುದು.

Related post

Leave a Reply

Your email address will not be published. Required fields are marked *

error: Content is protected !!