ಸುನ್ನೀ ಸಮೂಹ ಸಂಘಟನೆಗಳ ವತಿಯಿಂದ ರಂಝಾನ್ ಕಿಟ್, ಸಾಮೂಹಿಕ ಇಫ್ತಾರ್ ಮೀಟ್
ಬೆಳ್ತಂಗಡಿ: ನಮ್ಮ ಆದಾಯದ ಮೂಲದಿಂದ ಅಳತೆ ಮಾಡಿ ಅದನ್ನು ಅರ್ಹರಿಗೆ ವಿತರಿಸಲು ಇಸ್ಲಾಂ ನಿರ್ದೇಶಿಸುತ್ತದೆ. ಇದೇ ಪ್ರಕಾರ ಎಲ್ಲರೂ ನಡೆದುಕೊಂಡರೆ ಇಸ್ಲಾಂ ನಲ್ಲಿ ಬಡತನ ಎಂಬುದು ನಿವಾರಣೆಯಾಗಬಹುದು ಎಂದು ಸಾದಾತ್ ತಂಙಳ್ ಹೇಳಿದರು.
ಕರ್ನಾಟಕ ಮುಸ್ಲಿಂ ಜಮಾಅತ್ ಕೆಎಮ್‌ಜೆ, ಸುನ್ನೀ ಯುವಜನ ಸಂಘ ಎಸ್‌ವೈಎಸ್, ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ ಎಸ್ಸೆಸ್ಸೆಫ್, ಗುರುವಾಯನಕೆರೆ ಮತ್ತು ಸುನ್ನತ್‌ಕೆರೆ ಯುನಿಟ್ ಗಳ ವತಿಯಿಂದ ಪ್ರತೀ ರಂಝಾನ್ ತಿಂಗಳಲ್ಲಿ ನಡೆಸುವ ಅರ್ಹರಿಗೆ ಆಹಾರದ ಕಿಟ್ ವಿತರಣೆ, ಮಹ್ಲರತುಲ್ ಬದ್ರಿಯ್ಯಾ ಮಜ್ಲಿಸ್ ಮತ್ತು ಸಾಮೂಹಿಕ ಇಫ್ತಾರ್ ಕೂಟದಲ್ಲಿ ಅವರು ಆಶೀರ್ವಚನ ನೀಡಿದರು.ಗುರುವಾಯನಕೆರೆ ಶಾದಿ ಮಹಲ್ ನಲ್ಲಿ ಕಾರ್ಯಕ್ರಮ ನಡೆಯಿತು.
ಈ ಬಾರಿ ಜಮಾಅತ್ ವ್ಯಾಪ್ತಿಯ ಆಯ್ದ 85 ಕುಟುಂಬಗಳಿಗೆ ರಂಜಾನ್ ಕಿಟ್ ವಿತರಿಸಲಾಯಿತು.
ಅಧ್ಯಕ್ಷತೆಯನ್ನು ಎಸ್‌ವೈಎಸ್ ಗುರುವಾಯನಕೆರೆ ಸರ್ಕಲ್ ಅಧ್ಯಕ್ಷ ಹಾಜಿ ಹಸೈನಾರ್ ಶಾಫಿ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಜುನೈದ್ ಸಖಾಪಿ ಮುದರಿಸ್ ಗುರುವಾಯನಕೆರೆ, ದರ್ಗಾ ಸಮಿತಿ ಅಧ್ಯಕ್ಷ ಯಾಕೂಬ್ ಮುಸ್ಲಿಯರ್ ಮೇಲಂತಬೆಟ್ಟು, ಮುಸ್ಲಿಂ ಜಮಾಅತ್ ಗುರುವಾಯನಕೆರೆ ಸರ್ಕಲ್ ಅಧ್ಯಕ್ಷ ಹಮೀದ್ ಮುಸ್ಲಿಯರ್ , ಜಮಾಅತ್ ಅಧ್ಯಕ್ಷ ಹಾಜಿ ಉಸ್ಮಾನ್ ಶಾಫಿ ಉಪಸ್ಥಿತರಿದ್ದರು.