ಬೆಳಾಲು: ಮೈತ್ರಿ ಯುವಕ ಮಂಡಲ (ರಿ.) ಬೆಳಾಲು ಇದರ ಪ್ರಾಯೋಜಕತ್ವದಲ್ಲಿ 2 ಬ್ಯಾರಿಕೆಡ್ ಅಳವಡಿಕೆ
ಬೆಳಾಲು : ಸರಸ್ವತಿ ಹಿರಿಯ ಪ್ರಾಥಮಿಕ ಶಾಲಾ ಮುಂಭಾಗದಲ್ಲಿ ವಿದ್ಯಾರ್ಥಿಗಳ ಹಾಗೂ ಸಾರ್ವಜನಿಕರ ಸುರಕ್ಷೆಯ ದೃಷ್ಟಿಯಿಂದ ಮೈತ್ರಿ ಯುವಕ ಮಂಡಲ (ರಿ.) ಬೆಳಾಲು ಇದರ ಪ್ರಾಯೋಜಕತ್ವದಲ್ಲಿ ಮಾರ್ಚ್ 14 ರಂದು 2 ಬ್ಯಾರಿಕೆಡ್ ಅಳವಡಿಸಲಾಯಿತು.
ಬೆಳಾಲು ಗ್ರಾಮ ಪಂಚಾಯತ್ ಅಧ್ಯಕ್ಷೆ ವಿದ್ಯಾ ಶ್ರೀನಿವಾಸ್ ಗೌಡ ಶ್ರೀ ಸೌಧ ಚಾಲನೆ ನೀಡಿದರು ಯುವಕ ಮಂಡಲ ದ ಈ ಕಾರ್ಯಕ್ಕೆ ಅಭಿನಂದನೆ ಸಲ್ಲಿಸಿ ಇನ್ನಷ್ಟು ಸಮಾಜ ಕಾರ್ಯವು ನಿರಂತರವಾಗಿ ನಡೆಯಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷರಾದ ಜತ್ತನ್ನ ಗೌಡ, ಪಂಚಾಯತ್ ಸದಸ್ಯರಾದ ಸತೀಶ್ ಗೌಡ ಎಳ್ಳುಗದ್ದೆ,ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಲಕ್ಷ್ಮೀಭಾಯಿ, ಯುವಕ ಮಂಡಲ ಗೌರವಾಧ್ಯಕ್ಷರಾದ ರಾಜೇಶ್, ಅಧ್ಯಕ್ಷರಾದ ನಿತಿನ್ ಮೋನಿಶ್, ಸಲಹೆಗಾರರಾದ ಡೀಕಯ್ಯ ಗೌಡ,ಕೇಶವ ಟೈಲರ್, ಶ್ಯಾಮರಾಯ ಆಚಾರ್ಯ ಕಾರ್ಯದರ್ಶಿ ವಿಗ್ನೇಶ್, ಮೆಸ್ಕಾಂ ಸಿಬ್ಬಂದಿ ಆನಂದ, ಬೆಳಾಲು ಸಿ.ಎ. ಬ್ಯಾಂಕ್ ನಿರ್ದೇಶಕರಾದ ವಿಜಯ ಗೌಡ,ಪಂಚಾಯತ್ ಸದಸ್ಯರು, ಸಿಬ್ಬಂದಿ ವರ್ಗ, ವಾಹನ ಚಾಲಕ ಮಾಲಕ ಸಂಘದ ಪದಾಧಿಕಾರಿಗಳು ಸದಸ್ಯರು, ಯುವಕ ಮಂಡಲ ಸರ್ವ ಸದಸ್ಯರು ಗ್ರಾಮಸ್ಥರು ಉಪಸ್ಥಿತರಿದ್ದರು.
ಸರಸ್ವತಿ ಹಿರಿಯ ಪ್ರಾಥಮಿಕ ಶಾಲೆ ಬೆಳಾಲು ಇದರ ಮುಖ್ಯ್ಯೊಪಾಧ್ಯಾಯರಾದ ಚಿದಾನಂದ ರವರು ಸ್ವಾಗತಿಸಿ, ಬೆಳಾಲು ಸಿ.ಎ ಬ್ಯಾಂಕ್ ನಿರ್ದೇಶಕರಾದ ಸುಲೈಮಾನ್ ರವರು ಧನ್ಯವಾದವಿತ್ತರು.