• September 12, 2024

ಆಕಸ್ಮಿಕ ಅಪಘಾತದಲ್ಲಿ ನಿಧನಳಾದ ಬದನಾಜೆ ನಿವಾಸಿ ಅಂಕಿತಾಳ ಕುಟುಂಬಕ್ಕೆ ಬೆಳಕು ಸೇವಾ ಸಂಘ ಬೆಳ್ತಂಗಡಿ ವತಿಯಿಂದ ಆರ್ಥಿಕ ಸಹಾಯ

 ಆಕಸ್ಮಿಕ ಅಪಘಾತದಲ್ಲಿ ನಿಧನಳಾದ ಬದನಾಜೆ ನಿವಾಸಿ ಅಂಕಿತಾಳ ಕುಟುಂಬಕ್ಕೆ  ಬೆಳಕು ಸೇವಾ ಸಂಘ ಬೆಳ್ತಂಗಡಿ ವತಿಯಿಂದ ಆರ್ಥಿಕ ಸಹಾಯ

ಬೆಳಕು ಸೇವಾ ಸಂಘ ಬೆಳ್ತಂಗಡಿ ಇದರ ಫೆಬ್ರವರಿ ತಿಂಗಳ ಸೇವಾ ಯೋಜನೆಯ ಧನಸಹಾಯವನ್ನು ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದು ದಿನಾಂಕ 27-10-2023 ರಂದು ಸಂಜೆ ಶಾಲೆ ಬಿಟ್ಟು ಮನೆಗೆ ತೆರಳುವಾಗ ನಡೆದ ಆಕಸ್ಮಿಕ ಅಪಘಾತದಲ್ಲಿ ನಿಧನಳಾದ ಉಜಿರೆ ಗ್ರಾಮದ ಮಾಚಾರು ಬದನಾಜೆಯ ನಿವಾಸಿ ಶ್ರೀಮತಿ ಜಯಶ್ರೀ ಇವರ ಮಗಳಾದ ಕುಮಾರಿ ಅಂಕಿತಾ (ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಬದನಾಜೆಯ ವಿದ್ಯಾರ್ಥಿ) ಇವಳ ಮನೆಯವರಿಗೆ ಆರ್ಥಿಕ ಸಹಾಯಾರ್ಥವಾಗಿ ₹10,000/- ದ ಚೆಕ್ಕನ್ನು ಬೆಳಕು ಸೇವಾ ಸಂಘದ ಸದಸ್ಯರೂ ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆ ಮಾಯಾ ಬೆಳಾಲು ಇಲ್ಲಿಯ ಮುಖ್ಯಶಿಕ್ಷಕರಾದ ವಿಠಲ.ಎಂ ಇವರ ಮೂಲಕ ಹಸ್ತಾಂತರ ಮಾಡಲಾಯಿತು.


ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಬೆಳ್ತಂಗಡಿ ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಸುರೇಶ್.ಎಂ, ಬೆಳಕು ಸೇವಾ ಸಂಘದ ಸದಸ್ಯರುಗಳಾದ ಬದನಾಜೆ ಪ್ರೌಢ ಶಾಲೆಯ ಶ್ರೀಮತಿ ಮೇಧಾ.ಕೆ, ಸರಕಾರಿ ಉನ್ನತೀಕರಿಸಿದ ಶಾಲೆ ಬದನಾಜೆಯ ಶ್ರೀಮತಿ ಮಮತಾ.ವಿ ಹಾಗೂ ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.

Related post

Leave a Reply

Your email address will not be published. Required fields are marked *

error: Content is protected !!