• November 22, 2024

ಮುಂಬಯಿನಲ್ಲಿ ಪ. ಪೂ. ಸ್ವಾಮಿ ಗೋವಿಂದದೇವ ಗಿರಿ ಮಹಾರಾಜ ಇವರ ‘ಅಮೃತ ಮಹೋತ್ಸವ ಸನ್ಮಾನ ಸಮಾರಂಭ’ದ ಆಯೋಜನೆ !ಫೆಬ್ರವರಿ 14 ರಂದು ಮುಖ್ಯಮಂತ್ರಿ ಮಾನ್ಯ ಏಕನಾಥ ಶಿಂದೆ ಇವರ ಶುಭಹಸ್ತದಿಂದ ಸನ್ಮಾನ

 

ಸ್ವಾತಂತ್ರ್ಯವೀರ ಸಾವರ್ಕರ ರಾಷ್ಟ್ರೀಯ ಸ್ಮಾರಕ ಮತ್ತು ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಕೋಶಾಧ್ಯಕ್ಷ ಪ. ಪೂ. ಸ್ವಾಮಿ ಗೋವಿಂದದೇವ ಗಿರಿ ಮಹಾರಾಜ ಇವರ ಅಮೃತ ಮಹೋತ್ಸವದ ಗೌರವ ಸಮಾರಂಭದ ಆಯೋಜನೆ ಮಾಡಲಾಗಿದ್ದು, ಫೆಬ್ರವರಿ 14 ರಂದು ಮಧ್ಯಾಹ್ನ 4 ಗಂಟೆಗೆ ಸ್ವಾತಂತ್ರ್ಯವೀರ ಸಾವರ್ಕರ ರಾಷ್ಟ್ರೀಯ ಸ್ಮಾರಕ, ಶಿವಾಜಿ ಪಾರ್ಕ್, ದಾದರನಲ್ಲಿ ಮಹಾರಾಷ್ಟ್ರದ ಮುಖ್ಯಮಂತ್ರಿ ಮಾ. ಶ್ರೀ. ಏಕನಾಥ ಶಿಂದೆ ಇವರು ಪ.ಪೂ. ಸ್ವಾಮಿ ಗೋವಿಂದದೇವ ಗಿರಿ ಮಹಾರಾಜ ಇವರನ್ನು ಗೌರವಿಸುವರು.

ಈ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ರಾಜ್ಯದ ಪ್ರಾಥಮಿಕ ಶಿಕ್ಷಣ ಸಚಿವ ಹಾಗೂ ಮುಂಬಯಿ ನಗರ ಪಾಲಿಕೆಯ ಸಚಿವ ದೀಪಕ ಕೆಸರಕರ, ಸ್ವಾತಂತ್ರ್ಯವೀರ ಸಾವರ್ಕರ ರಾಷ್ಟ್ರೀಯ ಸ್ಮಾರಕದ ಕಾರ್ಯಾಧ್ಯಕ್ಷ ಶ್ರೀ. ರಣಜಿತ ಸಾವರ್ಕರ, ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರರಾದ ಶ್ರೀ. ರಮೇಶ ಶಿಂದೆ, ಶಿವಸೇನೆಯ ಶಾಸಕ ಶ್ರೀ. ರಾಹುಲ ಶೇವಾಳೆ, ಭಾಜಪದ ಮುಂಬಯಿ ಪ್ರದೇಶಾಧ್ಯಕ್ಷ ಸಂಸದ ಶ್ರೀ. ಆಶಿಶ ಶೇಲಾರ, ಭಾಜಪದ ವಕ್ತಾರರು ಹಾಗೂ ಸಂಸದ ಶ್ರೀ. ಅತೂಲ ಭಾತಖಲಕರ, ಶಿವಸೇನೆಯ ಮುಖ್ಯ ವಕ್ತಾರರು ಮತ್ತು ಸಂಸದರಾದ ಶ್ರೀ. ಭರತಶೇಠ ಗೋಗಾವಲೆ, ಸುದರ್ಶನ ನ್ಯೂಸ್ ನ ಮುಖ್ಯ ಸಂಪಾದಕರು ಶ್ರೀ. ಸುರೇಶ ಚೌಹಾಣಕೆ, ಸ್ವಾತಂತ್ರ್ಯವೀರ ಸಾವರಕರ ರಾಷ್ಟ್ರೀಯ ಸ್ಮಾರಕದ ಮುಂಬಯಿ ಅಧ್ಯಕ್ಷ ಶ್ರೀ. ಪ್ರವೀಣ ದೀಕ್ಷಿತ್ ಮತ್ತು ಇತರ ಗಣ್ಯರು ಉಪಸ್ಥಿತರಿರುವರು ಎಂದು ಸ್ವಾತಂತ್ರ್ಯವೀರ ಸಾವರ್ಕರ ರಾಷ್ಟ್ರೀಯ ಸ್ಮಾರಕ ಮತ್ತು ಹಿಂದೂ ಜನಜಾಗೃತಿ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

500 ವರ್ಷಗಳ ನಂತರ ಅಯೋಧ್ಯೆಯ ಭವ್ಯ ಶ್ರೀರಾಮ ಮಂದಿರ ನಿರ್ಮಾಣದಲ್ಲಿ ಪ.ಪೂ. ಸ್ವಾಮಿ ಗೋವಿಂದದೇವ ಗಿರಿ ಮಹಾರಾಜರು ಅಮೂಲ್ಯ ಯೋಗದಾನ ನೀಡಿದ್ದಾರೆ. ಅಷ್ಟೇ ಅಲ್ಲ ಅವರು ೧೭ ನೇ ವಯಸ್ಸಿನಿಂದ ಶ್ರೀಮದ್ಭಾಗವತ, ರಾಮಾಯಣ, ಮಹಾಭಾರತ, ಜ್ಞಾನೇಶ್ವರಿ, ದಾಸಬೋಧ, ಯೋಗವಾಸಿಷ್ಠ ಇವುಗಳ ಮೂಲಕ ಜನರಿಗೆ ಶಿಕ್ಷಣ ನೀಡುವಲ್ಲಿ ಮಹತ್ವದ ಕಾರ್ಯ ನಿರ್ವಹಿಸಿದ್ದಾರೆ. ಕಾಂಚಿ ಕಾಮಕೋಟಿ ಪೀಠದ ಶಂಕರಾಚಾರ್ಯ ಸ್ವಾಮಿ ಶ್ರೀ ಜಯೇಂದ್ರ ಸರಸ್ವತಿ ಇವರು ಸ್ವಾಮೀಜಿಯವರಿಗೆ ಪರಮಹಂಸನ್ಯಾಸದ ದೀಕ್ಷೆ ನೀಡಿದ್ದಾರೆ. ಸ್ವಾಮೀಜಿಯವರು ಆಳಂದಿ (ಪುಣೆ) ಯಲ್ಲಿ ಆಶ್ರಮ ಸ್ಥಾಪಿಸಿ ಭವಿಷ್ಯದ ಪೀಳಿಗೆಗಾಗಿ ಸಂತ ‘ಶ್ರೀ ಜ್ಞಾನೇಶ್ವರ ಗುರುಕುಲ’, ‘ಶ್ರೀಕೃಷ್ಣ ಸೇವಾನಿಧಿ ಟ್ರಸ್ಟ್’, ‘ಮಹರ್ಷಿ ವೇದವ್ಯಾಸ ಪ್ರತಿಷ್ಠಾನ’, ಮುಂತಾದರ ಮೂಲಕ ರಾಷ್ಟ್ರ ಮತ್ತು ಧರ್ಮದ ಬೃಹತ್ ಕಾರ್ಯ ಮುಂದುವರೆಸುತ್ತಿದ್ದಾರೆ. ಅವರ ಅಮೃತ ಮಹೋತ್ಸವ ಗೌರವ ಸಮಾರಂಭದ ಪ್ರಯುಕ್ತ ವಿವಿಧ ಕ್ಷೇತ್ರದ ಗಣ್ಯರು ಆಗಮಿಸುವರು. ಈ ಸಮಾರಂಭಕ್ಕೆ ಹಿಂದೂ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿರಬೇಕೆಂದು, ಸ್ವಾತಂತ್ರ್ಯವೀರ ಸಾವರ್ಕರ ರಾಷ್ಟ್ರೀಯ ಸ್ಮಾರಕ ಮತ್ತು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಕರೆ ನೀಡಲಾಗಿದೆ. ಈ ಸಮಾರಂಭದ ಕುರಿತ ಹೆಚ್ಚಿನ ಮಾಹಿತಿಗಾಗಿ 99879 66666 ಈ ಸಂಖ್ಯೆಗೆ ಸಂಪರ್ಕಿಸಿ.

Related post

Leave a Reply

Your email address will not be published. Required fields are marked *

error: Content is protected !!