ಹುಣ್ಸೆಕಟ್ಟೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆ(ರಿ) ಪ್ರಗತಿಬಂಧು/ಜ್ಞಾನವಿಕಾಸ, ಸ್ವಸಹಾಯ ಸಂಘ ಒಕ್ಕೂಟ ಹುಣ್ಸೆಕಟ್ಟೆ ಕಾರ್ಯಕ್ಷೇತ್ರ ಹಾಗೂ ಬೆಳ್ತಂಗಡಿ ಬಿ ಒಕ್ಕೂಟದ ತ್ರೈಮಾಸಿಕ ಸಭೆ
ಹುಣ್ಸೆಕಟ್ಟೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ(ರಿ) ಇದರ ಪ್ರಗತಿಬಂಧು/ಜ್ಞಾನವಿಕಾಸಗಳ ಮತ್ತು ಸ್ವಸಹಾಯ ಸಂಘಗಳ ಒಕ್ಕೂಟ ಹುಣ್ಸೆಕಟ್ಟೆ ಕಾರ್ಯಕ್ಷೇತ್ರ ಹಾಗೂ ಬೆಳ್ತಂಗಡಿ ಬಿ ಒಕ್ಕೂಟದ ತ್ರೈಮಾಸಿಕ ಸಭೆಯು ಜ.14 ರಂದು ಹುಣ್ಸೆಕಟ್ಟೆ ಸಮುದಾಯ ಭವನದಲ್ಲಿ ಒಕ್ಕೂಟದ ಅಧ್ಯಕ್ಷ ಹಾಗೂ ಕೇಂದ್ರ ಒಕ್ಕೂಟದ ಅಧ್ಯಕ್ಷರಾದ ಸೀತಾರಾಮ್.ಆರ್ ರವರ ಅಧ್ಯಕ್ಷತೆಯಲ್ಲಿ, ಪೂಜಶ್ರೀ ಹಾಗೂ ಅಮೃತ ಸ್ವ ಸಹಾಯ ಸಂಘದ ಜವಾಬ್ದಾರಿಯಲ್ಲಿ ನಡೆಯಿತು.
ಸಭೆಯಲ್ಲಿ ಜ.28ರ ಆದಿತ್ಯವಾರದಂದು ಹುಣ್ಸೆಕಟ್ಟೆ ಸಮುದಾಯ ಭವನದಲ್ಲಿ ನಡೆಯಲಿರುವ 25ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆಯ ಆಮಂತ್ರಣ ಪತ್ರಿಕೆಯನ್ನು ತಾಲೂಕಿನ ಯೋಜನಾಧಿಕಾರಿ ಸುರೇಂದ್ರ ಇವರ ಸಮ್ಮುಖದಲ್ಲಿ ಬಿಡುಗಡೆ ಗೊಳಿಸಲಾಯಿತು.
ಹುಣ್ಸೆಕಟ್ಟೆ ಕಾರ್ಯಕ್ಷೇತ್ರದ ಮತ್ತು ಬೆಳ್ತಂಗಡಿ ಬಿ ಕಾರ್ಯಕ್ಷೇತ್ರದ ಒಕ್ಕೂಟದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ನಂತರ ತಾಲೂಕಿನ ಯೋಜನಾಧಿಕಾರಿ ಸುರೇಂದ್ರರವರು ಮಾತನಾಡುತ್ತಾ ಯೋಜನೆಯಿಂದ ಇರುವ ವಿಮಾ ಸೌಲಭ್ಯಗಳ ಮಾಹಿತಿ ನೀಡಿದರು .
ಕೇಂದ್ರ ಒಕ್ಕೂಟದ ಅಧ್ಯಕ್ಷರಾದ ಸೀತಾರಾಮ್ ಆರ್ ರವರು ಮಾತನಾಡುತ್ತ, ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳನ್ನು ಅಭಿನಂದಿಸುತ್ತ ಕಳೆದ 3 ವರ್ಷಗಳಲ್ಲಿ ಹುಣ್ಸೆಕಟ್ಟೆ ಒಕ್ಕೂಟವನ್ನು ಮುನ್ನಡೆಸಿಕೊಂಡು ಹೋಗಲು ಅವಕಾಶ ಕಲ್ಪಿಸಿದಕ್ಕಾಗಿ ಎಲ್ಲರಿಗೂ ಅಬಾರಿಯಾಗಿರುವುದಾಗಿ ತಿಳಿಸಿದರು.
ವೇದಿಕೆಯಲ್ಲಿ ಒಕ್ಕೂಟದ ಅಧ್ಯಕ್ಷ ಹಾಗೂ ಕೇಂದ್ರ ಒಕ್ಕೂಟದ ಅಧ್ಯಕ್ಷರಾದ ಸೀತಾರಾಮ್.ಆರ್. ಬೆಳ್ತಂಗಡಿ ಬಿ. ಒಕ್ಕೂಟ ಅಧ್ಯಕ್ಷ ರಾದ ಚರಣ್,ಉಪಾಧ್ಯಕ್ಷರಾದ ಅನಿತಾ, ಒಕ್ಕೂಟದ ಕಾರ್ಯದರ್ಶಿಗಳಾದ ಸುಧಾ ಮತ್ತು ಸುಮಂತ್,ಕೋಶಾಧಿಕಾರಿಗಳಾದ ಮೋಹಿನಿ, ಅಶ್ವಿನಿ,ಯೋಜನಾಧಿಕಾರಿ ಸುರೇಂದ್ರ , ವಲಯ ಮೇಲ್ವಿಚಾರಕರಾದ ಹರೀಶ್ ಗೌಡ, ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಅಧ್ಯಕ್ಷ ಲಕ್ಷ್ಮಣ ಕೆಂಬರ್ಜೆ, ಸೇವಾಪ್ರತಿನಿಧಿಗಳಾದ ಶ್ರೀಮತಿ ವನಿತಾ, ಶ್ರೀಮತಿ ಸೌಮ್ಯ, ಹಾಗೂ ಉಪ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.