• October 14, 2024

ಶ್ರೀ. ಧ. ಮಂ. ಆ. ಮಾಧ್ಯಮ ಶಾಲೆ, ಧರ್ಮಸ್ಥಳದಲ್ಲಿ ಅಗಲಿದ ದಿವ್ಯ ಚೇತನ ಅಮೃತ ಸೋಮೇಶ್ವರ ಅವರಿಗೆ ನುಡಿ ನಮನ

 ಶ್ರೀ. ಧ. ಮಂ. ಆ. ಮಾಧ್ಯಮ ಶಾಲೆ, ಧರ್ಮಸ್ಥಳದಲ್ಲಿ ಅಗಲಿದ ದಿವ್ಯ ಚೇತನ ಅಮೃತ ಸೋಮೇಶ್ವರ ಅವರಿಗೆ ನುಡಿ ನಮನ

 


ಅಗಲಿದ ದಿವ್ಯ ಚೇತನ ,ಕವಿ ,ಸಾಹಿತಿ,ತುಳುನಾಡಿನ ಸಾಹಿತಿ ಶ್ರೀಯುತ ಅಮೃತ ಸೋಮೇಶ್ವರ ಅವರು ನಮ್ಮನ್ನೆಲ್ಲ ಅಗಲಿರುವುದು ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟ. ಅಕ್ಷರ ಅಕ್ಷರದಲ್ಲೂ ಅವರ ಮೂಡಿಸಿರುವ ಸಾಹಿತ್ಯದ ಕೃಷಿ ತುಳುನಾಡಿಗೆ ಅವರು ಕೊಟ್ಟಂತಹ ಸಾಹಿತ್ಯಿಕ ಕೊಡುಗೆ ಅಮರವಾದುದು ಎಂಬುದಾಗಿ ಶ್ರೀಯುತರ ಸಾಧನೆಗಳನ್ನು ಶ್ರೀಮತಿ ಶಶಿಕಲಾ ವಿದ್ಯಾರ್ಥಿಗಳಿಗೆ ವಿವರಿಸುತ್ತಾ ಅಗಲಿದ ದಿವ್ಯ ಚೇತನಕ್ಕೆ ಶಾಲಾ ಪ್ರಾರ್ಥನಾ ಸಮಯದಲ್ಲಿ ನುಡಿನಮನ ಸಲ್ಲಿಸಿದರು.

ಶ್ರೀಯುತ ಅಮೃತ ಸೋಮೇಶ್ವರ ಭಾವಚಿತ್ರಕ್ಕೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳೆಲ್ಲರೂ ಜೊತೆಯಾಗಿ ಪುಷ್ಪ ನಮನವನ್ನು ಸಲ್ಲಿಸಿದರು.

ಶಾಲಾ ಮುಖ್ಯ ದ್ವಾರದಲ್ಲಿ ಶ್ರೀಯುತ ಅಮೃತ ಸೋಮೇಶ್ವರ ಬರೆದಿರುವಂತಹ ಕೃತಿಗಳ ಪರಿಚಯವನ್ನು ಹಾಗೂ ಅವರ ಜೀವನದ ಅನೇಕ ಮಾಹಿತಿ ನೀಡುವ ವಿಚಾರಗಳನ್ನು ನೋಟಿಸ್ ಬೋರ್ಡ್ ನಲ್ಲಿ ಹಾಕಲಾಗಿತ್ತು.ಶಾಲಾ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರದ್ಧಾಂಜಲಿ ಸಲ್ಲಿಸಿದರು.

Related post

Leave a Reply

Your email address will not be published. Required fields are marked *

error: Content is protected !!