ಹುಣ್ಸೆಕಟ್ಟೆ ಗಣಪನಿಗೆ ದುಷ್ಕರ್ಮಿಗಳಿಂದ ರಾಜಕೀಯ ಬಣ್ಣ: ಕಿಡಿಗೇಡಿಗಳಿಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಹುಣ್ಸೆಕಟ್ಟೆ ಶ್ರೀ ರಾಮ ಭಜನಾ ಮಂಡಳಿ ವತಿಯಿಂದ ಬೆಳ್ತಂಗಡಿ ಪೊಲೀಸರಿಗೆ ಮನವಿ
ಹುಣ್ಸೆಕಟ್ಟೆ: ಶ್ರೀ ರಾಮ ಭಜನಾ ಮಂಡಳಿ ಹುಣ್ಸೆಕಟ್ಟೆ ಇದರ ವತಿಯಿಂದ ಜರುಗಿದ 22 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕಿಡಿಗೇಡಿಗಳು ಅಪಪ್ರಚಾರ ಮಾಡಿದ್ದು, ಕಿಡಿಗೇಡಿಗಳ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸೆ.6 ರಂದು ಹುಣ್ಸೆಕಟ್ಟೆ ಶ್ರೀ ರಾಮ ಭಜನಾ ಮಂಡಳಿ ಅಧ್ಯಕ್ಷರು ಹಾಗೂ ಸರ್ವಸದಸ್ಯರು ಬೆಳ್ತಂಗಡಿ ಪೊಲೀಸ್ ಠಾಣೆಗೆ ಮನವಿಯನ್ನು ನೀಡಿದರು.
ಹುಣ್ಸೆಕಟ್ಟೆ ಇದರ ವತಿಯಿಂದ ಜರುಗಿದ 22 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ವು ಎಲ್ಲರ ಸಹಕಾರದಿಂದ ಬಹಳ ವಿಜೃಂಭಣೆಯಿಂದ ಯಾವುದೇ ಜಾತಿ, ಮತ, ಧರ್ಮ, ರಾಜಕೀಯ ಬೇದವಿಲ್ಲದೆ ನಡೆದುಕೊಂಡು ಬಂದಿದ್ದು, ಈ ವರ್ಷದ ಗಣೇಶೋತ್ಸವದ ಶೋಭಯಾತ್ರೆಯ ಸಂದರ್ಭ ಧ್ವನಿವರ್ಧಕ ದಲ್ಲಿ ಹಾಕಲಾದ ಹಾಡನ್ನು ತಿರುಚಿ ಮೋದಿ ಮೋದಿ ಎಂದು ಘೋಷಣೆ ಕೂಗಿದ್ದಾರೆಂದು ಹುಣ್ಸೆಕಟ್ಟೆ ಗಣಪತಿ ಉತ್ಸವದಲ್ಲಿ ಮೋದಿ ಮೋದಿ ರಾಜಕೀಯ ಎಂದು ಬಿಂಬಿಸಿ ಪ್ರಧಾನಿಯವರಿಗೆ ಮೋದಿ ಗಣಪತಿ ಎಂದು ಅಗೌರವವನ್ನು ಯಾರೊ ಕಿಡಿಗೇಡಿಗಳು ತೋರಿದ್ದು, ಇನ್ನಿತರ ರಾಜಕೀಯ ಪ್ರೇರಿತವಾದ ಮೋದಿ ಗಣಪತಿ, ಅಡ್ವಾಣಿ ಗಣಪತಿ, ಕರಂದ್ಲಾಜೆ ಗಣಪತಿ, ಯೋಗಿ ಗಣಪತಿ ಎಂಬ ಹೆಸರುಗಳನ್ನು ಸೇರಿಸಿ ಹುಣ್ಸೆಕಟ್ಟೆ ಯಲ್ಲಿ ಜರುಗುವ ಶಾಂತಿಯುತವಾದ ಗಣೇಶೋತ್ಸವ ಕ್ಕೆ ಕೋಮುವಾದದ ಮತ್ತು ರಾಜಕೀಯ ಬಣ್ಣ ಹಚ್ಚಿ ಹುಣ್ಸೆಕಟ್ಟೆ ಊರನ್ನು ಅವಮಾನಿಸಿ ಸಾಮಾಜಿಕ ಜಾಲತಾಣಗಳಲ್ಲಿ ಯಾರೋ ದುಷ್ಕರ್ಮಿಗಳು ಹರಿಬಿಟ್ಟಿದ್ದಾರೆ.
ಹುಣ್ಸೆಕಟ್ಟೆಯಲ್ಲಿ ನಡೆದ ಸಾರ್ವಜನಿಕ ಶ್ರೀ ಗಣೇಶೋತ್ಸವ ಕ್ಕೆ ಅವಮಾನ ಮಾಡಿರುವ ದುಷ್ಕರ್ಮಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಶ್ರೀ ರಾಮ ಭಜನಾ ಮಂಡಳಿ ಹುಣ್ಸೆಕಟ್ಟೆ ವತಿಯಿಂದ ಬೆಳ್ತಂಗಡಿ ಪೊಲೀಸ್ ಠಾಣೆಗೆ ಮನವಿಯಲ್ಲಿ ಆಗ್ರಹಿಸಲಾಯಿತು.