• October 16, 2024

ಬಳಂಜ:ಊರವರ ಪರವಾಗಿ ಶಾಸಕ ಹರೀಶ್ ಪೂಂಜರವರಿಗೆ ಅದ್ದೂರಿ ಸನ್ಮಾನ

 ಬಳಂಜ:ಊರವರ ಪರವಾಗಿ ಶಾಸಕ ಹರೀಶ್ ಪೂಂಜರವರಿಗೆ ಅದ್ದೂರಿ ಸನ್ಮಾನ

 

ಬಳಂಜ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಬಳಂಜ, ನಾಲ್ಕೂರು, ತೆಂಕಕಾರಂದೂರು ಇದರ ಆಶ್ರಯದಲ್ಲಿ ನಡೆದ ಶ್ರೀ ಗಣೇಶೋತ್ಸವದ ಭವ್ಯ ವೇದಿಕೆಯಲ್ಲಿ ಶಾಸಕ ಹರೀಶ್ ಪೂಂಜರವರನ್ನು ಊರ ಗ್ರಾಮಸ್ಥರ ಪರವಾಗಿ ಹೂ ಹಾರ, ಶಾಲು ಹಾಕಿ,ಕೇಸರಿ ಪೇಟಾ ತೊಡಿಸಿ,ಫಲ ಪುಷ್ಪ ನೀಡಿ,ಸ್ಮರಣಿಕೆ,ಬಾಲಗಂಗಾಧರ ತಿಲಕರ ಭಾವಚಿತ್ರ, ದೊಡ್ಡ ಸನ್ಮಾನ ಪತ್ರ,ಗಣಪತಿ ಮೂರ್ತಿ ನೀಡಿ ಅದ್ದೂರಿಯಾಗಿ ಸನ್ಮಾನಿಸಲಾಯಿತು.

ಬಳಂಜ ಶಾಲೆಯ ಮುಖ್ಯ ರಸ್ತೆಗೆ ಸುಮಾರು ರೂ 4.25 ಲಕ್ಷದ ಇಂಟರ್ ಲಾಕ್ ಅಳವಡಿಸಿ ಶಾಲೆ ಹಾಗೂ ಊರಿನ ಅಭಿವೃದ್ಧಿಗೆ ಹಚ್ಚಿನ‌ ಸಹಕಾರ ನೀಡಿ ಸಹಕರಿಸಿದ ಶಾಸಕರ ಅಭಿವೃದ್ಧಿ ಕೆಲಸಕ್ಕೆ ಅಭಿನಂದನೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಪ್ರಮುಖರಾದ ದೇವೇಂದ್ರ ಹೆಗ್ಡೆ ಕೊಕ್ರಾಡಿ,ಜಯಂತ್ ಕೋಟ್ಯಾನ್, ಡಾ. ಸದಾನಂದ ಪೂಜಾರಿ,ಸಂತೋಷ್ ಪಿ ಕೋಟ್ಯಾನ್ ಬಳಂಜ, ಸಂತೋಷ್ ಕುಮಾರ್ ಕಾಪಿನಡ್ಕ,ಸತೀಶ್ ರೈ ಬಾರ್ದಡ್ಕ, ಶಾಲಾ ಮುಖ್ಯ ಶಿಕ್ಷಕ ವಿಲ್ಪ್ರೆಡ್ ಪಿಂಟೋ,ರಾಕೇಶ್ ಹೆಗ್ಡೆ ಬಳಂಜ, ವಿಶ್ವನಾಥ ಹೊಳ್ಳ,ಸುಂದರ ಹೆಗ್ಡೆ ವೇಣೂರು ಬಿ.ಪ್ರಮೋದ್ ಕುಮಾರ್,ಜಗದೀಶ್ ರೈ, ಪ್ರವೀಣ್ ಕುಮಾರ್ ಹೆಚ್.ಎಸ್,ಯಶವಂತ್ ಎಸ್,ಪ್ರಸಾದ್ ಬಿ.ಎಸ್,ಹರೀಶ್ ವೈ ಚಂದ್ರಮ,ಬಾಲಕೃ ಪೂಜಾರಿ,ರಂಜಿತ್ ಹೆಚ್.ಡಿ, ಯತೀಶ್ ವೈ.ಎಲ್, ಯಶೋಧರ ಶೆಟ್ಟಿ, ಕರುಣಾಕರ ಹೆಗ್ಡೆ,ಗಣೇಶ್ ದೇವಾಡಿಗ,ದಿನೇಶ್ ಅಂತರ, ಪ್ರಜ್ವಲ್ ಕುಮಾರ್,ಹೇಮಂತ್, ವಿಜಯ್ ಹೆಗ್ಡೆ,ಜಗದೀಶ್ ಕೋಟ್ಯಾನ್, ಶರತ್ ಅಂಚನ್, ಪ್ರವೀಣ್ ಡಿ.ಕೋಟ್ಯಾನ್,ಚಂದ್ರಹಾಸ್ ಬಳಂಜ ಹಾಗೂ ಗ್ರಾಮಸ್ಥರು, ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

Related post

Leave a Reply

Your email address will not be published. Required fields are marked *

error: Content is protected !!