ಆರಿಕೋಡಿ: ಭಕ್ತನಿಗೆ ಶ್ರೀ ರಕ್ಷೆಯಾದ ಅಭಯದ ನುಡಿ: ಜಲದ ಸಮಸ್ಯೆಯನ್ನು ಎದುರಿಸುತ್ತಿದ್ದ ಭಕ್ತನ ಇಲೆಯಲ್ಲಿ ಚಿಮ್ಮಿದ ಗಂಗಾಮಾತೆ
ಆರಿಕೋಡಿ: ಸಾವಿರ ಸಾವಿರ ಭಕ್ತರ ಇಷ್ಟಾರ್ಥಗಳನ್ನು ಅಭಯದ ನುಡಿಯ ಮೂಲಕ ಪರಿಹರಿಸುವ ದೇವಿಯಾಗಿ ಆರಿಕೋಡಿ ಯಲ್ಲಿ ನೆಲೆನಿಂತ ಶ್ರೀ ಚಾಮುಂಡೇಶ್ವರಿ ದೇವಿಯ ಪವಾಡ ಅತ್ಯದ್ಬುತವಾದುದು.
ತಾಯಿಯಾಗಿ ನಿನ್ನ ಕಂದನ ಕಷ್ಟವನ್ನು ಪರಿಹರಿಸು ಎಂದು ದೇವಿಯ ಮುಂದೆ ತನ್ನ ಅಳಲನ್ನು ಹೇಳಿಕೊಂಡಾಗ ತನ್ನ ಕಷ್ಟಗಳಿಗೆ ಸ್ಪಂದಿಸಿ ಇಷ್ಟಾರ್ಥವನ್ನು ಈಡೇರಿಸಿದ ಅದೆಷ್ಟೊ ಉದಾಹರಣೆಗಳು ನಮ್ಮ ಕಣ್ಣ ಮುಂದೆ ಇದೆ ಅಂತೆಯೆ ಸುಳ್ಯ ತಾಲೂಕಿನ ಚೊಕ್ಕಾಡಿ ಪರಿಸರದ ಪದ್ಮನಾಭ ಎಂಬವರ ಭೂಮಿಯಲ್ಲಿ ಜಲದ ಸಮಸ್ಯೆಗೆ ಪರಿಹಾರ ಸಿಕ್ಕಿರುವುದು ಪದ್ಮನಾಭ ಎಂಬವರ ಮನದಲ್ಲಿ ಸಂತಸ ಮೂಡಿದೆ.
ತನ್ನ ಇಲೆಯಲ್ಲಿ ನೀರಿನ ಸಮಸ್ಯೆ ಇರುವುದನ್ನು ಕಂಡ ಪದ್ಮನಾಭ ಅವರು ಆರಿಕೋಡಿ ಶ್ರೀ ಚಾಮುಂಡೇಶ್ವರಿ ಸನ್ನಿಧಾನಕ್ಕೆ ಬರುತ್ತಾರೆ. ಅಭಯದ ನುಡಿಯ ಮೂಲಕ ತನ್ನ ಕಷ್ಟವನ್ನು ದೇವಿಯಲ್ಲಿ ಹೇಳಿದಾಗ ಪರಿಹಾರ ನೀಡುವುದಾಗಿ ಭರವಸೆ ನೀಡುತ್ತಾಳೆ ಮಹಾತಾಯಿ ಅದರಂತೆ ಜಲದ ಸಮಸ್ಯೆಯು ಮಾಯವಾಗಿ ಇಲೆಯಲ್ಲಿ ಜಲ ಚಿಮ್ಮುತ್ತದೆ. ನುಡಿದಂತೆ ನಡೆದ ದೇವಿಗೆ ಸೇವೆಯನ್ನು ಸಲ್ಲಿಸಿದ್ದಾರೆ.