ಅಯೋಧ್ಯೆಯಂತೆ ಕಾಶಿ ಮಥುರಾ ಸಹಿತ ಇತರ ಎಲ್ಲ ತೀರ್ಥಕ್ಷೇತ್ರಗಳಲ್ಲೂ ಮದ್ಯ ಮಾಂಸ ನಿಷೇಧಿಸಿ ! – ಮೋಹನ ಗೌಡ, ರಾಜ್ಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ
ಇದೇ ಜನವರಿ 22, 2024 ರಂದು ಅಯೋಧ್ಯೆಯಲ್ಲಿ ನಡೆಯುವ ಶ್ರೀರಾಮ ಮಂದಿರದ ಪ್ರಾಣಪ್ರತಿಷ್ಠಾಪನೆಯ ಹಿನ್ನೆಲೆಯಲ್ಲಿ ಆ ಪ್ರದೇಶದಲ್ಲಿ ಮದ್ಯಮಾಂಸಕ್ಕೆ ಸಂಪೂರ್ಣ ನಿಷೇಧಿಸಬೇಕೆಂದು ಹಿಂದೂ ಜನಜಾಗೃತಿ ಸಮಿತಿಯಿಂದ ಉತ್ತರಪ್ರದೇಶದ ಸನ್ಮಾನ್ಯ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರಿಗೆ ಮನವಿ ಸಲ್ಲಿಸಲಾಗಿತ್ತು. ಅದಕ್ಕಾಗಿ ಅನೇಕ ಸ್ಥಳಗಳಿಂದ ಹಿಂದುತ್ವನಿಷ್ಟ ಸಂಘಟನೆಗಳು ಒಟ್ಟು ಸೇರಿ ಆಂದೋಲನವನ್ನೂ ನಡೆಸಿದರು. ಇದಕ್ಕೆ ತತ್ಪರತೆಯಿಂದ ಉತ್ತರಿಸಿ ಉತ್ತರಪ್ರದೇಶದ ಮುಖ್ಯಮಂತ್ರಿ ಸನ್ಮಾನ್ಯ ಯೋಗಿ ಆದಿತ್ಯನಾಥ ಇವರು ಅಯೋಧ್ಯೆಯ 84 ಮೈಲಿ ದೂರದ ಪ್ರದಕ್ಷಿಣೆ ಯಾತ್ರೆಯ ಕ್ಷೇತ್ರದಲ್ಲಿ ಮದ್ಯವನ್ನು ನಿಷೇಧಿಸಿದ್ದಾರೆ.
ಈ ಶ್ಲಾಘನೀಯ ನಿರ್ಣಯವನ್ನು ಹಿಂದೂ ಜನಜಾಗೃತಿ ಸಮಿತಿ ಸ್ವಾಗತಿಸುತ್ತದೆ ಮತ್ತು ಉತ್ತರಪ್ರದೇಶ ಸರಕಾರಕ್ಕೆ ಆಭಾರ ವ್ಯಕ್ತಪಡಿಸುತ್ತದೆ.
ಇದೇ ರೀತಿ ಎಲ್ಲಾ ಧಾರ್ಮಿಕ ಕ್ಷೇತ್ರಗಳ ಪಾವಿತ್ರ‍್ಯ ಕಾಪಾಡಲು ಕಾಶಿ, ಮಥುರಾ ಮತ್ತು ಇತರೆ ಎಲ್ಲಾ ತೀರ್ಥಕ್ಷೇತ್ರಗಳ ಪರಿಸರದಲ್ಲಿ ಮದ್ಯಮಾಂಸದ ಮೇಲೆ ಸಂಪೂರ್ಣ ನಿಷೇಧ ಹೇರಬೇಕೆಂದು ಹಿಂದೂ ಜನಜಾಗೃತಿ ಸಮಿತಿಯಿಂದ ಸನ್ಮಾನ್ಯ ಯೋಗಿಜಿಯವರಲ್ಲಿ ಮನವಿ ಸಲ್ಲಿಸಲಾಗಿದೆ.
ಇಂದು ದೇಶದಲ್ಲಿನ ಅನೇಕ ದೇವಸ್ಥಾನಗಳು, ತೀರ್ಥಕ್ಷೇತ್ರಗಳು ಮುಂತಾದ ಸ್ಥಳಗಳಲ್ಲಿ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ. ಈ ಸ್ಥಳಗಳಲ್ಲಿ ‘ಪ್ರವಾಸೋದ್ಯಮ’ದ ಹೆಸರಿನಲ್ಲಿ ಬಿಯರ್ ಬಾರ್, ಡಾನ್ಸ್ ಬಾರ್, ಲಿಕರ್ ಶಾಪ್, ಚೈನೀಸ್ ಆಹಾರ ಪದಾರ್ಥದ ಅಂಗಡಿ, ಮಸಾಜ್ ಸೆಂಟರ್, ಮಟನ್ ಶಾಪ್ ಬೃಹತ್ ಪ್ರಮಾಣದಲ್ಲಿ ತೆರೆಯಲಾಗುತ್ತದೆ. ಪ್ರತ್ಯಕ್ಷದಲ್ಲಿ ಭಕ್ತರು ದೇವರ ದರ್ಶನ, ತೀರ್ಥಯಾತ್ರೆ, ಸಾಧನೆಗಾಗಿ ಇಂತಹ ಸ್ಥಳಗಳಿಗೆ ಬರುತ್ತಾರೆ. ಮದ್ಯ-ಮಾಂಸ ಅಥವಾ ಮೋಜು-ಮಸ್ತಿ ಮಾಡುವುದಕ್ಕಲ್ಲ. ಆದ್ದರಿಂದ ಭಕ್ತರಿಗಾಗಿ ಸುವಿಧಗಳನ್ನಂತೂ ಮಾಡಬೇಕು; ಆದರೆ ಅದರ ಜೊತೆಗೆ ಇಂತಹ ಪವಿತ್ರ ಸ್ಥಾನದ ಪಾವಿತ್ರ‍್ಯತೆಯನ್ನೂ ರಕ್ಷಿಸಬೇಕು. ಕೆಲವು ತೀರ್ಥಕ್ಷೇತ್ರಕ್ಕೆ ಹೋದಾಗ ಅಲ್ಲಿಯ ಪಾವಿತ್ರ್ಯ
ರಕ್ಷಿಸದಿರದ ಕಾರಣ ನಿಜವಾಗಿಯೂ ನಾವು ತೀರ್ಥಕ್ಷೇತ್ರಗಳಿಗೆ ಬಂದಿದ್ದೇವಾ ? ಎಂದು ಸಂದೇಹ ನಿರ್ಮಾಣವಾಗುತ್ತದೆ. ಆದ್ದರಿಂದ ಈ ಹಿಂದೆ ಹರಿದ್ವಾರ ಮತ್ತು ಋಷಿಕೇಶ ಇಲ್ಲಿಯೂ ಸ್ಥಳೀಯ ಆಡಳಿತದಿಂದ ಮದ್ಯ ಮಾಂಸದ ಮೇಲೆ ನೂರರಷ್ಟು ನಿಷೇಧ ಹೇರಿತ್ತು. ಹರಿದ್ವಾರ ಮತ್ತು ಋಷಿಕೇಶ ಈ ತೀರ್ಥಕ್ಷೇತ್ರಗಳಲ್ಲಿ ಕುಂಭಮೇಳ ನಡೆಯುತ್ತದೆ. ಅದಕ್ಕಾಗಿ ಹೆಚ್ಚಿನ ಸಂಖ್ಯೆಯ ಭಕ್ತರು ಅಲ್ಲಿ ಧಾರ್ಮಿಕ ಉಪಾಸನೆ ಮಾಡಲು ಬರುತ್ತಾರೆ. ಕೋಟ್ಯಾಂತರ ಭಕ್ತರ ಧಾರ್ಮಿಕ ಭಾವನೆ ತೀರ್ಥಕ್ಷೇತ್ರದ ಜೊತೆಗೆ ಜೋಡಣೆಯಾಗಿರುತ್ತದೆ. ಇದನ್ನು ಪ್ರಾಧಾನ್ಯವಾಗಿ ವಿಚಾರ ಮಾಡಿ ಈ ನಿಷೇಧವನ್ನು ಮಾನ್ಯ ಸರ್ವೋಚ್ಚ ನ್ಯಾಯಾಲಯವು ಖಾಯಂಗೊಳಿಸಿತು. ಇದೇ ಭೂಮಿಕೆಯಲ್ಲಿ ಎಲ್ಲಾ ತೀರ್ಥಕ್ಷೇತ್ರ ಸ್ಥಳಗಳಲ್ಲಿ ಮದ್ಯ ಮಾಂಸದ ಮೇಲೆ 100ರಷ್ಟು ನಿಷೇಧ ಹೇರಬೇಕೆಂದು ಸಮಿತಿ ಆಗ್ರಹಿಸಿದೆ.