• November 21, 2024

ಹಲಾಲ್ ಪ್ರಮಾಣಿತ’ ಉತ್ಪಾದನೆಗಳ ಮೇಲೆ ನಿಷೇಧ ಹೇರುವ ತಯಾರಿಯಲ್ಲಿರುವ ಯೋಗಿ ಆದಿತ್ಯನಾಥ ಇವರಿಗೆ ಅಭಿನಂದನೆ ! – ಹಿಂದೂ ಜನಜಾಗೃತಿ ಸಮಿತಿ

 ಹಲಾಲ್ ಪ್ರಮಾಣಿತ’ ಉತ್ಪಾದನೆಗಳ ಮೇಲೆ ನಿಷೇಧ ಹೇರುವ ತಯಾರಿಯಲ್ಲಿರುವ  ಯೋಗಿ ಆದಿತ್ಯನಾಥ ಇವರಿಗೆ ಅಭಿನಂದನೆ ! – ಹಿಂದೂ ಜನಜಾಗೃತಿ ಸಮಿತಿ

 

ಉತ್ತರಪ್ರದೇಶದ ಮಾನ್ಯ ಮುಖ್ಯಮಂತ್ರಿ ಯೋಗಿ ಆದಿತ್ಯನಾಥಜಿ ಇವರು ‘ಲವ್ ಜಿಹಾದ್’ ದ ವಿರುದ್ಧ ಕಠಿಣ ಕಾನೂನು ರೂಪಿಸಿ ಆದರ್ಶ ನಿರ್ಮಿಸಿದ್ದಾರೆ. ಅವರು ಈಗ ಹಲಾಲ್ ಜಿಹಾದ್’ನ ಮೂಲಕ ನಡೆಯುತ್ತಿರುವ ದೇಶ ವಿರೋಧಿ ಷಡ್ಯಂತ್ರ ತಡೆಗಟ್ಟಲು ನೇತೃತ್ವ ವಹಿಸಿದ್ದಾರೆ.

ಹಲಾಲ್ ಪ್ರಮಾಣೀಕೃತ ಉತ್ಪಾದನೆಗಳ ಹೆಸರಿನಲ್ಲಿ ಈ ಉತ್ಪಾದನೆಗಳಿಗೆ ಕಾನೂನು ಬಾಹಿರವಾಗಿ ಸರ್ಟಿಫಿಕೇಷನ್ ನೀಡಲಾಗುತ್ತಿರುವುದರ ಬಗ್ಗೆ ಉತ್ತರಪ್ರದೇಶದಲ್ಲಿನ ಹಜರತಗಂಜ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಮತ್ತು ಇದರ ಬಗ್ಗೆ ರಾಜ್ಯದ ಮುಖ್ಯಮಂತ್ರಿ ಮಾನ್ಯ ಯೋಗಿ ಆದಿತ್ಯನಾಥಜಿ ಇವರು ತಕ್ಷಣ ಗಮನ ಹರಿಸಿ ಕಠೋರ ನಿರ್ಣಯ ತೆಗೆದುಕೊಳ್ಳುವ ಸಿದ್ಧತೆ ನಡೆಸಿದ್ದಾರೆ, ಎಂದು ಸಮಾಚಾರವಿದೆ. ಇದರ ಬಗ್ಗೆ ಹಿಂದೂ ಜನಜಾಗೃತಿ ಸಮಿತಿ ಉತ್ತರಪ್ರದೇಶದ ಮುಖ್ಯಮಂತ್ರಿ ಮಾನ್ಯ ಯೋಗಿ ಆದಿತ್ಯನಾಥಜಿ ಇವರನ್ನು ಮನಪೂರ್ವಕವಾಗಿ ಅಭಿನಂದಿಸುತ್ತಿದೆ.

ಇದರ ಮೂಲಕ ದೇಶ ವಿರೋಧಿ ಕಾರ್ಯ ಚಟುವಟಿಕೆಗಳಿಗೆ ಆರ್ಥಿಕ ಬೆಂಬಲ ಪೂರೈಸುವವರ ಮೇಲೆ ಕಾರ್ಯಾಚರಣೆಯಾಗಿ ದೇಶದ ಸುರಕ್ಷತೆ, ಕಾನೂನು ಸುವ್ಯವಸ್ಥೆ ಹೆಚ್ಚು ಶಕ್ತಿಶಾಲಿ ಆಗುವುದು ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರರಾದ ಶ್ರೀ. ರಮೇಶ ಶಿಂದೆ ಇವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ .

ಶಿಂದೆ ಇವರು ಕೇಂದ್ರ ಸರಕಾರದ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಎಂದರೆ ಎಫ್ ಎಸ್ ಎಸ್ ಎ ಐ. ಈ ಸರಕಾರಿ ಪ್ರಮಾಣೀಕೃತ ಸಂಸ್ಥೆ ಮತ್ತು ಪ್ರತಿಯೊಂದು ರಾಜ್ಯಕ್ಕೆ ಆಹಾರ ಮತ್ತು ಔಷಧಿ ಆಡಳಿತ ವ್ಯವಸ್ಥೆ ಅಸ್ತಿತ್ವದಲ್ಲಿ ಇರುವಾಗ ಧಾರ್ಮಿಕ ಆಧಾರದಲ್ಲಿ ಹಲಾಲ ಪ್ರಮಾಣಿಕರಣ ನೀಡುವ ಕಾನೂನು ಬಾಹಿರ ಸಂಸ್ಥೆಯ ನೋಂದಣಿ ರದ್ದು ಪಡಿಸಬೇಕು, ಎಂದು ಬೇಡಿಕೆ ಸಲ್ಲಿಸಿದರು. ಶಿಂದೆ ಯವರು ಮಾತು ಮುಂದುವರಿಸಿ, ಹಿಂದೆ ಕೇವಲ ಮಾಂಸಕ್ಕೆ ಹಲಾಲ್ ದೊರೆಯುತ್ತಿತ್ತು. ಈಗ ವಿವಿಧ ಆಹಾರ ಪದಾರ್ಥ, ಔಷಧಿಗಳು, ಸೌಂದರ್ಯ ಪ್ರಸಾಧನಗಳಿಂದ ಹಿಡಿದು ಹೌಸಿಂಗ್ ಕಾಂಪ್ಲೆಕ್ಸ್, ಟೂರಿಸಂ, ಮಾಲ್ ಮುಂತಾದ ಅನೇಕ ಕ್ಷೇತ್ರಗಳಲ್ಲಿ ಹಲಾಲ ಪ್ರಮಾಣೀಕರಣ ನಡೆಯುತ್ತಿದೆ.

ಭಾರತದಲ್ಲಿರುವ ಶೇಕಡ 14 ರಷ್ಟು ಮುಸಲ್ಮಾನರಿಗಾಗಿ, ಶೇಕಡ 16 ರಷ್ಟು ಇರುವ ಮುಸಲ್ಮಾನೇತರ ಸಮಾಜಕ್ಕೆ (ಹಿಂದೂ, ಸಿಖ್, ಜೈನ್, ಬೌದ್ಧ ಮುಂತಾದ) ಅವರ ಇಚ್ಛೆಯ ವಿರುದ್ಧ ಹಲಾಲ ಪ್ರಮಾಣಿಕರಿಸಿರುವ ಉತ್ಪಾದನೆಗಳನ್ನು ಮಾರಲಾಗುತ್ತಿದೆ. ಇದು ಬಹಳ ಗಂಭೀರವಾಗಿದ್ದು ಇದು ಒಂದು ರೀತಿ ಧಾರ್ಮಿಕ ದಬ್ಬಾಳಿಕೆಯಾಗಿದೆ .

ಹಿಂದೂ ಜನಜಾಗೃತಿ ಸಮಿತಿಯು ಇದರ ಕುರಿತು ಅನೇಕ ವರ್ಷಗಳಿಂದ ಜನಜಾಗೃತಿ ಮೂಡಿಸುತ್ತಿದೆ. ಸಮಿತಿಯಿಂದ ಹಲಾಲ ಜಿಹಾದ್ ಈ ಗ್ರಂಥ ಪ್ರಕಾಶನಗೊಳಿಸಲಾಗಿದೆ ಮತ್ತು ಬೃಹತ್ ಪ್ರಮಾಣದಲ್ಲಿ ಆಂದೋಲನಗಳನ್ನು ನಡೆಸಿ ಸಮಸ್ಯೆಯನ್ನು ಮೊತ್ತ ಮೊದಲು ಬೆಳಕಿಗೆ ತಂದಿತು. ಹಲಾಲ್ ಆರ್ಥಿಕ ವ್ಯವಸ್ಥೆಯ ಮೂಲಕ ಭಾರತ ವಿರೋಧಿ ಕಾರ್ಯ ಚಟುವಟಿಕೆಗಳಿಗೆ ಆರ್ಥಿಕ ಶಕ್ತಿ ಪೂರೈಸುವ ಷಡ್ಯಂತ್ರವನ್ನು ಕೂಡ ಸಮಿತಿ ಬಹಿರಂಗಪಡಿಸಿದೆ. ಇದನ್ನು ಗಮನಕ್ಕೆ ತೆಗೆದುಕೊಂಡು ಮಾನ್ಯ ಯೋಗೀಜಿ ಇವರು ಕ್ರಮ ಕೈಗೊಳ್ಳಲು ಮುಂದಡಿ ಇಟ್ಟಿದ್ದಾರೆ. ಇದು ಅಭಿನಂದನೀಯವಾಗಿದ್ದು ಅದನ್ನು ದೇಶಾದ್ಯಂತ ಇರುವ ಎಲ್ಲಾ ಮುಖ್ಯಮಂತ್ರಿಗಳು ಅನುಸರಿಸಬೇಕು, ಎಂದು ಕೂಡ ಶ್ರೀ .ಶಿಂದೆ ಇವರು ಹೇಳಿದ್ದಾರೆ.

Related post

Leave a Reply

Your email address will not be published. Required fields are marked *

error: Content is protected !!