ವೇಣೂರು ಭಗವಾನ್ ಶ್ರೀ ಬಾಹುಬಲಿ ಸ್ವಾಮಿಯ ಅಟ್ಟಳಿಗೆ ಸ್ತಂಭನ್ಯಾಸ ಕಾರ್ಯಕ್ರಮ
ವೇಣೂರು: ಪರಮಪೂಜ್ಯ ಯುಗಳ ಮುನಿಶ್ರೀಗಳಾದ 108 ಅಮೋಘಕೀರ್ತಿ ಮುನಿಮಹಾರಾಜರ ಹಾಗೂ 106 ಅಮರಕೀರ್ತಿ ಮುನಿಮಹಾರಾಜರ ಶುಭಾಶೀರ್ವಾದಗಳೊಂದಿಗೆ, ಹಾಗೂ ಮೂಡಬಿದಿರೆ ಶ್ರೀ ಜೈನ ಮಠದ ಪರಮಪೂಜ್ಯ ಭಾರತಭೂಷಣ ಸ್ವಸ್ತಿಶ್ರೀ ಡಾ. ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಯವರ ಪಾವನ ಸಾನಿಧ್ಯದಲ್ಲಿ ಮತ್ತು ಕನಕಗಿರಿ ಶ್ರೀ ಜೈನ ಮಠದ ಪರಮಪೂಜ್ಯ ಸ್ವಸ್ತಿಶ್ರೀ ಭುವನಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಹಾಗೂ ರಾಜರ್ಷಿ ಡಾ ಡಿ ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತಯಲ್ಲಿ ಫೆಬ್ರವರಿ 2024 ರಲ್ಲಿ ಜರುಗಲಿರುವ ಭಗವಾನ್ ಶ್ರೀ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕದ ನಿಮಿತ್ತ ವೇಣೂರು ಭಗವಾನ್ ಶ್ರೀ ಬಾಹುಬಲಿ ಸ್ವಾಮಿಯ ಅಟ್ಟಳಿಗೆ ಸ್ತಂಭನ್ಯಾಸ ಕಾರ್ಯಕ್ರಮವು ಅ.16 ರಂದು ಜರುಗಿತು.
ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷರು ಸಹಕಾರ ರತ್ನ ಡಾ ಎಂ ಎನ್ ರಾಜೇಂದ್ರ ಕುಮಾರ್ ಅಟ್ಟಳಿಗೆಯ ಸ್ಥಂಭನ್ಯಾಸ ನೆರವೇರಿಸಿದರು. ಮೂಡಬಿದಿರೆ ಜೈನ ಮಠದ ಡಾ ಚಾರುಕೀರ್ತಿ ಸ್ವಾಮೀಜಿ ಮತ್ತು ಚಾಮರಾಜನಗರದ ಶ್ರೀ ಕ್ಷೇತ್ರ ಕನಕಗಿರಿ ಭುವನಕೀರ್ತಿ ಭಟ್ಟಾರಕ ಸ್ವಾಮೀಜಿ ದೀಪ ಬೆಳಗಿಸಿದರು.
ಕರ್ನಾಟಕ ಸರಕಾರದ ಯೋಜನೆ ಮತ್ತು ಅಂಕಿ ಅಂಶಗಳ ಇಲಾಖೆಯ ಸಚಿವರು ಡಿ ಸುಧಾಕರ್ ಅಧ್ಯಕ್ಷತೆಯನ್ನು ವಹಿಸಿದ್ದರು.
ಈ ಸಂದರ್ಭದಲ್ಲಿ ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ ಪದ್ಮಪ್ರಸಾದ್ ಅಜಿಲರು, ಮಹಾಮಸ್ತಾಭಿಷೇಕದ ಕಾರ್ಯಾಧ್ಯಕ್ಷರು ಮೊದಲಾದವರು ಉಪಸ್ಥಿತರಿದ್ದರು .