ಕನ್ನಡ ಸೇನೆ ಬೆಳ್ತಂಗಡಿ ವತಿಯಿಂದ ಸುದ್ದಿಗೋಷ್ಠಿ
ಬೆಳ್ತಂಗಡಿ: ಕನ್ನಡ ಉಳಿಸಿ- ಕನ್ನಡ ಬೆಳೆಸಿ ರಥಯಾತ್ರೆ ಮೂಲಕ ಸಾರ್ವಜನಿಕರ ಕುಂದು ಕೊರತೆಗಳ ಹೋರಾಟದ ಸೂಚನೆ ಹಾಗೂ ಮಡಂತ್ಯಾರ್ ಸಾರ್ವಜನಿಕ ಕಾಲುಸಂಕ ಬಂದ್ ಮಾಡಿದ್ದನ್ನು ತೆರವಿಗೆ ತೀವ್ರ ಒತ್ತಾಯಿಸಿ ಮತ್ತು ಹೋರಾಟದ ಸೂಚನೆಯನ್ನು ನೀಡುವ ಸಲುವಾಗಿ ಅ.13 ರಂದು
ಅಂಬೇಡ್ಕರ್ ಭವನ ಬೆಳ್ತಂಗಡಿಯಲ್ಲಿ ಕನ್ನಡ ಸೇನೆ ಕರ್ನಾಟಕ ಜಿಲ್ಲಾಧ್ಯಕ್ಷರು ಚಂದ್ರಶೇಖರ್ ಸುದ್ದಿಗೋಷ್ಠಿಯನ್ನು ಆಯೋಜಿಸಿದರು.
ಸುದ್ದಿಗೋಷ್ಠಿಯಲ್ಲಿ ಬೆಳ್ತಂಗಡಿ ಕನ್ನಡ ಸೇನೆ ಅಧ್ಯಕ್ಷರು ಗುರುಪ್ರಸಾದ್ ಮಾಲಾಡಿ ಮಾತನಾಡಿ ಮಡಂತ್ಯಾರ್ ವ್ಯಾಪ್ತಿಯ ಪಾರೆಂಕಿ ಗ್ರಾಮದ ಆದಂ ಬಿನ್ ಫಕ್ರುದ್ದೀನ್ ರ ತೋಟದ 40 ಅಡಿಕೆ ಮರಗಳಿಗೆ ಗೊಬ್ಬರ ಸಾಗಾಟ ಮಾಡಲಾಗದೆ ಸತ್ತಿದ್ದು ಮತ್ತು ಹೈನುಗಾರಿಕೆ ಅವಲಂಬಿಸಿರುವ ಕುಟುಂಬಗಳ ಸಾರ್ವಜನಿಕ ಕಾಲುಸಂಕವನ್ನು ಸಂಪೂರ್ಣವಾಗಿ ಮುಚ್ಚಲಾಗಿದ್ದು ರಸ್ತೆ ತಡೆ ಮಾಡಿದ್ದಾರೆ ಇದು ದ.ಕ ಜಿಲ್ಲೆಯ ರೈತರಿಗೆ ಮಾಡಿದ ಅನ್ಯಾಯ ಮತ್ತು ಅವಮಾನವಾಗಿದೆ. ಈ ರಸ್ತೆ ಕಾಲು ಸಂಕ ಮೂಲಕ ಆದಂ ಬಿನ್ ಫಕ್ರುದ್ದೀನ್ ರವರ ತೋಟವನ್ನು ಸಂಪರ್ಕಿಸುತ್ತದೆ ಇದೇ ರೀತಿ ಈ ರಸ್ತೆಯನ್ನು ಹೈನುಗಾರಿಕೆ ಮಾಡುತ್ತಿರುವ ರೈತರು ಕೂಡ 6 ಫೀಟ್ ದಾರಿಯ ಹಕ್ಕುದಾರರಾಗಿರುತ್ತಾರೆ. ನಮ್ಮ ಮುಂದಿನ ನಡೆ ಸಾರ್ವಜನಿಕರಿಗೆ ಅನ್ನದಾತರಿಗೆ ನ್ಯಾಯವನ್ನು ಕೊಡದೆ ಇದ್ದರೆ ಸರಕಾರವು ಸುಕ್ತ ಕ್ರಮ ತೆೆದುಕೊಳ್ಳಲ್ಲದೆ ಇದ್ದರೆ ಬೆಳ್ತಂಗಡಿ ತಾಲೂಕಿನ ಮೂಲೆ ಮೂಲೆಯಲ್ಲಿ ಹೋರಾಟ ಜರಗುತ್ತದೆ ಜಿಲ್ಲಾಧಿಕಾರಿ ಕಚೇರಿ ಮುಂಬಾಗ ಉಪವಾಸ ಸತ್ಯಾಗ್ರಹವನ್ನು ಮಾಡಲು ಸಿದ್ಧರಿದ್ದೇವೆ ಎಂದು ತಿಳಿಸಿದರು.
ಅಲ್ಲದೆ ಮಹಿಷಮರ್ಧಿನಿ ದೇವಸ್ಥಾನಕ್ಕೆ ಬರುವ ಸಾರ್ವಜನಿಕರಿಗೆ 15 ವರ್ಷ ಹಿಂದೆಯೇ ಕಾಲು ಸಂಕ ನಿರ್ಮಾಣ ಮಾಡಲಾಗಿದ್ದು, ಈ ರಸ್ತೆ ಸ್ಪಷ್ಟವಾಗಿ ಸರಕಾರ ಮತ್ತು ಸಾರ್ವಜನಿಕರ ಸ್ವತ್ತು ಎಂಬುವುದು ಸ್ಪಷ್ಟವಿದ್ದರೂ ಸರಕಾರದ ಸ್ವತ್ತನ್ನು ಭೂ ಸ್ವಾಧೀನ ಮಾಡಿ ತೆರವು ಮಾಡುವ ವಿಚಾರ, ತಾಲೂಕು ಪಂಚಾಯತ್ ಇಲಾಖೆಗಳು ಹೇಳುವುದು ಹಾಸ್ಯಾಸ್ಪದ ವಿಚಾರ ಬದಲಾಗಿ ರಸ್ತೆ ತಡೆ ತೆರವಿನತ್ತ ತಕ್ಷಣ ಗಮನಹರಿಸುವಂತೆ ಸೂಚನೆ ನೀಡಲಾಯಿತು.
ಕನ್ನಡ ಸೇನೆ ಕರ್ನಾಟಕ ಜಿಲ್ಲಾಧ್ಯಕ್ಷರ ನೇತೃತ್ವದಲ್ಲಿ ವಿದ್ಯಾರ್ಥಿ ಸಮುದಾಯದ ಜೊತೆ ಸಂವಾದ ನಡೆಸಿ ಪದವಿ ಶಿಕ್ಷಣ ಪಡೆಯುವ ವಿದ್ಯಾರ್ಥಿ ಸಮುದಾಯಕ್ಕೆ ರಾಷ್ಟ್ರೀಕೃತ ಬ್ಯಾಂಕ್ ನಲ್ಲಿ ಶೈಕ್ಷಣಿಕ ಸಾಲ 2 ಲಕ್ಷವನ್ನು 0% ಬಡ್ಡಿ ದರದಲ್ಲಿ ನೀಡಬೇಕು ಎಂದು ಒತ್ತಾಯಿಸಲಾಯಿತು.
ಸುದ್ದಿಗೋಷ್ಠಿಯಲ್ಲಿ ತಾಲೂಕು ಅದ್ಯಕ್ಷರು ಗುರುಪ್ರಸಾದ್ ಮಾಲಾಡಿ, ಸಂಚಾಲಕರು ಅಬ್ಬಾಸ್, ಉಪಾಧ್ಯಕ್ಷರು ಅದಂ, ಪದಾಧಿಕಾರಿಗಳು ಕೃಷ್ಣ, ಜೋಸೆಫ್ ಉಪಸ್ಥಿತರಿದ್ದರು.