ರಾಜ್ಯಾದ್ಯಂತ ಆಪರೇಷನ್ ಪಿಒಪಿ: ಕರಾವಳಿ ಭಾಗಗಳಲ್ಲಿ ಮಣ್ಣಿನ ಗಣೇಶ ಮೂರ್ತಿಗೆ ಹೆಚ್ಚಿನ ಬೇಡಿಕೆ
ರಾಜ್ಯದಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣೇಶ ಮೂರ್ತಿ ಉತ್ಪಾದಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸರಕಾರ ಸೂಚಿಸಿದ ಬೆನ್ನಲ್ಲೇ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ರಾಜ್ಯದೆಲ್ಲೆಡೆ ಕಾರ್ಯ ಪ್ರವೃತ್ತರಾಗಿ ಹಲವೆಡೆ ದಾಳಿ ನಡೆಸಿ ಪ್ರಕರಣ ದಾಖಲಿಸಿಕೊಂಡು ಬಿಸಿ ಮುಟ್ಟಿಸಿದ್ದಾರೆ.
ದೊಡ್ಡಬಳ್ಳಾಪುರ ರಸ್ತೆಯ ಮಾರಸಂದ್ರದಲ್ಲಿ ಕೊಲ್ಲಾಪುರದಿಂದ ತಂದು ಪೈಂಟ್ ಮಾಡಿ ಗಣೇಶ ಮೂರ್ತಿ ಮಾರಾಟ ಮಾಡುತ್ತಿರುವುದನ್ನು ಪತ್ತೆ ಹಚ್ಚಲಾಗಿದೆ. ಇಲ್ಲಿ ನೂರಾರು ಗಣೇಶ ಮೂರ್ತಿ ಜಪ್ತಿ ಮಾಡಲಾಗಿದೆ. ಮೈಸೂರಿನಲ್ಲಿ 1 ಕಡೆ, ಕಲಬುರುಗಿಯಲ್ಲಿ 2 , ರಾಯಚೂರಿನಲ್ಲಿ 2 ಕಡೆ ದಾಳಿ ನಡೆಸಲಾಗಿದೆ.
ಉಡುಪಿ ಶೇ.100, ಮಂಗಳೂರು ಶೇ.90, ಶಿವಮೊಗ್ಗ ಶೇ.70 ರಷ್ಟು ಪಿಒಪಿ ಮುಕ್ತ ಗಣೇಶ ಮೂರ್ತಿ ಬಳಸುತ್ತಿರುವುದು ಬಹಿರಂಗಗೊಂಡಿದೆ.