• September 8, 2024

ಬೆಳಾಲು ಪ್ರೌಢಶಾಲೆಯಲ್ಲಿ ಭಾಷಾ ಸಾಮರಸ್ಯ ದಿನಾಚರಣೆ

 ಬೆಳಾಲು ಪ್ರೌಢಶಾಲೆಯಲ್ಲಿ ಭಾಷಾ ಸಾಮರಸ್ಯ ದಿನಾಚರಣೆ

ಬೆಳಾಲು : ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯಲ್ಲಿ ಹಿಂದಿ ದಿನದ ಅಂಗವಾಗಿ ಭಾಷಾ ಸಾಮರಸ್ಯ ದಿನಾಚರಣೆ ಜರಗಿತು.
ಸಂಘದ ಅಧ್ಯಕ್ಷೆ ಕು. ಲಿಖಿತಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಕೊಲ್ಪಾಡಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಸುರೇಶ್ ಮಾಚಾರ್ ರವರು ಮಾತನಾಡುತ್ತಾ , ಭಾಷೆಯು ಕಾಲ ದೇಶಕ್ಕನುಸಾರವಾಗಿ ವಿಕಾಸಹೊಂದುವ ಗುಣವುಳ್ಳದ್ದು. ಪ್ರಾಣಿಗಳಿಗೆ ಭಾಷೆ ಇದೆ. ಆದರೆ ಮನುಷ್ಯ ವಿಕಸಿತ ರೂಪದ ಭಾಷೆಯನ್ನು ಬಳಸುತ್ತಾನೆ. ಭಾಷೆ ಕೇವಲ ಶಬ್ದಗಳ ಜಾಲವಲ್ಲ. ಆ ಮೂಲಕ ನಾವು ನೆಲದ ಸಂಸ್ಕೃತಿ , ಸಂಸ್ಕಾರವನ್ನೂ ಹಸ್ತಾಂತರಿಸುತ್ತೇವೆ. ಭಾಷೆ ಬಗ್ಗೆ ದ್ವೇಷ ಬೇಡ. ಭಾಷೆಯ ಮೂಲಕ ಸಾಮರಸ್ಯ ಬೆಸೆಯೋಣ ಎಂದು ಅಭಿಪ್ರಾಯಪಟ್ಟರು.

ಇತರ ಅತಿಥಿಗಳಾಗಿ ಆಗಮಿಸಿದ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಶೇಖರ್ ಕೊಲ್ಲಿಮಾರ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಗಣೇಶ ಕನಿಕ್ಕಿಲ, ಹಿಂದಿ ಸಂಘದ ಜತೆಕಾರ್ಯದರ್ಶಿ ತೀರ್ಥೇಶ ಇವರು ಶುಭಹಾರೈಸಿದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈವಿಧ್ಯ ಕಾರ್ಯಕ್ರಮ ಹಾಗೂ ವಿವಿಧ ಸ್ಪರ್ಧೆಗಳ ಬಹುಮಾನ ವಿತರಣೆಯೂ ಜರಗಿತು.

ಹಿಂದಿ ಸಂಘದ ಉಪಾಧ್ಯಕ್ಷೆ ಕು. ಸುಕನ್ಯಾ ಸ್ವಾಗತಿಸಿ, ಕಾರ್ಯದರ್ಶಿಗಳಾದ ಚಿಂತನ್ ಧನ್ಯವಾದ ಸಲ್ಲಿಸಿದರು. ಅಮೂಲ್ಯ ಪಿ., ಪಾತಿಮತ್ ತಬ್ಸೀರ, ಪ್ರಾರ್ಥನಾರವರು ಕಾರ್ಯಕ್ರಮಗಳನ್ನು ನಿರೂಪಿಸಿದರು. ಹಿಂದಿ ಶಿಕ್ಷಕಿ ಶ್ರೀಮತಿ ರಾಜಶ್ರೀಯವರ ಮಾರ್ಗದರ್ಶನದಲ್ಲಿ ಸಮಾರಂಭ ಆಯೋಜನೆಗೊಂಡಿತು. ಸಮಾರಂಭದ ಎಲ್ಲ ಕಾರ್ಯ ಕಲಾಪಗಳಲ್ಲಿ, ವೇದಿಕೆಯಲ್ಲಿ ವಿದ್ಯಾರ್ಥಿಗಳೇ ಉಪಸ್ಥಿತರಿದ್ದು ಸಂಪೂರ್ಣ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Related post

Leave a Reply

Your email address will not be published. Required fields are marked *

error: Content is protected !!