ಧರ್ಮಸ್ಥಳ: ವ್ಯಸನಮುಕ್ತ ಸಾಧಕರ ಸಮಾವೇಶ
ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ(ರಿ) ಧರ್ಮಸ್ಥಳ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್(ರಿ)ಧರ್ಮಸ್ಥಳ, ಶ್ರೀ. ಧ.ಮಂ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರ ಉಜಿರೆ ಇದರ ಆಶ್ರಯದಲ್ಲಿ ಮದ್ಯವರ್ಜನ ಶಿಬಿರಗಳಲ್ಲಿ ಭಾಗವಹಿಸಿ ಸಂತೃಪ್ತ ಜೀವನ ನಡೆಸುತ್ತಿರುವ ನವಜೀವನ ಸದಸ್ಯರ ಶತದಿನೋತ್ಸವ ಕಾರ್ಯಕ್ರಮದ ಅಂಗವಾಗಿ ವ್ಯಸನಮುಕ್ತ ಸಾಧಕರ ಸಮಾವೇಶ ಕಾರ್ಯಕ್ರಮವು ಜುಲೈ.29 ರಂದು ಅಮೃತವರ್ಷಿಣಿ ಸಭಾಭವನ ಶ್ರೀ ಕ್ಷೇತ್ರ ಧರ್ಮಸ್ಥಳ ದಲ್ಲಿ ಜರುಗಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ ಡಿ ವೀರೇಂದ್ರ ಹೆಗ್ಗಡೆಯವರು ವಹಿಸಿದ್ದರು.
ಕಾರ್ಯಕ್ರಮವನ್ನು ಮಾನ್ಯ ಸಭಾಪತಿಗಳಾದ ಯುಟಿ ಖಾದರ್ ಉದ್ಘಾಟಿಸಿದರು. ನಂತರ ಶ್ರೀ ಕ್ಷೇ ಧ ಗ್ರಾ ಯೋಜನೆ(ರಿ) ಧರ್ಮಸ್ಥಳ ದ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ ಎಲ್ ಹೆಚ್ ಮಂಜುನಾಥ್ ವಾರ್ಷಿಕ ವರದಿ ಬಳಿ ಉಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಮಂಗಳೂರು ಮನೋವೈದ್ಯರಾದ ಡಾ ಶ್ರೀನಿವಾಸ್ ಭಟ್ ಯು , ಶ್ರೀ ಕ್ಷೇ ಧ ಗ್ರಾ ಯೋಜನೆ(ರಿ) ಧರ್ಮಸ್ಥಳ ದ ಮುಖ್ಯ ನಿರ್ವಹಣಾಧಿಕಾರಿಗಳಾದ ಅನಿಲ್ ಕುಮಾರ್ ಎಸ್ಎಸ್, ಎ ರಾಮಸ್ವಾಮಿ, ಕೆ ವಸಂತ ಸಾಲ್ಯಾನ್ ಮೊದಲಾದವರು ಉಪಸ್ಥಿತರಿದ್ದರು.