ಐಫೋನ್ ಖರೀದಿಸಲು ಹೆತ್ತ ಮಗುವನ್ನೇ ಮಾರಾಟ ಮಾಡಿದ ದಂಪತಿ: ತಲೆಮರೆಸಿಕೊಂಡ ತಂದೆ
ಪಶ್ಚಿಮ ಬಂಗಾಳ, : ಐಫೋನ್ ಖರೀದಿಸಲು ಹೆತ್ತ ಮಗುವನ್ನೇ ದಂಪತಿ ಮಾರಾಟ ಮಾಡಿರುವ ಆಘಾತಕಾರಿ ಘಟನೆಯೊಂದು ಪಶ್ಚಿಮ ಬಂಗಾಳದಲ್ಲಿ ಬೆಳಕಿಗೆ ಬಂದಿದೆ.
ಪಶ್ಚಿಮ ಬಂಗಾಳದ ದಂಪತಿ ಇನ್ಸ್ಟಾಗ್ರಾಮ್ ರೀಲ್ಗಳನ್ನು ಮಾಡಲು ಐಫೋನ್ ಖರೀದಿಸಲು ಬಯಸಿದ್ದರು. ಆದರೆ ಫೋನ್ ಖರೀದಿಸಲು ಆರ್ಥಿಕ ಸಮಸ್ಯೆ ಎದುರಾಗಿದೆ ಹೀಗಾಗಿ ತಮ್ಮ ಮಗುವನ್ನೇ ಮಾರಾಟ ಮಾಡಿದ್ದಾರೆ.
ಇನ್ನು ಪ್ರಕರಣಕ್ಕೆ ಸಂಬಂಧಿಸಿ ಮಗುವಿನ ತಾಯಿ ಸತಿ ಹಾಗೂ ಮಗುವನ್ನು ಖರೀದಿಸಿದ ಮಹಿಳೆಯನ್ನೂ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.
ಮಗುವಿನ ತಂದೆ ಜೈದೇವ್ ಇನ್ನೂ ತಲೆಮರೆಸಿಕೊಂಡಿದ್ದು ಪೊಲೀಸರು ಆತನ ಪತ್ತೆಗೆ ಬಲೆ ಬಿಸಿದ್ದಾರೆ.
ಸತಿ ಹಾಗೂ ಜೈದೇವ್ ಆರ್ಥಿಕವಾಗಿ ಸದೃಢರಾಗಿರಲಿಲ್ಲ ಜೊತೆಗೆ ನೆರೆಹೊರೆಯವರಲ್ಲಿ ಆಗಾಗ ಸಾಲದ ರೂಪದಲ್ಲಿ ಹಣ ಪಡೆಯುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ದಂಪತಿಗಳಲ್ಲಿ ಬಹಳಷ್ಟು ಬದಲಾವಣೆಗಳು ಕಂಡು ಬಂದಿತ್ತು ಜೊತೆಗೆ ದಂಪತಿಗಳಿಗೆ ಎಂಟು ತಿಂಗಳ ಹೆಣ್ಣು ಮಗು ಕೂಡಾ ಮನೆಯಲ್ಲಿ ಕಾಣುತ್ತಿರಲಿಲ್ಲ ಈ ನಡುವೆ ಪೋಷಕರ ಕೈಯಲ್ಲಿ ಐಫೋನ್ ಬಂದಿದ್ದು ನೆರೆಹೊರೆಯವರಲ್ಲಿ ಅನುಮಾನ ಹುಟ್ಟುಹಾಕಿತ್ತು. ಹಗಾಗಿ ನೆರೆಹೊರೆಯವರು ಪೋಷಕರಲ್ಲಿ ಮಗುವಿನ ವಿಚಾರ ಕೇಳಿದಾಗ ಮಗುವನ್ನು ಮಾರಾಟ ಮಾಡಿರುವ ವಿಚಾರ ಬಾಯಿ ಬಿಟ್ಟಿದ್ದಾರೆ.