ಹಿಂದೂ ಕಾರ್ಯಕರ್ತರ ಗಡಿಪಾರು ಆದೇಶ ಖಂಡನೀಯ !:ಸರಕಾರವು ಗಡಿಪಾರು ಆದೇಶವನ್ನು ರದ್ದು ಮಾಡಬೇಕೆಂದು ಹಿಂದೂ ಜನಜಾಗೃತಿ ಸಮಿತಿಯ ಆಗ್ರಹ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಲವು ಹಿಂದೂ ಕಾರ್ಯಕರ್ತರನ್ನು ಗಡಿಪಾರು ಮಾಡುವ ಪೊಲೀಸರ ಕ್ರಮ ಖಂಡನೀಯ. ಇದನ್ನು ಹಿಂದೂ ಜನಜಾಗೃತಿ ಸಮಿತಿಯು ತೀವ್ರವಾಗಿ ಖಂಡಿಸುತ್ತದೆ. ಇದು ಹಿಂದೂ ಸಂಘಟನೆಗಳನ್ನು ಹತ್ತಿಕ್ಕುವ ಪ್ರಯತ್ನವಾಗಿದೆ ಎಂದು ಹಿಂದೂ ಹಿಂದೂ ಜನಜಾಗೃತಿ ಸಮಿತಿಯು ಆಗ್ರಹಿಸುತ್ತದೆ.
ಹಿಂದೂ ಸಂಘಟನೆಗಳು ಪೊಲೀಸರಿಗೆ ಮಾಹಿತಿ ನೀಡಿ ಗೋರಕ್ಷಣೆಯ ಕಾರ್ಯವನ್ನು ಮಾಡಿದ ಕಾರಣಕ್ಕೆ ಹಾಗೂ ಹೋಳಿ ಆಚರಣೆಯ ನೆಪದಲ್ಲಿ ಡ್ರಗ್ಸ್ ಪಾರ್ಟಿಯನ್ನು ತಡೆದ ಕಾರಣಕ್ಕೆ ಅವರನ್ನು ಗಡಿಪಾರು ಮಾಡುವುದು ಖಂಡನೀಯವಾಗಿದೆ. ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರ ಹಿಂದೂ ಕಾರ್ಯಕರ್ತರ ಮೇಲೆ ಸುಳ್ಳು ಕೇಸ್ ಹಾಕುವುದು, ಅವರಿಗೆ ತೊಂದರೆ ನೀಡುವುದು ಹೆಚ್ಚಾಗಿದೆ. ಮತ್ತೊಂದು ಕಡೆ ಮತಾಂಧರ ಆಕ್ರಮಣ ಹಿಂದೂಗಳ ಮೇಲೆ ಹೆಚ್ಚಾಗಿದೆ. ಈ ಹಿಂದೆ ಇದೇ ಸರಕಾರವು ಮತಾಂಧ ಸಂಘಟನೆಯಾದ ಪಿಎಫ್‌ಐ ಕಾರ್ಯಕರ್ತರ ಮೇಲಿನ ಕೇಸುಗಳನ್ನು ವಾಪಾಸು ಪಡೆದಿತ್ತು. ಪಿಎಫ್‌ಐ ಸಂಘಟನೆ ಕಾರ್ಯಕರ್ತರ ರಾಜ್ಯದಾದ್ಯಂತ ನೈತಿಕ ಪೋಲಿಸಗಿರಿ ನೆಪದಲ್ಲಿ ಚಿಕ್ಕಬಳ್ಳಾಪುರ, ಕಲಬುರ್ಗಿ, ಮಂಗಳೂರು ಹೀಗೆ ಹಲವು ಕಡೆ ಅಮಾಯಕ ಹಿಂದುಗಳ ಮೇಲೆ ಆಕ್ರಮಣ ಮಾಡಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದಿದ್ದಾರೆ. ಹೀಗಿರುವಾಗ ಎಷ್ಟು ಮತಾಂಧ ಪಿಎಫ್‌ಐ ಕಾರ್ಯಕರ್ತರ ಮೇಲೆ ಗಡಿಪಾರು ಆದೇಶವನ್ನು ಸರಕಾರ ಮಾಡಿದೆ ? ಕೂಡಲೇ ಸರಕಾರವು ಗಡಿಪಾರು ಆದೇಶವನ್ನು ರದ್ದು ಮಾಡಬೇಕೆಂದು ಹಿಂದೂ ಜನಜಾಗೃತಿ ಸಮಿತಿಯು ಆಗ್ರಹ ಮಾಡುತ್ತಿದೆ.