• October 13, 2024

ಬೆನಕ ಆಸ್ಪತ್ರೆಯಲ್ಲಿ ನೂತನ ಆವಿಷ್ಕಾರದ ಕ್ಷ-ಕಿರಣ ಯಂತ್ರ ಉದ್ಘಾಟನೆ

 ಬೆನಕ ಆಸ್ಪತ್ರೆಯಲ್ಲಿ ನೂತನ ಆವಿಷ್ಕಾರದ ಕ್ಷ-ಕಿರಣ ಯಂತ್ರ ಉದ್ಘಾಟನೆ

 

ಉಜಿರೆ: ಉಜಿರೆಯ ಬೆನಕ ಆಸ್ಪತ್ರೆಯಲ್ಲಿ ಹೊಸ ಆವಿಷ್ಕಾರದ ಬಿಪಿಎಲ್ ಕಂಪೆನಿಯ D.R-1prime ಮಾದರಿಯ ಕ್ಷ-ಕಿರಣ (,X-ray) ಯಂತ್ರವನ್ನು ಜು.14 ರಂದು ದ.ಕ ಜಿಲ್ಲೆಯ ಪ್ರಖ್ಯಾತ ಹೃದ್ರೋಗ ತಜ್ಞರಾದ ಡಾ. ಪದ್ಮನಾಭ ಕಾಮತ್ ರವರು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಡಾ.ಕಾಮತ್ ರವರು ಬೆನಕ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ ಗೋಪಾಲಕೃಷ್ಣ ರವರನ್ನು ಅಭಿನಂದಿಸುತ್ತಾ ಉಜಿರೆಯಂತಹ ಹಳ್ಳಿಯ ಈ ಆಸ್ಪತ್ರೆಯಲ್ಲಿ ಇಂತಹ ನೂತನ ಆವಿಷ್ಕಾರದ ಯಂತ್ರವನ್ನು ಅಳವಡಿಸಿದಕ್ಕಾಗಿ ಅಭಿನಂದಿಸಿದರು.

ಡಾ.ಭಾರತೀಯವರು ಹೂಗುಚ್ಛ ನೀಡಿ ಡಾ ಕಾಮತ್ ರವರನ್ನು ಸ್ವಾಗತಿಸಿದರು. ಡಾ ಗೋಪಾಲಕೃಷ್ಣ ರವರು ನೆನಪಿನ ಕಾಣಿಕೆಯನ್ನು ನೀಡುವ ಮೂಲಕ ಡಾ ಕಾಮತ್ ರವರನ್ನು ಗೌರವಿಸಿದರು.

ಈ ವೇಳೆ ಬೆನಕ ಆಸ್ಪತ್ರೆಯ ಎಲುಬು ಕೀಲು ತಜ್ಞರಾದ ಡಾ ರಜತ್ ಹೆಚ್ ಪಿ ಮತ್ತು ಸ್ತ್ರೀರೋಗ ತಜ್ಞ ರಾದ ಡಾ ಅಂಕಿತ ಭಟ್ ರವರು ಉಪಸ್ಥಿತರಿದ್ದರು.

Related post

Leave a Reply

Your email address will not be published. Required fields are marked *

error: Content is protected !!