ಮಂಗಳೂರು : ಕರ್ನಾಟಕದಲ್ಲಿ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಆರೋಪಿಗಳಾಗಿರುವ ಹಿಂದೂಗಳ ಪರವಾಗಿ ಕಾನೂನು ಹೋರಾಟ ನಡೆಸುತ್ತಿದ್ದ ಹಿಂದುತ್ವನಿಷ್ಠ ನ್ಯಾಯವಾದಿ ಕೃಷ್ಣಮೂರ್ತಿಯವರ ಮೇಲೆ ಬುಧವಾರ ರಾತ್ರಿ ಅಪರಿಚಿತರಿಂದ ಗುಂಡಿನ ದಾಳಿ ನಡೆಸಲಾಗಿದೆ. ನ್ಯಾಯವಾದಿ ಕೃಷ್ಣಮೂರ್ತಿ ಅವರು ವಿಶ್ವ ಹಿಂದೂ ಪರಿಷತ್ತಿನ ಸಭೆ ಮುಗಿಸಿ ತಮ್ಮ ಕಾರಿನಲ್ಲಿ ಚೆಟ್ಟಳ್ಳಿಯಿಂದ ಮಡಿಕೇರಿಗೆ ಹೊರಡುತ್ತಿದ್ದರು. ಈ ವೇಳೆ ಅವರ ಮೇಲೆ ದಾಳಿ ನಡೆದಿದೆ. ಈ ಹೇಡಿತನದ ದಾಳಿಯನ್ನು ಹಿಂದೂ ಜನಜಾಗೃತಿ ಸಮಿತಿಯು ತೀವ್ರವಾಗಿ ಖಂಡಿಸುತ್ತದೆ. ದಾಳಿಯ ಹಿಂದೆ ಪಿ.ಎಫ್.ಐ ಅಥವಾ […]
ಪಿಳಿಗೂಡು : ಪಿಳಿಗೂಡು ಬಾರ್ಯದಲ್ಲಿ ಹಿಂದೂ ಜನಜಾಗೃತಿ ಸಮಿತಿಯಿಂದ ಹಿಂದೂ ರಾಷ್ಟ್ರ ಜಾಗೃತಿ ಸಭೆ ಡಿ.4ರಂದು ನಡೆಸಲಾಯಿತು. ಈ ಸಂದರ್ಭದಲ್ಲಿ ದಿನೇಶ್ ಜೈನ್ ಮಾತನಾಡಿ 400 ವರ್ಷಗಳಿಂದ ಹಿಂದುಗಳಿಗೆ ಧರ್ಮಶಿಕ್ಷಣ ಸಿಗುತ್ತಿಲ್ಲ, ಒಂದು ವೇಳೆ ಸಿಗುತ್ತಿದ್ದರೆ ಲವ್ ಜಿಹಾದ್, ಮತಾಂತರ ,ಗೋ ಹತ್ಯೆ ,ದೇವತೆಗಳ ವಿಡಂಬನೆ, ಹಿಂದೂ ಧರ್ಮದ ವಿಕೃತಿಕರಣ, ಆಗುತ್ತಿರಲಿಲ್ಲ. ನಿರ್ಭಯವಾಗಿ ಹಿಂದೂಗಳು ಬದುಕುತಿದ್ದರು. ಆದರೆ ಧರ್ಮಶಿಕ್ಷಣವಿಲ್ಲದೆ ಹಿಂದೂಗಳು ಭಯಭೀತರಾಗಿ ಬದುಕುತಿದ್ದಾರೆ. ನಿರ್ಭಯವಾಗಿ ಬದುಕಬೇಕಾದರೆ ಧರ್ಮಶಿಕ್ಷಣ ಒಂದೇ ದಾರಿ ಎಂದು ಹೇಳಿದರು. ಸನಾತನ ಸಂಸ್ಥೆಯ […]Read More
ಕೊರಿಂಜ :10ನೇ ವರ್ಷದ ಪಾದಯಾತ್ರೆಯ ಪೂರ್ವಭಾವಿ ಸಭೆ ಕೊರಿಂಜ ಸಮುದಾಯ ಭವನದಲ್ಲಿ ನ.6 ರಂದು ನಡೆಯಿತು. ಜನ ಜಾಗೃತಿ ವೇದಿಕೆಯ ಶಿಭಿರಾಧಿಕಾರಿ ನಂದಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಭೆಯಲ್ಲಿ ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ಬೆಳ್ತಂಗಡಿ ತಾಲೂಕು ಸಮಿತಿ ಅಧ್ಯಕ್ಷರಾದ ಶಾರದಾ ರೈ, ಪ್ರಗತಿ ಬಂಧು, ಸ್ವ ಸಹಾಯ ಸಂಘಗಳ ಒಕ್ಕೂಟ ಕಣಿಯೂರು, ಇದರ ವಲಯಾಧ್ಯಕ್ಷರಾದ ರಮಾನಂದ ಪೂಜಾರಿ, ಜನ ಜಾಗೃತಿ ವಲಯಾಧ್ಯಕ್ಷರಾದ ರುಕ್ಮಯ್ಯ ಪೂಜಾರಿ, ಗ್ರಾಮ ಸಮಿತಿ ಅಧ್ಯಕ್ಷರು ಶಂಕರ್ ಭಟ್, ಪ್ರಫುಲ್ಲಚಂದ್ರ […]Read More
ಕಾಯರ್ತಡ್ಕ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬೆಳ್ತಂಗಡಿ ವತಿಯಿಂದ ಮತ್ತು ಗ್ರಾಮಸ್ಥರು ಹಾಗೂ ಕಳೆಂಜ ಗ್ರಾ.ಪಂ ಸಹಯೋಗದೊಂದಿಗೆ ಬಸ್ಸಿನ ಸಮಸ್ಯೆಯ ಕುರಿತು ನ.6 ರಂದುಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಳೆಂಜ ಕಾಯರ್ತಡ್ಕದಲ್ಲಿ ಸಭೆಯನ್ನು ಹಮ್ಮಿಕೊಳ್ಳಲಾಯಿತು. ಸಭೆಯ ಅಧ್ಯಕ್ಷತೆಯನ್ನು ಕಳೆಂಜ ಗ್ರಾ.ಪಂ ಅಧ್ಯಕ್ಷ ಪ್ರಸನ್ನ ಎಪಿ ವಹಿಸಿದ್ದರು. ಈ ಸಂದರ್ಭದಲ್ಲಿ ಮಿಯ್ಯೂರು- ಕಾಯರ್ತಡ್ಕ- ಬರೆಂಗಾಯ- ಧರ್ಮಸ್ಥಳ ದ ವರೆಗೆ ಸಂಚರಿಸುತ್ತಿರುವ ಬಸ್ಗಳ ಸಮಸ್ಯೆಗಳ ಕುರಿತು, 5.45 ಕ್ಕೆ ಧರ್ಮಸ್ಥಳ- ಬರೆಂಗಾಯ – ಕಾಯರ್ತಡ್ಕ ಮಿಯ್ಯಾರು ವರೆಗೆ ಸಂಚರಿಸುತ್ತಿದ್ದ […]Read More
ಬೆಳ್ತಂಗಡಿ: ಬೆಳ್ತಂಗಡಿ ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲದಿಂದ ವಿಶೇಷ ಕಾರ್ಯಕಾರಿಣಿ ಸಭೆಯು ಅ29ರಂದು ಬೆಳ್ತಂಗಡಿ ಮಂಜುನಾಥೇಶ್ವರ ಕಲಾಭವನದಲ್ಲಿ ಜರುಗಿತು. ಬೆಳ್ತಂಗಡಿ ತಾಲೂಕಿನ ಶಾಸಕರಾದ ಹರೀಶ್ ಪೂಂಜ ವಿಶೇಷ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿದರು. ಬೆಳ್ತಂಗಡಿ ಬಿಜೆಪಿ ಮಂಡಲದ ಅಧ್ಯಕ್ಷರಾದ ಜಯಂತ್ ಕೋಟ್ಯಾನ್, ಕಿಯೋನಿಕ್ಸ್ ಮಾಜಿ ಅಧ್ಯಕ್ಷ ಬೆಳ್ತಂಗಡಿ ಮಂಡಲ ಪ್ರಭಾರಿ ಹರಿಕೃಷ್ಣ ಬಂಟ್ವಾಳ, ವಿಭಾಗ ಸಂಘಟನಾ ಕಾರ್ಯದರ್ಶಿ ಪ್ರಸಾದ್ ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಸ್ತೂರಿ ಪಂಜ, ತಾಲೂಕಿನ ಎಲ್ಲಾ ಪಕ್ಷದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದ […]Read More
ಗುರುವಾಯನಕೆರೆ: ದೀಪಾವಳಿ ದೋಸೆ ಹಬ್ಬದ ಪ್ರಯುಕ್ತ ಕುವೆಟ್ಟು, ನಾರಾವಿ,ಅಳದಂಗಡಿ , ಕಣಿಯೂರು ಮಹಾಶಕ್ತಿಕೇಂದ್ರದ
ಗುರುವಾಯನಕೆರೆ:ಬೆಳ್ತಂಗಡಿ ಮಂಡಲ ಯುವ ಮೋರ್ಚಾ ವತಿಯಿಂದ ಸೋಮವಾರ ನಡೆಯುವಂತಹ “ದೀಪಾವಳಿ ದೋಸೆ ಹಬ್ಬದ “ಪ್ರಯುಕ್ತ ಕುವೆಟ್ಟು,ನಾರಾವಿ,ಅಳದಂಗಡಿ ಕಣಿಯೂರು ಮಹಾಶಕ್ತಿ ಕೇಂದ್ರದ ಪ್ರಮುಖರ ಪೂರ್ವಭಾವಿ ಸಭೆ ಗುರುವಾಯನಕೆರೆಯ ಕುಲಾಲ ಮಂದಿರದಲ್ಲಿ ಅ.21 ರಂದು ನಡೆಯಿತು. ವೇದಿಕೆಯಲ್ಲಿ ಶಾಸಕರಾದ ಹರೀಶ್ ಪೂಂಜ ,ಬಿಜೆಪಿ ಮಂಡಲ ಅಧ್ಯಕ್ಷರಾದ ಜಯಂತ್ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿಗಳಾದ ಶ್ರೀನಿವಾಸ್ ರಾವ್,ಗಣೇಶ್ ಗೌಡ, ಉಪಾಧ್ಯಕ್ಷರಾದ ಸೀತಾರಾಮ್ ಬೆಳಾಲು ಯುವ ಮೋರ್ಚಾ ಅಧ್ಯಕ್ಷರಾದ ಯಶವಂತ್ ಗೌಡ ಬೆಳಾಲು, ಪ್ರಧಾನ ಕಾರ್ಯದರ್ಶಿಗಳಾದ ಉಮೇಶ್ ಕುಲಾಲ್, ವಿನೀತ್ ಕೋಟ್ಯಾನ್ ಹಾಗೂ […]Read More
ಬಂದಾರು: ಬಂದಾರು ಗ್ರಾ. ಪಂಚಾಯತಿನ 2021-22ಸಾಲಿನ ಪ್ರಥಮ ಹಂತದ ಗ್ರಾಮ ಸಭೆಯು ಗ್ರಾಮ ಪಂಚಾಯತ್ಅಧ್ಯಕ್ಷೆ ಪರಮೇಶ್ವರಿ ಗೌಡರವರ ಅಧ್ಯಕ್ಷತೆಯಲ್ಲಿ ಅ. 10ರಂದು ಗ್ರಾಮ ಪಂಚಾಯತಿ ಸಭಾಭವನದಲ್ಲಿ ಜರಗಿತು. ನೋಡಲ್ ಅಧಿಕಾರಿಯಾಗಿ ಪಶು ಸಂಗೋಪನೆ ಇಲಾಖೆಯ ಸಹಾಯಕ ನಿರ್ದೇಶಕರಾದ ಮಂಜ ನಾಯ್ಕ ವಹಿಸಿದ್ದರು. ಪುನರಡ್ಕದಲ್ಲಿ ಬೋರ್ವೆಲ್ ತೆಗೆದಿದ್ದೀರಿ ಪಂಪು ಹಾಕಿದ್ದೀರಿ ಆದರೆ ಅಲ್ಲಿ ನೀರಿಲ್ಲ.ಏನು ವ್ಯವಸ್ಥೆ ಕೈಗೊಂಡಿದ್ದೀರಿ ಎಂದು ಗ್ರಾಮಸ್ಥರು ಕೇಳಿದಾಗ ಅದಕ್ಕೆ ಉತ್ತರಿಸಿದ ಅಭಿವೃದ್ಧಿ ಅಧಿಕಾರಿ ಮೋಹನ್ ಮಾತನಾಡಿ ಅಲ್ಲಿ ಟ್ಯಾಂಕಿ ಮಾಡಲು ನಾವು ಜಾಗ […]Read More
ಉಡುಪಿ: ಕರ್ನಾಟಕ ವಿಧಾನಸಭೆಯ ಸರ್ಕಾರಿ ಭರವಸೆಗಳ ಸಮಿತಿಯು 15ನೇ ವಿಧಾನಸಭೆಯ 13ನೇ ಕರುಡು ವರದಿ ಪರಿಶೀಲಿಸಿ ಅಂಗೀಕರಿಸಲು ತೀರ್ಮಾನಿಸಿರುವಂತೆ ಕರುಡು ವರದಿ ಪರಿಶೀಲನಾ ಸಭೆ ನಡೆಸಲಾಯಿತು. ಸಭೆಯಲ್ಲಿ ಕರುಡು ವರದಿ ಪರಿಶೀಲಿಸಿ ಅಂಗೀಕರಿಸಲು ಸದನಕ್ಕೆ ಸಲ್ಲಿಸುವ ಬಗ್ಗೆ ಚರ್ಚಿಸಲಾಯಿತು. ಸಮಿತಿಯ ಸದಸ್ಯರು ಹಾಗೂ ಜಂಟಿ ಕಾರ್ಯದರ್ಶಿ ಮಂಜುಳಾ, ಉಪ ಕಾರ್ಯದರ್ಶಿ ಶಿವರಾಂ ಆಚಾರ್ಯ, ಅಧೀನ ಕಾರ್ಯದರ್ಶಿ ಎನ್. ರಾಜಣ್ಣ ಉಪಸ್ಥಿತರಿದ್ದರು.Read More
ಕರಾಯ: ಸೆಪ್ಟೆಂಬರ್ 2 ರಂದು ಮಂಗಳೂರಿಗೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಜಿ ಭೇಟಿ ಹಿನ್ನೆಲೆಯಲ್ಲಿ ಕಣಿಯೂರು ಮಹಾ ಶಕ್ತಿ ಕೆಂದ್ರದ ಸಭೆಯು ಕರಾಯ ಶ್ರೀ ಕೃಷ್ಣ ಭಜನಾ ಮಂದಿರದಲ್ಲಿ ಮಂಡಲ ಅಧ್ಯಕ್ಷರಾದ ಜಯಂತ್ ಕೋಟ್ಯಾನ್ ಮತ್ತು ಬೆಳ್ತಂಗಡಿಯ ಶಾಸಕರಾದ ಹರೀಶ್ ಪೂಂಜರ ನೇತೃತ್ವದಲ್ಲಿ ಜರುಗಿತು. ಈ ಸಂದರ್ಭದಲ್ಲಿ ಪಕ್ಷದಲ್ಲಿ ವಿವಿಧ ಜವಬ್ದಾರಿ ಇರುವ ಪ್ರಮುಖರು,ಜನಪ್ರತಿನಿಧಿಗಳು, ಪಕ್ಷದ ಎಲ್ಲಾ ಪ್ರಮುಖರು ಉಪಸ್ಥಿತರಿದ್ದರು.Read More