ಇತ್ತೀಚೆಗಷ್ಟೇ ಗೂಗಲ್ ನ 28 ಉದ್ಯೋಗಿಗಳು ‘ಇಸ್ರೇಲ್ ಜೊತೆಗಿನ ಗೂಗಲ್ ಒಪ್ಪಂದವನ್ನು ರದ್ದುಗೊಳಿಸುವಂತೆ’ ಮುಷ್ಕರ ನಡೆಸಿ ಗೂಗಲ್ ಮೇಲೆಯೇ ಒತ್ತಡ ಹೇರಿದ್ದರು. ಈ ಪಕ್ಷಪಾತಿ ಉದ್ಯೋಗಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮಕೈಗೊಂಡು, ಗೂಗಲ್ ಸಂಸ್ಥೆಯು ಅವರಿಗೆ ದಾರಿ ತೋರಿಸಿದೆ. ಅತಿದೊಡ್ಡ ಅಂತರಾಷ್ಟ್ರೀಯ ಸಂಸ್ಥೆಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳು ಕೆಲಸಕ್ಕಿಂತ ಧರ್ಮಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿದರೆ ಮತ್ತು ಕಮ್ಯುನಿಸ್ಟ್ ಅಜೆಂಡಾಗಳನ್ನು ನಿರ್ವಹಿಸಿದರೆ, ಅಂತಹ ಉದ್ಯೋಗಿಗಳಿಂದ ನ್ಯಾಯವನ್ನು ನಿರೀಕ್ಷಿಸಲಾಗುವುದಿಲ್ಲ. ಆದ್ದರಿಂದ, ಕೆಲವು ತಿಂಗಳ ಹಿಂದೆ, ಧಾರ್ಮಿಕ ಪೂಜೆ, ಆರತಿ, ನಾಮಜಪ […]
ಬಂದಾರು. ಫೆ 13 ಭಾರತ ಸಂವಿಧಾನ ಅಂಗೀಕಾರಗೊಂಡ 75ನೇ ವರ್ಷದ ಆಚರಣೆಯ ಪ್ರಯುಕ್ತ “ಸಂವಿಧಾನ ಜಾಗೃತಿ ಜಾಥವು ಬಂದಾರು ಪಂಚಾಯತ್ ನಲ್ಲಿ ನಡೆಯಿತು. ಬಂದಾರು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಬಳಿಯಿಂದ ಗ್ರಾಮ ಪಂಚಾಯತ್ ವರೆಗೆ ಕಾಲ್ನಡಿಗೆ ಮೆರವಣಿಗೆಯ ಜಾಥಾ ಮೂಲಕ ಬರಮಾಡಿಕೊಳ್ಳಲಾಯಿತು. ತದನಂತರ ಗ್ರಾಮ ಪಂಚಾಯತ್ ನ ಆವರಣದಲ್ಲಿ ಕಾರ್ಯಕ್ರಮ ನೆರವೇರಿಸಲಾಯಿತು. ಬಂದಾರು ಗ್ರಾಮ ಪಂಚಾಯತ್ ಅಧ್ಯಕ್ಷ ದಿನೇಶ್ ಗೌಡ ಖಂಡಿಗ ಇವರ ಸಮ್ಮುಖದಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಸರಕಾರಿ ಪ್ರೌಢ ಶಾಲೆ […]Read More
ಮಾಚಾರು: ಇಲ್ಲಿನ ಪ್ರಗತಿ ಯುವಕ ಮಂಡಲ(ರಿ) ,ಪ್ರಗತಿ ಯುವತಿ ಮಂಡಲ ಮಾಚಾರು,ಶ್ರೀ ಲಕ್ಷ್ಮೀನಾರಾಯಣ ಭಜನಾ ಮಂಡಳಿ ಬದನಾಜೆ,ಸ.ಉ.ಹಿ.ಪ್ರಾ ಶಾಲೆ ಬದನಾಜೆ ಹಾಗೂ ಹಳೆ ವಿದ್ಯಾರ್ಥಿ ಸಂಘ ಬದನಾಜೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ 31ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮವನ್ನು ಸ್ಥಳೀಯರಾದ ಸೇಸಪ್ಪ ಗೌಡ ಎಕ್ಕಿನ ಬೆಟ್ಟು ಉದ್ಘಾಟಿಸಿದರು. ವೇದಿಕೆಯಲ್ಲಿ ಯುವಕ ಮಂಡಲದ ಗೌರವಾಧ್ಯಕ್ಷರಾದ ರಾಮಯ್ಯ ಗೌಡ,ಭಜನಾ ಮಂಡಳಿ ಅಧ್ಯಕ್ಷ ಸನತ್ ಕುಮಾರ್ ಪಾಲೆಂಜ,ಯುವಕ ಮಂಡಲ ಅಧ್ಯಕ್ಷ ಸೋಮಶೇಖರ್ ಕೆ,ಯುವತಿ ಮಂಡಳಿ ಅಧ್ಯಕ್ಷೆ ಅರುಣಾಕ್ಷಿ,ಅರ್ಚಕರಾದ […]Read More
ಸೌಜನ್ಯ ಪ್ರಕರಣವನ್ನು ಮರು ತನಿಖೆಗೆ ಒಳಪಡಿಸುವಂತೆ ದ.ಕ ಮತ್ತು ಉಡುಪಿ ಜಿಲ್ಲೆಯ ಬಿಜೆಪಿ ಶಾಸಕರ ನಿಯೋಗದೊಂದಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು. ಮನವಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ರವರು ಉತ್ತರಿಸುತ್ತಾ, ಸೌಜನ್ಯ ಪ್ರಕರಣವನ್ನು ಮರು ತನಿಖೆಗೆ ಒಳಪಡಿಸಲು ರಾಜ್ಯ ಸರಕಾರಕ್ಕೆ ಕಾನೂನಿನಲ್ಲಿ ಅವಕಾಶವಿರುವುದಿಲ್ಲ. ಈ ವಿಷಯವನ್ನು ಸೌಜನ್ಯ ಪೋಷಕರಿಗೆ ನಾನು ತಿಳಿಸಿದ್ದೇನೆ. ಈಗಾಗಲೇ ಕಾನೂನು ಸಲಹೆಯನ್ನು ನಾನು ಪಡೆದಿರುವುದರಿಂದ ಸೌಜನ್ಯಳ ಪೋಷಕರು ಮೇಲ್ಮನವಿ ಸಲ್ಲಿಸಬಹುದು ಅಥವಾ ಸಿಬಿಐ ಮೇಲ್ಮನವಿ ಸಲ್ಲಿಸಲು ಅವಕಾಶವಿರುತ್ತದೆ. ನೀವುಗಳು ಬಂದಿರುವುದರಿಂದ […]Read More
ಬೆಳಾಲು: ಇಲ್ಲಿನ ಹಿಪ್ಪ ತಾರಂಗಡಿ ನಿವಾಸಿ ನೋಣಯ್ಯ ಪೂಜಾರಿ (68ವರ್ಷ) ಅಲ್ಪಕಾಲದ ಅನಾರೋಗ್ಯದಿಂದ ಇಂದು ಮಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟರು. ಮೃತರು ಮೂರ್ತೆದಾರಿಕೆ ಕೆಲಸದ ಜೊತೆಗೆ ಕೃಷಿಕರಾಗಿದ್ದರು. ಮೃತರು ಪತ್ನಿ ಜಿನ್ನಮ್ಮ,ಪುಣೆಯ ಹೊಟೇಲ್ ಉದ್ಯಮಿ ಪುತ್ರ ಪೀತಾಂಬರ ಪೂಜಾರಿ,ಸೊಸೆ ಮತ್ತು ಮೊಮ್ಮಗ ಸೇರಿದಂತೆ,ಪುತ್ರಿಯರಾದ ಬಂದಾರು ಗ್ರಾ.ಪಂ.ಸದಸ್ಯೆ ಅನಿತಾ ಕುರುಡಂಗೆ,ಕೊಯ್ಯೂರು ಗ್ರಾ.ಪಂ.ಸದಸ್ಯೆ ಸುಮಿತಾ ಹಾಗೂ ಚಂದ್ರಿಕ ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ.Read More
ಬೆಳ್ತಂಗಡಿ: ಡಿ.ಕೆ.ಆರ್.ಡಿ.ಎಸ್ (ರಿ) ಬೆಳ್ತಂಗಡಿ ನೇತೃತ್ವದಲ್ಲಿ ಕಾರಿತಾಸ್ ಇಂಡಿಯಾ-ಸ್ಪರ್ಶ ಕಾರ್ಯಕ್ರಮ ಹಾಗೂ ಕಾನ್ಫರೆನ್ಸಾ ಎಪಿಸ್ಕೋಪಾಲೆ ಇಟಾಲಿಯಾನ ಇವರ ಆಶ್ರಯದಲ್ಲಿ ಸೆ.4 ರಂದು ಪೌಷ್ಟಿಕ ಆಹಾರ ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ಹಾಗೂ ಗುರುವಂದನಾ ಕಾರ್ಯಕ್ರಮವು ಬೈಂದೂರು ತಾಲೂಕಿನ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಬೈಂದೂರು, ಶ್ರೀ. ಮೂಕಾಂಬಿಕಾ ದೇವಳದ ಪ್ರೌಢಶಾಲೆ ಬೀಸಿನಪಾರೆ, ಅಂಗನವಾಡಿ ಕೇಂದ್ರ ಕೊರಾಡಿ ಹಾಗೂ ಮುದೂರಿನ ದುಡ್ಡಿನಗುಳಿ ಅಂಗನವಾಡಿ ಕೇಂದ್ರದಲ್ಲಿ ಆಯೋಜಿಸಲಾಯಿತು. ಈ ಕಾರ್ಯಕ್ರಮದಲ್ಲಿ ಪೌಷ್ಟಿಕ ಆಹಾರದ ಬಗ್ಗೆ ಮಾಹಿತಿ ಪ್ರಾತ್ಯಕ್ಷಿಕೆ ಹಾಗೂ […]Read More
ಬದನಾಜೆ: ಕಳೆದ 37 ವರ್ಷಗಳ ಕಾಲ ಶಿಕ್ಷಕಿಯಾಗಿ, ಮುಖ್ಯ ಶಿಕ್ಷಕಿಯಾಗಿ ಕರ್ತವ್ಯವನ್ನು ನಿರ್ವಹಿಸಿ ನಿವೃತ್ತಿಯನ್ನು ಹೊಂದಿದ ಮುಖ್ಯ ಶಿಕ್ಷಕಿ ಶ್ರೀಮತಿ ಶಾರದಾ ಸ.ಉ.ಪ್ರಾ.ಶಾಲೆ ಬದನಾಜೆ ಹಾಗೂ ಸ.ಉ.ಪ್ರಾ.ಶಾಲೆ ಬದನಾಜೆ ಇಲ್ಲಿಂದ ವರ್ಗಾವಣೆಗೊಂಡು ಮಾದರಿ ಶಾಲೆ ಬೆಳ್ತಂಗಡಿಗೆ ತೆರಳಿರುವ ಅಖಿಲ್ ಕುಮಾರ್ ಇವರ ಬೀಳ್ಕೊಡುಗೆ ಸಮಾರಂಭವು ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಬದನಾಜೆ ಇಲ್ಲಿ ಜರುಗಿತು. ಈ ಕಾರ್ಯಕ್ರಮದಲ್ಲಿ ಬದನಾಜೆ ಶಾಲಾ ಎಸ್ಡಿಎಂಸಿ ಅಧ್ಯಕ್ಷರಾದ ಶ್ರೀಯುತ ಅನಿಲ್ ಡಿಸೋಜ ಇವರು ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು. ಉಜಿರೆ ಗ್ರಾಮ […]Read More
ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಉಜಿರೆ ಯ ಎಸ್ ಡಿ ಎಂ ರೋಟರಿ ವೃತ್ತಿ ಮಾರ್ಗ ದರ್ಶನ ಮತ್ತು ಮಾನವ ಸಂಪನ್ಮೂಲ ಕೇಂದ್ರವು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮತ್ತು ಖಾಸಗಿ ಕಂಪನಿಗಳ ನೇಮಕಾತಿ ಪ್ರಕ್ರಿಯೆಗಳಿಗೆ ಪೂರಕವಾಗಿ ವಿದ್ಯಾರ್ಥಿಗಳಿಗೆ ವೃತ್ತಿಪರ ಕೌಶಲ್ಯದ (Quantitative Aptitude) ಕುರಿತು ಹತ್ತು ದಿನಗಳ ತರಬೇತಿ ಕಾರ್ಯಾಗಾರನ್ನು ಪದವಿ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾಯಿತು. ಈ ಕಾರ್ಯಾಗಾರದಲ್ಲಿ ಒಟ್ಟು 52 ವಿದ್ಯಾರ್ಥಿಗಳು ಭಾಗವಹಿಸಿ ಪ್ರಯೋಜನವನ್ನು ಪಡೆದುಕೊಂಡರು. ಸಂಪನ್ಮೂಲ ವ್ಯಕ್ತಿಗಳಾಗಿ ಮನೋಹರ ಟಿ. ಜೆ ಭಾಗವಹಿಸಿ ಹತ್ತು […]Read More
ಮೇಲಂತಬೆಟ್ಟು: ಬೈಕ್ ಗಳೆರಡು ಮುಖಾಮುಖಿ ಡಿಕ್ಕಿ ಹೊಡೆದು ನಾಲ್ವರು ಗಂಭೀರ ಗಾಯಗೊಂಡಿರುವ ಘಟನೆ ಇಂದು ಬೆಳಿಗ್ಗೆ ಮೇಲಂತಬೆಟ್ಟು ಸಮೀಪದ ಕಲ್ಲಗುಡ್ಡೆ ಎಂಬಲ್ಲಿ ನಡೆದಿದೆ. ಬೆಳ್ತಂಗಡಿಯಿಂದ ಸವಣಾಲು ಕಡೆಗೆ ತೆರಳುತ್ತಿದ್ದ ಬೈಕ್ ಹಾಗೂ ಸವಣಾಲು ಕಡೆಯಿಂದ ಬೆಳ್ತಂಗಡಿ ಗೆ ಬರುತ್ತಿದ್ದ ಬೈಕ್ ನಡುವೆ ಅಪಘಾತ ಸಂಭವಿಸಿದೆ. ಈ ವೇಳೆ 2.5 ವರ್ಷದ ಮಗು , ಮಹಿಳೆ ಹಾಗೂ ಬೈಕ್ ಸವಾರ ಮತ್ತು ಇನ್ನೋರ್ವ ಬೈಕ್ ಸವಾರ ಸೇರಿ ನಾಲ್ವರಿಗೂ ಗಂಭೀರ ಗಾಯಗಳಾಗಿವೆ.Read More
ಉಜಿರೆ: ಇಲ್ಲಿನ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಬದನಾಜೆಯಲ್ಲಿ ನಡೆದ ವಲಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ,ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಒಟ್ಟು12 ಮಕ್ಕಳು ಭಾಗವಹಿಸಿದ್ದು,ಅದರಲ್ಲಿ ಹಿರಿಯ ವಿಭಾಗದ ಕತೆ ಹೇಳುವ ಸ್ಪರ್ಧೆಯಲ್ಲಿ ತನಿಷ್ಕ ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಹಿರಿಯ ವಿಭಾಗದ ಕನ್ನಡ ಕಂಠಪಾಠ ಸ್ಪರ್ಧೆಯಲ್ಲೂ ಇವಳು ತೃತೀಯ ಸ್ಥಾನ ಪಡೆದಿರುತ್ತಾಳೆ.ಕಿರಿಯ ವಿಭಾಗದ ಛದ್ಮವೇಷ ಸ್ಪರ್ಧೆಯಲ್ಲಿ ಮನ್ವಿತ್ ಎಂ.ಎಸ್.ದ್ವಿತೀಯ ಸ್ಥಾನ ಪಡೆದಿರುತ್ತಾನೆ.Read More