ಮೂಡಬಿದಿರೆ: ಇಂದು ಸುರಿದ ಧಾರಾಕಾರ ಮಳೆಯಿಂದಾಗಿ ಮೂಡಬಿದಿರೆ ಮೈಟ್ ಕಾಲೇಜ್ ನ ಕಾಂಪೌಂಡ್ ಕುಸಿದುಬಿದ್ದಿದ್ದು ರಸ್ತೆಯಲ್ಲಿ ನಿಂತಿದ್ದ ಮೂರು ಕಾರಿಗೆ ಹಾನಿಯುಂಟಾದ ಘಟನೆ ವರದಿಯಾಗಿದೆ. ಕಾಂಪೌಂಡ್ ಕುಸಿಯುವ ವೇಳೆ ಕಾರಿನಲ್ಲಿ ಯಾರೂ ಇಲ್ಲದಿದುದರಿಂದ ಭಾರೀ ದುರಂತವೊಂದು ತಪ್ಪಿದಂತಾಗಿದೆ
ಮಂಗಳೂರು: ನಗರದ ಪೊಲೀಸ್ ಮೈದಾನದಲ್ಲಿ ರೌಡಿಗಳ ಪರೇಡ್ ವೇಳೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ಅವರು ಡ್ರಗ್ಸ್ ಪ್ರಕರಣದ ಆರೋಪಿ ಡ್ಯಾನ್ಸರ್ ಕಿಶೋರ್ ಶೆಟ್ಟಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಶಶಿಕುಮಾರ್ ಅವರು ಕಿಶೋರ್ ಶೆಟ್ಟಿಗೆ ಬಟ್ಟೆ ಬಿಚ್ಚಿಸಿ ಏನಪ್ಪ ಮೈಮೇಲೆ ಇಷ್ಟು ಟ್ಯಾಟೂ ಹಾಕಿಸಿಕೊಂಡಿದ್ಯಾ ಎಂದು ಕೇಳಿದ್ದಾರೆ. ಇದಕ್ಕೆ ಕಿಶೋರ್ ಶೆಟ್ಟಿ ತಾಯಿಯ ಟ್ಯಾಟೋ ಎಂದು ಉತ್ತರಿಸಿದ್ದಾನೆ . ಮಾಡೋದೆಲ್ಲಾ ಮಾಡಿ ತಾಯಿಯದ್ದು ಯಾಕೆ ಹಾಕಿಸಿಕೊಂಡಿದ್ದೀಯಾ? ನೆಟ್ಟಗೆ ಬಾಳಿದರೆ ಸಾಕು ಹಚ್ಚೆ ಹಾಕಿಸಿಕೊಳ್ಳಬೇಕಿಲ್ಲ ಎಂದು […]Read More
ಕಾರ್ಕಳ: ನಿರಂತರವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಶಾಲಾ ಕಾಲೇಜುಗಳಿಗೆ ಇಂದು ಉಡುಪಿ ಜಿಲ್ಲಾಧಿಕಾರಿ ರಜೆ ಘೋಷಿಸಿದ್ದರೂ, ಕಾರ್ಕಳ ತಾಲೂಕಿನ ನಂದಳಿಕೆ ಶ್ರೀ ಲಕ್ಷ್ಮೀ ಜನಾರ್ದನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಎಂದಿನಂತೆ ತರಗತಿ ನಡೆಯುತ್ತಿದೆ. ಮಳೆಯ ವಿಕೋಪಕ್ಕೆ ಶಾಲಾ ಕಾಲೇಜುಗಳಿಗೆ ಉಡುಪಿ ಜಿಲ್ಲಾಧಿಕಾರಿಗಳು ರಜೆ ಸಾರುವಂತೆ ಆದೇಶ ನೀಡಿದ್ದರೂ, ಇಲ್ಲಿನ ಆಡಳಿತ ಮಂಡಳಿ ಡಿಸಿ ಆದೇಶಕ್ಕೂ ಕ್ಯಾರೇ ಎನ್ನದ ರೀತಿಯಲ್ಲಿ ತರಗತಿಯನ್ನು ನಡೆಸಲು ಮುಂದಾಗಿದೆ.ಇಂದು ಬೆಳ್ಳಂಬೆಳಗ್ಗೆ ಡಿಸಿ ರಜೆ ಸಾರುವಂತೆ ಆದೇಶವನ್ನು ಹೊರಡಿಸಿದ್ದು, ನಂದಳಿಕೆ ಲಕ್ಷ್ಮೀ […]Read More
ಚಿಕ್ಕಮಗಳೂರು: ಪುಟ್ಟ ಬಾಲಕಿಯೊಬ್ಬಳು ಕಾಲು ಕೆಸರಾಗಿದೆ ಎಂದು ಕಾಲು ತೊಳೆದುಕೊಳ್ಳಲು ಹಳ್ಳಕ್ಕೆ ಇಳಿದಿದ್ದು, ನೀರಿನ ರಭಸಕ್ಕೆ ಹಳ್ಳದಲ್ಲಿ ಕೊಚ್ಚಿ ಹೋದ ಘಟನೆ ಚಿಕ್ಕಮಗಳೂರು ತಾಲೂಕಿನ ಹೊಸಪೇಟೆ ಗ್ರಾಮದಲ್ಲಿ ನಡೆದಿದೆ. ಹಳ್ಳದಲ್ಲಿ ಕೊಚ್ಚಿ ಹೋದ ಬಾಲಕಿ ಸುಪ್ರೀತಾ ಎಂದು ಗುರುತಿಸಲಾಗಿದೆ. ಸುಪ್ರಿತಾ ತನ್ನ ಅಣ್ಣನ ಜೊತೆ ಶಾಲೆ ಮುಗಿಸಿಕೊಂಡು ಮನೆಗೆ ಬರುತ್ತಿದ್ದ ಸಂದರ್ಭದಲ್ಲಿ ಕಾಲು ಕೆಸರಾಯಿತು ಎಂದು ಅಣ್ಣ ತಂಗಿ ಇಬ್ಬರು ಹಳ್ಳದಲ್ಲಿ ಕಾಲು ತೊಳೆದುಕೊಳ್ಳಲು ಹೋಗಿದ್ದರು ಈ ವೇಳೆ ತಂಗಿ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ.Read More
ಕಲಬುರಗಿ: ಪ್ರೀತಿ ಮಾಡಬಾರದು, ಮಾಡಿದರೆ ಜಗಕೆ ಹೆದರಬಾರದು ಅಂತಾರೆ. ಅದೇ ರೀತಿ ಅಲ್ಲಿ ಯುವಕ ಯುವತಿ ಪ್ರೀತಿಸಿದ್ದರು. ಕಾಲೇಜು ಓದುತ್ತಿದ್ದ ಯುವತಿ, ಲಾಡ್ಜ್ ನಲ್ಲಿ ಕೆಲಸ ಮಾಡುತ್ತಿದ್ದ ಯುವಕನನ್ನು ಪ್ರೀತಿಸಿದ್ದಳು. ಆದ್ರೆ ಈ ಪ್ರೀತಿಗೆ ಯುವತಿಯ ಮನೆಯವರು ರೆಡ್ ಸಿಗ್ನಲ್ ನೀಡಿದ್ರು. ಆದ್ರು ಕೂಡಾ ಇಬ್ಬರು ಓಡಿ ಹೋಗಿದ್ದರು. ನಂತರ ಯುವತಿಯ ಮನೆಯವರು ಯುವತಿಯನ್ನು ಕರೆದುಕೊಂಡು ತಮ್ಮ ಮನೆಗೆ ಹೋಗಿದ್ದರು. ಆದ್ರೆ ಯುವತಿ ಮಾತ್ರ ಪ್ರಿಯಕರನನ್ನು ಬಿಟ್ಟು ಇರಲಾರೆ ಅಂತ ಹಠಕ್ಕೆ ಬಿದ್ದಿದ್ದಳು. ಇದೇ ದ್ವೇಷ […]Read More
ಮೈಸೂರು, ಜುಲೈ 4: ಕೊರೊನಾ ಕಾರಣದಿಂದ ಕಳೆದ ಎರಡು ವರ್ಷಗಳಿಂದ ಐತಿಹಾಸಿಕ ಮೈಸೂರು ದಸರಾ ಕಳೆಗುಂದಿತ್ತು. ಆದರೆ ಈ ಬಾರಿ ಮತ್ತೆ ದಸರಾ ವೈಭವ ಮರುಕಳಿಸುವ ಲಕ್ಷಣಗಳು ಕಂಡು ಬಂದಿದ್ದು, ಇದರಿಂದ ಮೈಸೂರಿನ ಜನ ಖುಷಿಗೊಂಡಿದ್ದಾರೆ. ಇದೀಗ ಆಷಾಢ ಶುಕ್ರವಾರ ಚಾಮುಂಡಿಬೆಟ್ಟಕ್ಕೆ ದರ್ಶನಕ್ಕೆ ಅವಕಾಶ ನೀಡಿದ ಬೆನ್ನಲ್ಲೇ ದಸರಾ ಅದ್ಧೂರಿಯಾಗಿ ನಡೆಯುವುದು ಖಚಿತವಾಗಿದೆ. ಈಗಾಗಲೇ ಅಲ್ಲಲ್ಲಿ ಕೊರೊನಾ ಪ್ರಕರಣಗಳು ಕಾಣಿಸುತ್ತಿದ್ದರೂ, ಈ ಹಿಂದಿನ ತೀವ್ರತೆ ಇಲ್ಲದಿರುವುದರಿಂದ ಮತ್ತು ಮುಂದಿನ ದಿನಗಳಲ್ಲಿ ಪ್ರಕರಣ ಇಳಿಮುಖವಾಗಬಹುದು ಎಂಬ ಆಲೋಚನೆಗಳು […]Read More
ಉಡುಪಿ: ಕರಾವಳಿಯ ಮತ್ತೊಂದು ಬೆಡಗಿ ಮಿಸ್ ಇಂಡಿಯಾ ಗೌರವಕ್ಕೆ ಪಾತ್ರರಾಗಿದ್ದಾರೆ. ಉಡುಪಿ ಮೂಲದ ಸಿನಿ ಶೆಟ್ಟಿಗೆ ಮಿಸ್ ಇಂಡಿಯಾ ಅವಾರ್ಡ್ ಗೌರವ ಲಭ್ಯವಾಗಿದ್ದು, ಉಡುಪಿಯ ಸಿನಿ ಶೆಟ್ಟಿ ಕುಟುಂಬಸ್ಥರ ಮನೆಯಲ್ಲಿ ಸಂತಸದ ವಾತಾವರಣ ನಿರ್ಮಾಣ ಆಗಿದೆ. ಸಿನಿ ಸಾಧನೆಯನ್ನು ನೆನಪಿಸಿ ಕುಟುಂಬ ಸಂತಸಪಟ್ಟಿದೆ. ಸಿನಿ ಶೆಟ್ಟಿ ಉಡುಪಿಯ ಕಾಪು ತಾಲೂಕಿನ ಇನ್ನಂಜೆ ಗ್ರಾಮದ ಮಡುಂಬು ನಿವಾಸಿಯಾಗಿದ್ದು, ಹುಟ್ಟಿ ಬೆಳೆದಿದ್ದೆಲ್ಲಾ ಮುಂಬೈಯಲ್ಲಿಯೇ. ಆದರೆ ವರ್ಷಕ್ಕೊಮ್ಮೆ ಹುಟ್ಟೂರಿಗೆ ಬಂದು ಕುಟುಂಬದವರೊಂದಿಗೆ ಬೆರೆಯುತ್ತಿದ್ದರು. ಸಿನಿ ಶೆಟ್ಟಿ ತಂದೆ ಸದಾನಂದ ಶೆಟ್ಟಿ […]Read More