ಬೆಳ್ತಂಗಡಿ; ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಪದ್ಮುಂಜ ಇಲ್ಲಿಯ 5ನೇ ತರಗತಿ ವಿದ್ಯಾರ್ಥಿ ಕುಮಾರಿ ಅದಿತಿ ಮುಗಿರೋಡಿ ಇವರು maximum number of knee to elbow push ups in one minute ನಲ್ಲಿ 138 crunches ಮಾಡುವ ಮೂಲಕ “ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್” ನಲ್ಲಿ ದಾಖಲೆ ಬರೆದಿದ್ದಾರೆ. ಪ್ರತಿಭಾನ್ವಿತ ವಿದ್ಯಾರ್ಥಿನಿಯಾಗಿರುವ ಅದಿತಿ ಅವರು, ಆವಿಸ್ಕಾರ ಯೋಗ ಮಂಗಳೂರು ಇದರ ಯೋಗ ಗುರುಗಳಾದ ಕುಶಾಲಪ್ಪಗೌಡ ನೆಕ್ಕರಾಜೆ ಇವರ ಶಿಷ್ಯೆಯಾಗಿದ್ದಾರೆ. ಇವರು ಕರ್ನಾಟಕ […]
ವಾಣಿ ಸೌಹಾರ್ದ ಕೋ- ಆಪರೇಟಿವ್ ಸೊಸೈಟಿ (ಲಿ) ಯ ಕಲ್ಲೇರಿ ಶಾಖೆಯು ಡಿ.6 ರಂದು ಕಲ್ಲೇರಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ತಣ್ಣೀರುಪಂಥ ಕಟ್ಟಡದ 1 ನೇ ಮಹಡಿಯಲ್ಲಿ ಶುಭಾರಂಭಗೊಳ್ಳಲಿದೆ. ಉದ್ಘಾಟಕರಾಗಿ ಬೆಳ್ತಂಗಡಿ ಶಾಸಕರು ಹರೀಶ್ ಪೂಂಜ ಆಗನಿಸಲಿದ್ದು, ಅಧ್ಯಕ್ಷತೆಯನ್ನು ವಾಣಿ ಸೌಹಾರ್ದ ಕೋ- ಆಪರೇಟಿವ್ ಸೊಸೈಟಿ (ಲಿ) ಅಧ್ಯಕ್ಷರು ಹೆಚ್ ಪದ್ಮಗೌಡ ವಹಿಸಲಿದ್ದು ಗಣ್ಯಥಿ ಗಣ್ಯರು ಭಾಗಿಯಾಗಲಿದ್ದಾರೆRead More
ಬೆಳ್ತಂಗಡಿ ತಾಲೂಕು, ಕನ್ಯಾಡಿ- || ಶ್ರೀರಾಮ ನಿಲಯದ ಶ್ರೀಮತಿ ವಸಂತಿ ಮತ್ತು ಶ್ರೀ ರಾಮಣ್ಣ ಗುಡಿಗಾರರ ಮಗಳ ಶುಭವಿವಾಹದ ಆರತಕ್ಷತೆಯ ಸಂದರ್ಭದಲ್ಲಿ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರಿಗೆ ಕನ್ಯಾಡಿಯಲ್ಲಿ ಪುನಶ್ಚೇತನ ಕೇಂದ್ರದ ನೂತನ ಕಟ್ಟಡ ನಿರ್ಮಾಣಕ್ಕಾಗಿ ರೂ. 25,000 ಮೊತ್ತವನ್ನು ನೀಡಿ ಶುಭಹಾರೈಸಿದರು. ಸೇವಾಭಾರತಿ ಸಂಸ್ಥೆಯ ಸಂಸ್ಥಾಪಕರಾದ ಶ್ರೀ ಕೆ. ವಿನಾಯಕ ರಾವ್ ಇದನ್ನು ಸಿಬ್ಬಂದಿಯೊಂದಿಗೆ ಸ್ವೀಕರಿಸಿ. ನವ ವಧುವರರಿಗೆ ಶುಭಹಾರೈಸಿ ಸಂಸ್ಥೆಯ ಪರವಾಗಿ ಧನ್ಯವಾದವಿತ್ತರು. ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ಸ್ವರ್ಣಗೌರಿ, ಟ್ರಸ್ಟಿ ಶ್ರೀ […]Read More
ಮೊಗ್ರು :ಮೊಗ್ರು ಗ್ರಾಮದ ಮುಗೇರಡ್ಕ ಜೈ ಶ್ರೀ ರಾಮ ಸೇವಾ ಟ್ರಸ್ಟ್ (ರಿ.)ಅಲೆಕ್ಕಿ ಇದರ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ ನವೆಂಬರ್ 13 ರಂದು ಶ್ರೀ ರಾಮ ಶಿಶುಮಂದಿರದಲ್ಲಿ ಮೂರನೇ ವರ್ಷದ ಗೋಪೂಜೆ,ಭಜನೆ,ತುಳಸಿ ಪೂಜೆ, ಹಣತೆಗಳ ದೀಪ ಪ್ರಜ್ವಲನೆ ಕಾರ್ಯಕ್ರಮ ನೆರವೇರಿತು. ಶ್ರೀ ರಾಮ ಶಿಶುಮಂದಿರದ ಮಕ್ಕಳು, ಪೋಷಕರು , ಮಾತಾಜಿಯವರು,ಮಾತೃ ಮಂಡಳಿ ಹಾಗೂ ಜೈ ಶ್ರೀರಾಮ್ ಮಹಿಳಾ ಸಂಘ ಅಲೆಕ್ಕಿ- ಮುಗೇರಡ್ಕ್ ಇದರ ಸದಸ್ಯರು ಹಾಗೂ ಊರವರೆಲ್ಲಲರೂ ಸೇರಿ ಭಜನೆ,ತುಳಸಿ ಪೂಜೆ, ಗೋಪೂಜೆ, ಹಣತೆಗಳಿಗೆ […]Read More
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿಯಲ್ಲಿ ವಿದ್ಯಾರ್ಥಿಗಳಿಗಾಗಿ ಸ್ಮೈಲಿ ವರ್ಲ್ಡ್
ಬೆಳ್ತಂಗಡಿ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿಯಲ್ಲಿ ವಿದ್ಯಾರ್ಥಿಗಳಿಗಾಗಿ ಕಿಂಡರ್ ಗಾರ್ಡನ್ ಸ್ಮೈಲಿ ವಲ್ಡ್ ಪಾಕ್೯ನ್ನು ಶ್ರೀಮತಿ ಡಿ . ಸುಪ್ರಿಯ ಹರ್ಷೇಂದ್ರ ಕುಮಾರ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕರಾದ ಶ್ರೀಮತಿ ಹೇಮಲತಾ ಎಂ ಆರ್ ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಹಾಗೂ ಶಿಕ್ಷಕ ವೃಂದದವರು ಹಾಗೂ ಶಿಕ್ಷಕೇತರ ಸಿಬ್ಬಂದಿ ವರ್ಗದವರು ಉಪಸ್ಸಿತರಿದ್ದರು.Read More
ಇಳಂತಿಲ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ (ರಿ.) ಬಿ.ಸಿ. ಟ್ರಸ್ಟ್ ಗುರುವಾಯನಕೆರೆ. ಕಣಿಯೂರು ವಲಯದ ಇಳಂತಿಳ ಮತ್ತು ಅಂಡೆತ್ತಡ್ಕ ಒಕ್ಕೂಟದ ಪದಗ್ರಹಣ ಸಮಾರಂಭ ಅ 06 ರಂದು ವಾಣಿಶ್ರೀ ಸಭಾಭವನದಲ್ಲಿ ನಡೆಯಿತು.ಕಾರ್ಯಕ್ರಮದ ಉದ್ಘಾಟನೆಯನ್ನು ಬೆಳ್ತಂಗಡಿ ವಕೀಲರಾದ ಸುಬ್ರಹ್ಮಣ್ಯ ಕುಮಾರ್ ಅಗರ್ತ ನೆರವೇರಿಸಿದರು.ಅಧ್ಯಕ್ಷತೆಯನ್ನು ಪ್ರಗತಿ ಬಂಧು ಒಕ್ಕೂಟದ ಅಧ್ಯಕ್ಷರು ಬಾಲಕೃಷ್ಣ ಪೂಜಾರಿ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಎಸ್ ಕೆ ಡಿಆರ್ ಡಿಪಿ ಬಿ.ಸಿ ಟ್ರಸ್ಟ್ (ರಿ) ಗುರುವಾಯನಕೆರೆ ಯೋಜನಾಧಿಕಾರಿ ದಯಾನಂದ ಪೂಜಾರಿ, ಪ್ರಪುಲ್ಲ ಚಂದ್ರ ಅಡ್ಯಂತಾಯ […]Read More
ಮೂಡಬಿದಿರೆ: ನವರಾತ್ರಿ ಪ್ರಯುಕ್ತ, TOP ENTERTAINERS ಡಾನ್ಸ್ ಸ್ಟುಡಿಯೊ ಇವರಿಂದ ವೈವಿಧ್ಯಮಯ ಕಾರ್ಯಕ್ರಮ
ಮೂಡುಬಿದಿರೆ ಸಮಾಜ ಮಂದಿರದ 77 ನೇ ನವರಾತ್ರಿ ಉತ್ಸವದ ಪ್ರಯುಕ್ತಇಂದು ಸಂಜೆ 7 ಗಂಟೆಗೆ TOP ENTERTAINERS ಡಾನ್ಸ್ ಸ್ಟುಡಿಯೋ ಇವರಿಂದ ನೃತ್ಯ ಕಾರ್ಯಕ್ರಮ ನಡೆಯಲಿದೆ. ಈ ಸಂಸ್ಥೆಯ ವಿದ್ಯಾರ್ಥಿಗಳಿಂದ ವಿವಿಧ ನೃತ್ಯಗಳು ಸಮಾಜ ಮಂದಿರ ಮೂಡಬಿದಿರೆಯಲ್ಲಿ ಜರುಗಲಿದೆ.Read More
ಮಂಗಳೂರು:ದಾವಣಗೆರೆ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯು ಕರ್ನಾಟಕ ೭೭ನೇ ಕನ್ನಡ ರಾಜ್ಯೋತ್ಸವದ ಸುಸಂದರ್ಭದಲ್ಲಿ ಕೊಡಮಾಡುವ “ಕರ್ನಾಟಕ ಮುಕುಟಮಣಿ”ರಾಜ್ಯಪ್ರಶಸ್ತಿಯನ್ನು ಸಾಹಿತ್ಯಕೇತ್ರದ ಸಾಧನೆಯನ್ನು ಪರಿಗಣಿಸಿ ಯುವ ಸಾಹಿತಿ ಸತೀಶ್ ಬಿಳಿಯೂರು ಇವರನ್ನು ಆಯ್ಕೆ ಮಾಡಲಾಗಿದೆ.ಇವರು ಹಲವಾರೂ ಪ್ರಶಸ್ತಿಗಳ ಜೊತೆ “ಕರ್ನಾಟಕ ಕನ್ನಡ ಬುಕ್ ಆಫ್ ರೆಕಾರ್ಡ್ “ಹಾಗೂ” ವರ್ಲ್ಡ್ ಪ್ರೆಸ್ ಬುಕ್ ಆಫ್ ರೆಕಾರ್ಡ್” ನ ಪುಟದಲ್ಲಿ ಹೆಸರನ್ನು ದಾಖಲಿಸಿರುತ್ತಾರೆ.Read More
ಬೆಳ್ತಂಗಡಿ: ಪಾಠ- ಆಟಗಳೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲೂ ವಿದ್ಯಾರ್ಥಿಗಳು ಜೊತೆಯಾಗಬೇಕು. ಪಠ್ಯೇತರ ಚಟುವಟಿಕೆಗಳಿಗೂ ಮಕ್ಕಳು ಹೆಚ್ಚಿನ ಒತ್ತು ನೀಡುವ ದೃಷ್ಟಿಯಿಂದ ಬೆಳ್ತಂಗಡಿ ವಾಣಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಯಲಿನ್ ತರಗತಿಯೂ ಜೂ.16 ರಂದು ಶುಭಾರಂಭಗೊಳಿಸಲಾಯಿತು. ವಾಣಿ ಪ.ಪೂ ಕಾಲೇಜಿನ ಉಪಪ್ರಾಂಶುಪಾಲರಾದ ವಿಷ್ಣುಪ್ರಕಾಶ್ ಅವರು ದೀಪ ಬೆಳಗಿಸಿ ತರಗತಿಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು, ಪೋಷಕರು, ಮೊದಲಾದವರು ಭಾಗಿಯಾಗಿದ್ದರು. ಇನ್ನು ಪ್ರತೀ ಶನಿವಾರ ಅಪರಾಹ್ನ ಶ್ರೀಪ್ರಿಯಾ ಪರಕ್ಕಜೆಯವರು ತರಬೇತಿ ನೀಡಲಿದ್ದಾರೆRead More