ಹುಣ್ಸೆಕಟ್ಟೆ: ಬೆಳ್ತಂಗಡಿ ನ.ಪಂ ವ್ಯಾಪ್ತಿಯ ಹುಣ್ಸೆಕಟ್ಟೆ ಸರಕಾರಿ ಜಾಗದಲ್ಲಿ ಆಕಸ್ಮಿಕವಾಗಿ ಬೆಂಕಿ ಬೆಂಕಿ ಕಾಣಿಸಿಕೊಂಡಿದ್ದು ಅಂದಾಜು 2 ಸೆಂಟ್ಸ್ ಗಿಂತಲೂ ಅಧಿಕ ಪ್ರದೇಶ ಸುಟ್ಟು ಕರಕಲಾಗಿರುವ ಘಟನೆ ಮಾ.27 ರಂದು ಮಧ್ಯಾಹ್ನ ನಡೆದಿದೆ. ಘಟನೆಯಾದ ಪ್ರದೇಶದ ಸ್ವಲ್ಪ ದೂರದಲ್ಲೇ ಸುಮಾರು ಮನೆಗಳಿದ್ದು ಯಾವುದೇ ಅಪಾಯ ಸಂಭವಿಸಿಲ್ಲ. ಮಾಹಿತಿ ತಿಳಿದು ಗುರುವಾಯನಕೆರೆ ಅಗ್ನಿ ಶಾಮಕ ದಳ ಸ್ಥಳಕ್ಕೆ ಧಾವಿಸಿ ಅಗ್ನಿಯನ್ನು ನಂದಿಸಿದ್ದಾರೆ
ಲಾಯಿಲ ಸ್ನೇಕ್ ಅಶೋಕ್ ಗೆ ನಾಗರಹಾವು ಕಡಿತ: ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ: ಅದೃಷ್ಟವಶಾತ್
ಬೆಳ್ತಂಗಡಿ: ಪ್ರಸಿದ್ಧ ಹಾವು ರಕ್ಷಕರಾದ ಸ್ನೇಕ ಅಶೋಕ್ ಲಾಯಿಲ ಇವರು ನಾಗರ ಹಾವು ಹಿಡಿಯುವ ವೇಳೆ ಆಕಸ್ಮಿಕವಾಗಿ ಹಾವು ಕಚ್ಚಿದ್ದು ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವರದಿಯಾಗಿದೆ. ಧರ್ಮಸ್ಥಳ ಗ್ರಾಮದಲ ಒಂದು ಮನೆಯಲ್ಲಿ ನಾಗರ ಹಾವು ಇರುವುದಾಗಿ ಸ್ನೇಕ್ ಅಶೋಕ್ ಅವರಿಗೆ ಮಾಹಿತಿ ತಿಳಿದು ತಕ್ಷಣ ಹೊರಟ ಅವರು ನಾಗರ ಹಾವನ್ನು ಹಿಡಿಯುತ್ತಿದ್ದ ವೇಳೆ ಆಕಸ್ಮಿಕವಾಗಿ ಹಾವು ಕಚ್ಚಿದೆ. ತಕ್ಷಣ ಅವರನ್ನು ಉಜಿರೆ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿ ಹೆಚ್ಚಿನ […]Read More
ಕಲ್ಮಂಜ: ಬೈಕ್ ಹಾಗೂ ಸ್ಕಾರ್ಪಿಯೋ ವಾಹನಗಳ ಮಧ್ಯೆ ಅಪಘಾತ ಸಂಭಿಸಿ, ಬೈಕ್ ಸವಾರ ಮೃತಪಟ್ಟ ಘಟನೆ ನಿಡಿಗಲ್ ಎಂಬಲ್ಲಿ ಮಾ.7 ರಂದು ನಡೆದಿದೆ. ಕಲ್ಮಂಜ ಗ್ರಾಮದ ಏಲೆಂಗಿ ಮನೆ ನಿವಾಸಿ ಅಶೋಕ್ ಕುಮಾರ್ ಮೃತಪಟ್ಟ ದುರ್ದೈವಿ. ಬೆಳಿಗ್ಗೆ ಎಂದಿನಂತೆ ಕರ್ತವ್ಯಕ್ಕೆ ಹೋಗುತ್ತಿದ್ದ ವೇಳೆ ಈ ಘಟನೆ ಸಂಭವಿಸಿದ್ದು, ಉಜಿರೆ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.Read More
ಕುಪ್ಪೆಟ್ಟಿ: ಚಾಲಕನ ನಿಯಂತ್ರಣ ತಪ್ಪಿ ಗೂಡ್ಸ್ ರಿಕ್ಷಾ ಪಲ್ಟಿ: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದ
ಗುರುವಾಯನಕೆರೆಯಿಂದ ಉಪ್ಪಿನಂಗಡಿ ಸಾಗುವ ಕುಪ್ಪೆಟ್ಟಿ ರಸ್ತೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಗೂಡ್ಸ್ ರಿಕ್ಷಾ ಕಣಿವೆಗೆ ಪಲ್ಟಿಯಾದ ಘಟನೆ ಜ. 4 ರಂದು ಮಧ್ಯಾಹ್ನ ನಡೆದಿದೆ. ಗೂಡ್ಸ್ ರಿಕ್ಷಾ ಚಾಲಕ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆRead More
ಧರ್ಮಸ್ಥಳ: ಧರ್ಮಸ್ಥಳ ಗ್ರಾಮದ ಕನ್ಯಾಡಿ ರಾಮಮಂದಿರದ ಬಳಿಯ ಕ್ರಾಸ್ ನಲ್ಲಿ ಕಾರು ಹಾಗೂ ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು ಬೈಕ್ ಸವಾರ ಗಂಭೀರ ಗಾಯಗೊಂಡಿರುವ ಘಟನೆ ಡಿ.30 ರಂದು ನಡೆದಿದೆ. ಪರಿಣಾಮ ಬೈಕ್ ನ ಮುಂಭಾಗದ ಚಕ್ರ ಕಳಚಿ ಬಿದ್ದಿದೆ. ಧರ್ಮಸ್ಥಳದಿಂದ ಉಜಿರೆ ಕಡೆ ಬರುತ್ತಿದ್ದ ಬೈಕ್ ಹಾಗೂ ಧರ್ಮಸ್ಥಳದ ಕಡೆಗೆ ಹೋಗುತ್ತಿದ್ದ ಕಾರು ನಡುವೆ ಅಪಘಾತ ಸಂಭವಿಸಿದೆ. ಬೈಕ್ ಸವಾರ ಧರ್ಮಸ್ಥಳ ನಿವಾಸಿ ನಿತೇಶ್(28) ಗಂಭೀರ ಗಾಯಗೊಂಡಿದ್ದು ತಕ್ಷಣ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. […]Read More
ಉಜಿರೆ: ಉಜಿರೆ ವ್ಯಾಪ್ತಿಯ ಓಡಾಲ ಎಂಬಲ್ಲಿ ಆಟೋ ಹಾಗೂ ಬೊಲೆರೋ ವಾಹನ ಮುಖಾಮುಖಿ ಡಿಕ್ಕಿ ಹೊಡೆದಿರುವ ಘಟನೆ ಡಿ.28 ರಂದು ಸಂಜೆ ವೇಳೆ ನಡೆದಿದೆ. ಪರಿಣಾಮ ಆಟೋ ಮುಂಭಾಗ ಜಖಂ ಗೊಂಡಿದ್ದು ಆಟೋ ಚಾಲಕ ಗಂಭಿರ ಗಾಯಗೊಂಡಿದ್ದಾರೆ ಅವರನ್ನು ಉಜಿರೆ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ಬೊಲೆರೋ ವಾಹನದ ಮುಂಭಾಗ ನಜ್ಜುಗುಜ್ಜಾಗಿದ್ದು ಚಾಲಕ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.Read More
ಕಲ್ಮಂಜ: ಬೆಳ್ತಂಗಡಿ ತಾಲೂಕಿನ ಕಲ್ಮಂಜ ಗ್ರಾಮದ ಗುತ್ತಿನ ಮನೆ ನಿವಾಸಿ ಬಾಲಚಂದ್ರ ರಾವ್ ಅವರ ರಬ್ಬರ್ ಸ್ಮೋಕ್ ಹೌಸ್ ಗೆ ಆಕಸ್ಮಿಕ ಬೆಂಕಿ ತಗುಲಿ ಅಪಾರ ಪ್ರಮಾಣದ ಹಾನಿ ಸಂಭವಿಸಿದ ಘಟನೆ ಡಿ.26 ರಂದು ನಡೆದಿದೆ. ಪರಿಣಾಮ ಸುಮಾರು ಎರಡು ಕ್ವಿಂಟಾಲ್ ರಬ್ಬರ್, 7,000 ತೆಂಗಿನ ಕಾಯಿ ಹಾಗೂ ಮೂರು ಕೊಠಡಿಯಲ್ಲಿರಿಸಿದ್ದ ಅಡಿಕೆ ಸಂಪೂರ್ಣ ಸುಟ್ಟು ಕರಕಲಾಗಿದೆ. ತಕ್ಷಣ ಸ್ಥಳೀಯರು ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದ್ದಾರೆ ನಂತರ ಮಾಹಿತಿ ತಿಳಿದ ಅಗ್ನಿಶಾಮಕ ದಳ ಧಾವಿಸಿ ಬೆಂಕಿಯನ್ನು ನಂದಿಸಿದ್ದಾರೆRead More