ಬೇರ ಚಿತ್ರದ ನಾಯಕ ನಟ ಯಶ್ ಶೆಟ್ಟಿಯ ಪರಿಚಯ
ಕಳೆದ ಐದಾರು ವರ್ಷದಿಂದ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಂಡ ಯಶ್ ಶೆಟ್ಟಿ ಅವರು ಇದೀಗ ನಿಮ್ಮ ಮುಂದೆ ಬೇರ ಚಿತ್ರದಲ್ಲಿ ನಾಯಕ ನಟನಾಗಿ ಅಭಿನಯಿಸುತ್ತಿದ್ದಾರೆ.
ಮೂವತ್ತು ಸಿನಿಮಾಕಿಂತ ಹೆಚ್ಚು ಸಿನಿಮಾದಲ್ಲಿ ಕಾಣಿಸಿಕೊಂಡ ಇವರು ಮೂಲತಹ ಉಡುಪಿಯವರು. ಸುಮಾರು ಇಪ್ಪತ್ತು ವರ್ಷದಿಂದ ರಂಗಭೂಮಿಯಲ್ಲಿ ತನ್ನನ್ನು ತಾವು ತೊಡಗಿಸಿಕೊಂಡ ಇವರು ಚಿಕ್ಕ ವಯಸ್ಸಿನಿಂದಲೇ ಕಮರ್ಷಿಯಲ್ ನಾಟಕವನ್ನು ನಿರ್ಮಿಸಿ ಅಭಿನಯಿಸುತ್ತ ನಟನೆ ಲೋಕಕ್ಕೆ ಕಾಲಿಟ್ಟರು.
ಒಂದು ವರ್ಷ ನಿನಾಸಂ ಅಲ್ಲಿ ನಟನೆಯನ್ನು ಕಲಿತು ಅಲ್ಲಿಂದ ರಾಷ್ಟೀಯ ನಾಟಕ ಶಾಲೆಯಾದ ದೆಹಲಿಯಲ್ಲಿ ತಮ್ಮ ಪದವಿ ಶಿಕ್ಷಣವನ್ನು ಪಡೆದರು. ಅಲ್ಲಿ ನಟನೆಯನ್ನು ಕಲಿಯುವ ಸಮಯದಲ್ಲೇ ಏಶಿಯನ್ ಥೀಯೇಟರ್ ಒಫ್ ಎಜುಕೇಶನ್ ಸೆಂಟರ್ ಅಲ್ಲಿ ಇವರಿಗೆ ಉತ್ತಮ ನಟನ ಬಿರುದನ್ನು ನೀಡಲಾಯಿತು.
ಇಷ್ಟೇ ಅಲ್ಲದೆ ನಟನಾ ಶಾಲೆಯಲ್ಲಿ ಒಂದು ವರುಷ ಅಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ. ಒಂದು ವರುಷ ಇವರು ಸಿನಿಮಾದಲ್ಲಿ ಸಹಾಯಕನಾಗಿಯು ಕೆಲಸ ಮಾಡಿದ್ದಾರೆ.ನಂತರ ಇವರು ಜ್ವಲತಂ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದರು.
ಅದಾದ ನಂತರ ಚೌಕ,ಸಂಹಾರ, ಆ ದ್ರಶ್ಯ,ಕೃಷ್ಣ ಟಾಕೀಸ್, ಅಥರ್ವ, ಅಭಿಸಾರಿಕೆ ,ಸೂಜಿದಾರ, ಆದಿ ಲಕ್ಷ್ಮಿ ಪುರಾಣ,ಸಲಗ, ಆಯುಷ್ಮಾನ್ ಭವ, ಕೆ ಜಿ ಎಫ್, ಯಜಮಾನ , ನೂರೊಂದು ನೆನಪು ಮುಂತಾದ ಚಲನಚಿತ್ರದಲ್ಲಿ ಇವರು ನಟಿಸಿದ್ದಾರೆ. ಎಂತಹ ಪಾತ್ರವನ್ನೇ ಆಗಲಿ ಅದಕ್ಕೆ ಸರಿಯಾಗಿ ಜೀವ ತುಂಬುವುದರಲ್ಲಿ ಎತ್ತಿದ ಕೈ ಯಶ್ ಶೆಟ್ಟಿ ಅವರು.
ವಿನು ಬಳಂಜ ಅವರು ನಿರ್ಮಾಣದ ಬೇರ ಸಿನಿಮಾದಲ್ಲಿ ಯಶ್ ಶೆಟ್ಟಿ ಅವರು ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ತುಂಬಾ ಸೂಕ್ಷ್ಮವಾದ ಕತೆ ಮತ್ತು ಸೂಕ್ಷ್ಮವಾದ ಜಾಗದಲ್ಲಿ ಹುಟ್ಟಿರುವ ಕತೆ ಬೇರ ಎನ್ನುವುದು ಯಶ್ ರವರ ಅಭಿಪ್ರಾಯ.ಜಾತಿ,ಮತ,ಧರ್ಮ, ಮಾನವೀಯತೆ, ಸಂಬಂಧಗಳ ಬಗ್ಗೆ ಹೆಚ್ಚು ಗಮನ ಸೆಳೆಯುವಂತಹ ಚಿತ್ರ ಬೇರ.
ಸಲೀಂ ಎನ್ನುವ ಪಾತ್ರದಲ್ಲಿ ಯಶ್ ಶೆಟ್ಟಿ ಅವರು ಬೇರ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ನೈಜ ಜೀವನದಲ್ಲಿ ನಡೆಯುವ ಆಗು ಹೋಗುಗಳನ್ನು ನಾವು ಈ ಚಿತ್ರದ ಮೂಲಕ ನೋಡಲು ಸಿಗುತ್ತದೆ. ನಮ್ಮ ಮನಸ್ಥಿತಿ ಹೇಗೆ ಕಾಲಕ್ಕೆ ತಕ್ಕ ಹಾಗೆ ಬದಲಾಗುತ್ತದೆ ಎನ್ನುವುದನ್ನು ಈ ಚಿತ್ರದಲ್ಲಿ ಕಾಣಬಹುದು ಎಂದು ಯಶ್ ಶೆಟ್ಟಿ “ಬೇರ” ಚಿತ್ರದ ಬಗ್ಗೆ ತಿಳಿಸಿದ್ದಾರೆ.