ಬೆಳ್ತಂಗಡಿ: ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆಂದು ಹರೀಶ್ ಪೂಂಜರ ವಿರುದ್ದ ಚುನಾವಣಾಧಿಕಾರಿಗೆ ಶೇಖರ್ ಲಾಯಿಲ ದೂರು
ಬೆಳ್ತಂಗಡಿ: ಕಾಶಿಪಟ್ನ ಗ್ರಾಮ ವಿಕಾಸ ಹಬ್ಬದ ಹೆಸರಿನಲ್ಲಿ ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆಂದು ಶೇಖರ್ ಲಾಯಿಲ ಬೆಳ್ತಂಗಡಿ ಚುನಾವಣಾಧಿಕಾರಿಗಳಿಗೆ ದೂರನ್ನು ನೀಡಿದ್ದಾರೆ.
ಬೆಳ್ತಂಗಡಿ ತಾಲೂಕಿನ ಕಾಶಿಪಟ್ನ ಗ್ರಾಮದಲ್ಲಿ ಕಾಶಿಪಟ್ನ ಬಿಜೆಪಿ ಗ್ರಾಮ ವಿಕಾಸ ಹಬ್ಬವನ್ನು ಮಾ.30 ರಂದು ಸಂಜೆ 7 ಗಂಟೆಗೆ ಬಲಿಂಜೆ ಎಂಬಲ್ಲಿ ನಡೆಸಿದ್ದು, ರಾತ್ರಿ ಸುಮಾರು 12.25 ರ ತನಕ ಸಭಾ ಕಾರ್ಯಕ್ರಮ ನಡೆದಿದೆ. ಈ ಕಾರ್ಯಕ್ರಮದಲ್ಲಿ ಊಟೋಪಚಾರವನ್ನು ಮತದಾರರಿಗೆ ಹಂಚಲಾಗಿದೆ. ಈ ಕಾರ್ಯಕ್ರಮದಲ್ಲಿ ಶಾಸಕ ಹರೀಶ್ ಪೂಂಜ ಸೇರಿದಂತೆ ಬಿಜೆಪಿ ಪಕ್ಷದ ಪ್ರಮುಖ ನಾಯಕರು ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಮತದಾರರನ್ನು ಸೆಳೆಯುವ ಉದ್ದೇಶದಿಂದ ಊಟೋಪಚಾರವನ್ನು ಹಂಚಲಾಗಿದೆ. ರಾತ್ರಿ 10 ಗಂಟೆ ತನಕ ಧ್ವನಿ ವರ್ಧಕ ಪರವಣಿಗೆ ಪಡೆದು ಮಧ್ಯ ರಾತ್ರಿ 12.25 ರ ತನಕ ಕಾನೂನು ಬಾಹಿರವಾಗಿ ಸಭಾ ಕಾರ್ಯಕ್ರಮ ನಡೆಸಲಾಗಿದೆ ಇದು ಚುನಾವಣಾ ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ. ಕಾರ್ಯ ಕ್ರಮದ ಆಯೋಜಕರನ್ನು, ಭಾಗವಹಿಸಿದ ಬಿಜೆಪಿ ಪಕ್ಷದ ನಾಯಕರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಶೇಖರ್ ಲಾಯಿಲ ಮನವಿಯನ್ನು ಮಾಡಿದ್ದಾರೆ.