ಮರ್ಹೂಮ್ ಹೈದರ್ ನಿರ್ಸಾಲ್ ಚಾರಿಟೇಬಲ್ ಟ್ರಸ್ಟ್ ಬೆಳ್ತಂಗಡಿ ಇದರ ವತಿಯಿಂದ ಆಂಬುಲೆನ್ಸ್ ಲೋಕಾರ್ಪಣೆ ಕಾರ್ಯಕ್ರಮ ಮತ್ತು ಬೃಹತ್ ರಕ್ತದಾನ ಶಿಬಿರ
ಬೆಳ್ತಂಗಡಿ : ಮರ್ಹೂಮ್ ಹೈದರ್ ನಿರ್ಸಾಲ್ ಚಾರಿಟೇಬಲ್ ಟ್ರಸ್ಟ್ ಬೆಳ್ತಂಗಡಿ ಇದರ ಉದ್ಘಾಟನಾ ಸಮಾರಂಭವು ಮಾ.12 ರಂದು ಬೆಳ್ತಂಗಡಿ ಜಮೀಯತುಲ್ ಫಲಾಹ್ ಸಭಾಭವನದಲ್ಲಿ ಬಹು ಜನಾಬ್ ಅಸ್ಸಯ್ಯದ್ ಕೆ.ಪಿ.ಎಸ್. ಝೈನುಲ್ ಆಬಿದೀನ್ ಜಮಾಲುಲ್ಲೈಲಿ ತಂಙಳ್ ಕಾಜೂರು ದುವಾ ಆಶೀರ್ವಾದದೊಂದಿಗೆ ನೆರವೇರಿಸಿದರು.
ಮರ್ಹೂಮ್ ಹೈದರ್ ನಿರ್ಸಾಲ್ ಚಾರಿಟೇಬಲ್ ಟ್ರಸ್ಟ್ ಬೆಳ್ತಂಗಡಿ ಇದರ ಆಂಬುಲೆನ್ಸ್ ಲೋಕಾರ್ಪಣೆಯನ್ನು ಎಸ್ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ಅಲ್ಫೋನ್ಸ್ ಫ್ರಾಂಕೋ ನೆರವೇರಿಸಿದರು.
ರಕ್ತನಿಧಿ ಕೆ.ಎಂ.ಸಿ ಆಸ್ಪತ್ರೆ ಮಂಗಳೂರು ಇವರ ಸಹಭಾಗಿತ್ವದಲ್ಲಿ ಬೃಹತ್ ರಕ್ತದಾನ ಶಿಬಿರವು ಬೆಳ್ತಂಗಡಿಯಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಚಾಲಕರಾದ ನಿಜಾಮ್ ಗೇರುಕಟ್ಟೆ ವಹಿಸಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.
ವೇದಿಕೆಯಲ್ಲಿ ಮುಸ್ಲಿಂ ಒಕ್ಕೂಟ ಬೆಳ್ತಂಗಡಿ ಇದರ ಅಧ್ಯಕ್ಷರಾದ ಬಿ.ಎ ನಝೀರ್, ದಾರುಸ್ಸಲಾಂ ಎಜುಕೇಶನ್ ಸೆಂಟರ್ ಬೆಳ್ತಂಗಡಿ ಇದರ ಕೋಶಾಧಿಕಾರಿ ರಝಕ್ ಕನ್ನಡಿ ಕಟ್ಟೆ, ಶಿರ್ಲಾಲ್ ಜುಮ್ಮಾ ಮಸೀದಿ ಅಧ್ಯಕ್ಷರಾದ ರಝಕ್ ಶಿರ್ಲಾಲ್, ಪತ್ರಕರ್ತ ಅಶ್ರಫ್ ಆಲಿ ಕುಂಹಿ, ಮದ್ದಡ್ಕ ಹೆಲ್ಪ್ ಲೈನ್ & ಚಾರಿಟೇಬಲ್ ಟ್ರಸ್ಟ್ ಫೌಂಡೇಶನ್ ಸದಸ್ಯ ರಿಯಾಝ್ ಸಬರಬೈಲು, ಯುವ ನ್ಯಾಯವಾದಿ ನವಾಝ್ ಕಕ್ಕಿಂಜೆ, ಸಂಜಯ್ ಗ್ಲೋಬಲ್ ಫೌಂಡೇಶನ್ ಅಧ್ಯಕ್ಷರಾದ ಇಸ್ಮಾಯಿಲ್ ಐ ಬಿ, ಎಸ್ಡಿಪಿಐ ಮುಖಂಡರುಗಳಾದ ಅಕ್ಬರ್ ಬೆಳ್ತಂಗಡಿ, ನವಾಝ್ ಕಟ್ಟೆ, ನಿಸಾರ್ ಕುದ್ರಡ್ಕ, ಇನಾಸ್ ರೋಡ್ರಿಗಸ್, ಅಬ್ದುಲ್ ಅಝೀಝ್ ಝುಹರಿ, ಫಝಲ್ ರಹಮಾನ್ ಉಜಿರೆ, ಅಶ್ರಫ್ ಕಟ್ಟೆ, ಸಹಲ್ ನೀರ್ಸಲ್, ಸಲೀಂ ಮುರ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಈ ರಕ್ತದಾನ ಶಿಬಿರದಲ್ಲಿ ದಾನಿಗಳಿಂದ ಒಟ್ಟು 53 ಯುನಿಟ್ ರಕ್ತವನ್ನು ಸಂಗ್ರಹಿಸಲಾಯಿತು.