ಹಿಂದೂ ರಾಷ್ಟದ ಸ್ಥಾಪನೆಗಾಗಿ ಮಂಗಳೂರಿನ ಹಿಂದೂ ರಾಷ್ಟಜಾಗೃತಿ ಸಭೆಗೆ ಚಾಲನೆ
ಮಂಗಳೂರು: ಮಂಗಳೂರಿನ ಕದ್ರಿ ಮೈದಾನದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಹಿಂದೂ ರಾಷ್ಟಜಾಗೃತಿ ಸಭೆಯು ಮಾ.12 ರಂದು ಮಂಗಳೂರಿನ ಕದ್ರಿ ಮೈದಾನದಲ್ಲಿ ಶಂಖನಾದ, ದೀಪ ಪ್ರಜ್ವಲನೆ ಹಾಗೂ ವೇದ ಮಂತ್ರ ಘೋಷದೊಂದಿಗೆ ಕಾರ್ಯಕ್ರಮದ ಶುಭಾರಂಭ ಮಾಡಲಾಯಿತು.
ಈ ಸಭೆಯ ವಕ್ತಾರರಾಗಿ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಾವಾದಿಗಳಾದ ಅಮೃತೇಶ್ ಎನ್. ಪಿ., ಸಾಮಾಜಿಕ ಹೋರಾಟಗಾರರಾದ ದಿನೇಶ್ ಜೈನ್, ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ಸಮನ್ವಯಕರಾದ ಗುರುಪ್ರಸಾದ ಗೌಡ ಹಾಗೂ ಸನಾತನ ಸಂಸ್ಥೆಯ ಲಕ್ಷ್ಮೀ ಪೈ ಉಪಸ್ಥಿತರಿದ್ದರು.
ಸಭೆಯಲ್ಲಿ ಸನಾತನ ಸಂಸ್ಥೆಯ ಸಂತರಾದ ಪೂ. ರಮಾನಂದ ಗೌಡ, ಪೂ. ವಿನಾಯಕ ಕರ್ವೆ ಹಾಗೂ ಪೂ. ರಾಧಾ ಪ್ರಭು ಹಾಗೂ ಬಾಲಸಂತರಾದ ಪೂ. ಭಾರ್ಗವರಾಮ, ಇವರ ದಿವ್ಯ ಉಪಸ್ಥಿತಿಯಿತ್ತು. ಸಭೆಯಲ್ಲಿ ಸುಮಾರು 500 ಜನರು ಉಪಸ್ಥಿತರಿದ್ದರು.