ಆರಿಕೋಡಿ ದೇವಸ್ಥಾನದ ಪವಾಡ: ವೈದ್ಯಲೋಕ ಕೈಬಿಟ್ಟ ಪ್ರಕರಣ ಚಾಮುಂಡೇಶ್ವರಿಯಿಂದ ನಿವಾರಣೆ
ಆರಿಕೋಡಿ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕನ್ಯಾನ ಗ್ರಾಮದ ಗೌರಿನಿಲಯ ನಿವಾಸಿ 48 ವರ್ಷದ ವಾಸುದೇವಾ ನಾಯಕ್ ಅವರು ವ್ಯವಹಾರವನ್ನು ಮಾಡುತ್ತಿದ್ದರು. ಇವರಿಗೆ ಆರೋಗ್ಯದಲ್ಲಿ ಎಲ್ಲವೂ ಸರಿಯಿತ್ತು ಆದ್ರೆ ಇವರಿಗೆ ಏಕಾಏಕಿ ಹೃದಯ ಸಂಬಂದ ಸಮಸ್ಯೆಯಿಂದ ಬಳಲುತ್ತಿದ್ದು ಕಳೆದ ನವೆಂಬರ್ 18 ರಂದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪ್ರಾರಂಭವಾಗಿತ್ತು. ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಮಾಡಲಾಗಿತ್ತು ಈ ಚಿಕಿತ್ಸೆ ನಡೆದ ನಂತರ ವಾಸು ಅವರಿಗೆ ಮಾತನಾಡಲು ಬರುತ್ತಿರಲ್ಲಿಲ್ಲ ಆಸ್ಪತ್ರೆಯಲ್ಲಿ ವೈದ್ಯರು ನಿಮಗೆ ಇನ್ನೂ ಮುಂದೆ ಮಾತಾನಾಡಲು ಅಸಾಧ್ಯ ಎಂದು ಹೇಳಿದರು.
ಇದರಿಂದ ಗಾಬರಿಗೊಂಡ ಮನೆಯವರು ಸ್ನೇಹಿತರ ಮಾತಿನಂತೆ ಬೆಳ್ತಂಗಡಿ ತಾಲೂಕಿನ ಬೆಳಾಲುನಲ್ಲಿರುವ ಆರಿಕೊಡಿ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಬಂದು ಹರಕೆಯನ್ನು ಹೇಳುತ್ತಾರೆ ವಾಸುರವರಿಗೆ ಮಾತು ಬಂದಲ್ಲಿ ವಜ್ರದ ಮುಗುತ್ತಿ ಕೊಡುತ್ತೇನೆ ಎಂದು ಹರಕೆ ಹೇಳುತ್ತಾರೆ ಅದರಂತೆ ಹರಕೆ ಹೇಳಿದ ಒಂದೇ ವಾರದಲ್ಲಿ ಮಾತು ಬಂದಿದೆ.
ಕಷ್ಟ ಅಂತ ಬಂದ್ರೆ ಚಾಮುಂಡೇಶ್ವರಿ ಎಲ್ಲವನ್ನೂ ನಿವಾರಿಸುತ್ತಾಳೆ
ವೈದ್ಯಲೋಕಕ್ಕೆ ಅಚ್ಚರಿ ಮುಡಿಸಿದ ಚಾಮುಂಡೇಶ್ವರಿ ದೇವಿ
ಇನ್ನೂ ಆರಿಕೋಡಿ ದೇವಸ್ಥಾನದ ವಿಸ್ಮಯ ಕಂಡು ಮರುದಿನವೇ ಆರಿಕೊಡಿ ದೇವಸ್ಥಾನಕ್ಕೆ ಬಂದು ಪೂಜೆ ಸಲ್ಲಿಸಿ ದೇವರಿಗೆ ವಜ್ರದ ಮುಗುತ್ತಿ ನೀಡಿ ಹರಕೆ ತಿರಿಸಿದ್ದಾರೆ. ಒಟ್ಟಿನಲ್ಲಿ ಆ ರಿಕೊಡಿ ದೇವಸ್ಥಾನದಲ್ಲಿ ವೈದ್ಯರು ಕೈಬಿಟ್ಟ ಹಲವು ರೋಗಿಗಳಿಗೆ ಚಾಮುಂಡೇಶ್ವರಿ ದೇವಿ ಅಚ್ಚರಿ ಮೂಡಿಸಿ ಸಮಸ್ಯೆಯನ್ನು ನಿವಾರಿಸಿ ಮರುಜೀವ ನೀಡಿದ್ದಾಳೆ.