• November 22, 2024

ಪೋಷಕರಿಗೊಂದು ಎಚ್ಚರ!! ಮಕ್ಕಳಲ್ಲಿ ಜ್ವರ ಕಾಣಿಸಿಕೊಂಡು, ಮೈ ಬಣ್ಣ ನೀಲಿ ಬಣ್ಣಕ್ಕೆ ತಿರುಗಿದ್ರೆ ನಿರ್ಲಕ್ಷ್ಯ ಬೇಡ. ಶುರುವಾಗಿದೆ ಬ್ಲೂ ಫೀವರ್ ಭೀತಿ!! ಇದರ ಲಕ್ಷಣಗಳೇನು?

 ಪೋಷಕರಿಗೊಂದು ಎಚ್ಚರ!! ಮಕ್ಕಳಲ್ಲಿ ಜ್ವರ ಕಾಣಿಸಿಕೊಂಡು, ಮೈ ಬಣ್ಣ ನೀಲಿ ಬಣ್ಣಕ್ಕೆ ತಿರುಗಿದ್ರೆ ನಿರ್ಲಕ್ಷ್ಯ ಬೇಡ. ಶುರುವಾಗಿದೆ ಬ್ಲೂ ಫೀವರ್ ಭೀತಿ!! ಇದರ ಲಕ್ಷಣಗಳೇನು?

 

ಬೆಂಗಳೂರು: ಹವಾಮಾನ ಬದಲಾಗುತ್ತಿದ್ದಂತೆ ಮನುಷ್ಯರ ಮೇಲೂ ಕೆಟ್ಟ ಪರಿಣಾಮಗಳೂ ಬೀರುತ್ತಲೇ ಇರುತ್ತದೆ. ಇತ್ತೀಚೆಗೆ ಹವಾಮಾನ ಬದಲಾಗುತ್ತಿದ್ದಂತೆ ಜನರಲ್ಲಿ ಆರೋಗ್ಯದ ಸಮಸ್ಯೆಯು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವುದು ಆತಂಕಕಾರಿ ವಿಚಾರ. ಇತ್ತೀಚಿನ ಹವಾಮಾನಕ್ಕೆ ಜ್ವರ, ಶೀತ, ತಲೆನೋವು ಕಾಣಿಸಿಕೊಂಡರೆ ನಿರ್ಲಕ್ಷ್ಯ ಬೇಡವೇ ಬೇಡ. ಅದರಲ್ಲೂ ಮಕ್ಕಳಲ್ಲಿ ಉಂಟಾಗುವ ಆರೋಗ್ಯ ಸಮಸ್ಯೆ ಪೋಷಕರಲ್ಲಿ ಆತಂಕ ಮನೆಮಾಡಿದೆ.

ಹೌದು ಮಕ್ಕಳಲ್ಲಿ ಜ್ವರ ಕಾಣಿಸಿಕೊಂಡು, ಮೈ ಬಣ್ಣ ನೀಲಿ ಬಣ್ಣಕ್ಕೆ ತಿರುಗಿದ್ರೆ ನಿರ್ಲಕ್ಷ್ಯ ಮಾಡಬೇಡಿ. ಏಕೆಂದರೆ ರಾಜಧಾನಿಯಲ್ಲಿ ಶುರುವಾಗಿದೆ ಆತಂಕಕಾರಿ ಬ್ಲೂ ಫೀವರ್ ಭೀತಿ

ಏನಿದು ಬ್ಲೂ ಫೀವರ್ ಭೀತಿ?

ಶೀತ ಕೆಮ್ಮು ಎಂದು ಆಸ್ಪತ್ರೆಯತ್ತ ಮುಖ ಮಾಡುತ್ತಿರುವ ಮಕ್ಕಳು ಬೆಂಗಳೂರಿನಲ್ಲಿ ಜಾಸ್ತಿಯಾಗಿದ್ದಾರೆ. ಸೈಕ್ಲೋನ್ ಎಫೆಕ್ಟ್ ನಿಂದ ಮಾಮೂಲಿ ಶೀತ ಜ್ವರ ಭಾದೆ ಕಾಣಿಸಿಕೊಂಡಿದೆ ಎಂದು ಜನ ಯಾಮಾರುತ್ತಿದ್ದಾರೆ. ಬಿಡದ ಮಳೆಯಿಂದ ಮಕ್ಕಳಲ್ಲಿ‌ ವೈರಲ್ ಇನ್ಫೆಕ್ಷನ್ ಇರಬಹುದು ಎಂದು ಸುಮ್ಮನಾಗುತ್ತಿದ್ದಾರೆ. ಆದರೆ ವೈರಲ್ ಇನ್ಫೆಕ್ಷನ್ ಮಧ್ಯೆ ಮತ್ತೊಂದು ಹೊಸ ರೋಗ ಕಾಲಿಟ್ಟಿದ್ದು, ಇದರಿಂದ ಪೋಷಕರು ಕಂಗಾಲಾಗಿದ್ದಾರೆ.

ರಾಜಧಾನಿಯಲ್ಲಿ ಮಕ್ಕಳಲ್ಲಿ ಕಾಣಿಸ್ತಿದೆ ಬ್ಲೂ ಫೀವರ್. ರಾಕಿ ಮೌಂಟೇನ್ ಸ್ಪಾಟೆಡ್ ಫೀವರ್ ಎಂದು ಕರೆಸಿಕೊಳ್ಳುವ ಈ ಬ್ಲೂ ಫೀವರ್ ಅಮೆರಿಕಾ, ಕೆನಾಡದಲ್ಲಿ ಹೆಚ್ಚು ಪತ್ತೆಯಾಗುತ್ತದೆ. ಪ್ರಾಣಿಗಳ ಉಣ್ಣೆಯಿಂದ ಇದು ಹರಡುವ ಸಾಧ್ಯತೆಯಿರುತ್ತದೆ. ನಾಯಿಗಳ ಟಿಕ್ ಫೀವರ್​​ನಿಂದ ಸೋಂಕು ಹರಡುವ ಸಾಧ್ಯತೆಯಿದೆ.

ಬ್ಲೂ ಫೀವರ್ ಗುಣಲಕ್ಷಣಗಳು:

  1. ತಲೆ ನೋವು 2. ಜ್ವರ 3. ಸುಸ್ತು 4. ಶೀತ 5. ಕಣ್ಣು ಕೆಂಪು 6. ಮೈ ಕೈ ನೋವು 7. ಮಂಡಿ ನೋವು ನಂತರ, ಇದೇ ಬ್ಲೂ ಫೀವರ್ ಗಂಭೀರ ಸ್ವರೂಪ ಪಡೆದಾಗ ಮೈ, ಉಗುರು ನೀಲಿ ಬಣ್ಣಕ್ಕೆ ತಿರುಗುತ್ತದೆ.

Related post

Leave a Reply

Your email address will not be published. Required fields are marked *

error: Content is protected !!