ಶಾಲೆಗೆ ಹೋಗು ಎಂದಿದ್ದಕ್ಕೆ ತಾಯಿಯ ಸೀರೆಯಲ್ಲೇ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಪುಟ್ಟ ಬಾಲಕ
ಜೀವನದ ಬಂಡಿಯಲ್ಲಿ ಬಲು ದೂರ ಪ್ರಯಾಣ ಮಾಡಬೇಕಿದ್ದ ಬಾಲಕನೂರ್ವ ಆತ್ಮಹತ್ಯೆಗೆ ಶರಣಾಗಿ ಬಾರದ ಲೋಕಕ್ಕೆ ತೆರಳಿದ ಘಟನೆ ನಡೆದಿದೆ.
7ನೇ ತರಗತಿ ವಿದ್ಯಾರ್ಥಿ ಇನ್ನೂ ಪ್ರಪಂಚದ ಆಗುಹೋಗುಗಳ ಅರಿವೇ ಇಲ್ಲದ ಬಾಲಕ ಕೇವಲ ಅಮ್ಮನ ಬೈಗಳವನ್ನೇ ಗಂಭೀರವಾಗಿ ಪರಿಗಣಿಸಿ ದುಡುಕಿನ ನಿರ್ಧಾರ ಕೈಗೊಂಡಿರುವ ಘಟನೆ ನಡೆದಿದೆ.
ಮಕ್ಕಳು ತಪ್ಪು ಮಾಡಿದಾಗ ಬೈದು ಹೊಡೆದು ತಿದ್ದಿ ಸನ್ಮಾರ್ಗದಲ್ಲಿ ನಡೆಯಲು ಪ್ರೇರೇಪಿಸುವುದು ಪ್ರತಿ ಪೋಷಕರ ಜವಾಬ್ದಾರಿ ಆದರೆ ಕೆಲವೊಮ್ಮೆ ಮಕ್ಕಳ ಸೂಕ್ಷ್ಮ ಮನಸ್ಥಿತಿ ಯಾವುದನ್ನು ಪರಮಶೆ ಮಾಡಲು ಸಾಧ್ಯವಾಗದೆ ಸಣ್ಣ ಸಣ್ಣ ವಿಚಾರಕ್ಕೂ ಸಾಯುವ ಮಟ್ಟಕ್ಕೆ ಇಳಿಯುತ್ತಿರುವುದು ಶೋಚನೀಯ.
ಮಗನನ್ನು ಸರಿದಾರಿಗೆ ತರಲು ತಾಯಿ ಬೈದ ಪ್ರಕರಣವೇ ತಾಯಿಗೆ ಮುಳುವಾಗಿ ಪರಿಣಮಿಸಿದ ಘಟನೆ ನಡೆದಿದೆ.
ಹೌದು ಬೆಂಗಳೂರು ಉತ್ತರ ತಾಲೂಕಿನ ಕಡಬಗೆರೆ ಗ್ರಾಮದ ಮಂಜುನಾಥ್ ಹಾಗೂ ಸವಿತಾ ದಂಪತಿಯ 12 ವರ್ಷದ ಪುತ್ರ ಪೃಥ್ವಿರಾಜ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಗ್ರಾಮದ ಸರ್ಕಾರಿ ಶಾಲೆಯಲ್ಲಿ 7ನೇ ತರಗತಿ ಓದುತ್ತಿದ್ದ ಬಾಲಕ ಶಾಲೆಗೆ ಹೋಗಲು ನಿತ್ಯ ಹಠ ಹಿಡಿದು ಕೂರುತ್ತಿದ್ದ ಇದರ ಜೊತೆಗೆ ಶಿಕ್ಷಕರು ಕೂಡ ಪೋಷಕರಿಗೆ ಕಂಪ್ಲೇಂಟ್ ಮಾಡಿದ ಹಿನ್ನೆಲೆಯಲ್ಲಿ ಮಗನಿಗೆ ಶಾಲೆಗೆ ಹೋಗಲು ಒತ್ತಾಯಿಸಿದ್ದು ಆದರೆ ಅದಕ್ಕೆ ಬಾಲಕ ಕ್ಯಾರೇ ಇಲ್ಲದೆ ಇದ್ದಾಗ ತಾಯಿ ಹೊಡೆದು ಬುದ್ದಿ ಹೇಳಿದ್ದಾರೆ. ಆದರೆ ಇಷ್ಟಕ್ಕೆ ಕೋಪಗೊಂಡ ಪೃಥ್ವಿ ಮನೆಯಲ್ಲಿ ಯಾರು ಇಲ್ಲದ ಸಮಯ ನೋಡಿಕೊಂಡ ಪೃಥ್ವಿರಾಜ್ ಅಮ್ಮನ ಸೀರೆಯಿಂದಲೇ ಮನೆಯಲ್ಲಿರೋ ಸೀಟ್ ಕಂಬಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಮನೆಯ ಜವಾಬ್ದಾರಿಯನ್ನು ಹೆಗಲೇರಿಸಿಕೊಂಡು ಮಗನ ನ್ನು ಸಾಕುತ್ತಿದ್ದ ತಾಯಿ ಸವಿತಾ ನೂರಾರು ಕನಸು ಹೊತ್ತು ಮಗ ಮುಂದೆ ಓದಿ ಮನೆ ಜವಾಬ್ದಾರಿ ಹೊರುವ ಆಸೆ ಹೊಂದಿದ್ದರು. ಇದರ ನಡುವೆ ತನ್ನ ಚಿಕ್ಕಮ್ಮನಿಗೆ ನಿತ್ಯ ಫೋನ್ ಮಾಡಿ ನಿಮ್ಮ ಮನೆಗೆ ಕರೆದುಕೊಂಡು ಹೋಗಿ ಅಂತ ಕೇಳುತ್ತಿದ್ದ ಆದರೆ ಕಳೆದ ಎರಡು ದಿನದಿಂದ ಅವರಿಗೂ ಫೋನ್ ಕೂಡ ಮಾಡಿರಲಿಲ್ಲ ಇದರ ಬೆನ್ನಲ್ಲೇ ಸುಸೈಡ್ ಮಾಡಿಕೊಂಡು ಉದ್ಯೋಗ ಭವಿಷ್ಯ ರೂಪಿಸಬೇಕಿದ್ದ ಈತ ಇಹಲೋಕಕ್ಕೆ ವಿದಾಯ ಹೇಳಿದ್ದು ವಿಪರ್ಯಾಸ.